ಮಧ್ವಚಾರ್ಯರ ಜೀವ ಮತ್ತು ಪರಮಾತ್ಮರು ಬೇರೆ ಬೇರೆ ಎಂಬುದು “ದ್ವೈತ ಸಿದ್ಧಾಂತ”

0
1087

ಮಧ್ವಚಾರ್ಯರು ಕರ್ನಾಟಕದ ಉಡುಪಿ ಹತ್ತಿರದ ಪಾಜಕ ಗ್ರಾಮದಲ್ಲಿ ಜನಿಸಿದರು. ಇವರು ಮಧ್ವಗೇಹಭಟ್ಟ ಮತ್ತು ವೇದವತಿಯರ ಮಗ: ವಿಷ್ಣು ಇವರ ಆರಾಧ್ಯ ದೈವ. ಮಧ್ವಚಾರ್ಯರು ಬಾಲಕರಾಗಿದ್ದಾಗಲೇ ಅಪ್ರತಿಮ ಪಾಂಡಿತ್ಯವನ್ನು ತೋರಿದ್ದರೆಂದು ಹೇಳಲಾಗಿದೆ. ಗುರುಗಾಳದ ಅಚ್ಯುತಪ್ರೇಕ್ಷಕರಲ್ಲಿ ವೇದ ಮತ್ತು ಉಪನಿಷತ್ತುಗಳ ಅಭ್ಯಾಸವನ್ನು ಮಾಡಿದರು. ಇದೇ ಗುರುಗಳು ವಿಧ್ಯಾಭ್ಯಾಸ ಮಾಡುತ್ತಿರುವಾಗಲೇ ಮಧ್ವಚಾರ್ಯರು ಸ್ವತಂತ್ರವಾಗಿ ತಮ್ಮ ಜ್ಞಾನ ಶಕ್ತಿಯನ್ನು ಬೆಳೆಸಿಕೊಂಡರು ಹಾಗೂ ಧರ್ಮ ಶಾಸ್ತ್ರಗಳ ವಾದದಲ್ಲಿ ತಮ್ಮ ಗುರುಗಳನ್ನೇ ಸೋಲಿಸಿದರು. ಇವರು “ದ್ವೈತ ಸಿದ್ಧಾಂತ”ವನ್ನು ಪ್ರತಿಪಾದಿಸಿದರು. ಜೀವ ಮತ್ತು ಪರಮಾತ್ಮರು ಬೇರೆ ಬೇರೆ ಎಂಬುದು ದ್ವೈತದ ಅರ್ಥ.

ಮಧ್ವಾಚಾರ್ಯರು ತಮ್ಮ ಸಿದ್ಧಾಂತದ ಪ್ರತಿಪಾದನೆಗಾಗಿ ತೀರ್ಥಯಾತ್ರೆ ಕೈಗೊಂಡು ಹಲವಾರು ಕಡೆಗಳಲ್ಲಿ ಚರ್ಚೆಯಲ್ಲಿ ಭಾಗವಹಿಸಿದರು. ಹಡಗಿನ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಹಾಗೂ ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟ ಮಠಗಳನ್ನು ಸ್ಥಾಪಿಸಿದರು.

ಅಷ್ಠಮಠಗಳು: ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣೆಯೂರ ಮತ್ತು ಪೇಜಾವರ ಮಠಗಳು.

ಮಧ್ವಾಚಾರ್ಯರ ಪ್ರಕಾರ ಜಗತ್ತು ಮಾಯೆಯಲ್ಲ. ಅದು ಪರಮಾತ್ಮನಷ್ಟೇ ಸತ್ಯವಾಗಿದೆ. ಇವುಗಳಲ್ಲಿ ಈಶ್ವರ ಮಾತ್ರ ಸ್ವತಂತ್ರ, ಉಳಿದ ಜಗತ್ತು ಮಿಥ್ಯ (ಭ್ರಮೆ) ರೂಪವಾದದ್ದು. ಪರಮಾತ್ಮನಿಗೂ ಜೀವಿಗಳಿಗೂ ಸ್ವಾಮಿ – ಸೇವಕ ಸಂಬಂಧವಿದೆ, ವಿಷ್ಣು ಅಥವಾ ಮುಕ್ತಿ ಸಾಧ್ಯವೆಂದು ತಿಳಿಸಿದರು.

ಮಧ್ವಚಾರ್ಯರ ಕೃತಿಗಳು: ಗೀತಾಭ್ಯಸ.ಗೀತಾ ತಾತ್ವರ್ಯ ನಿರ್ಣಯ, ಮಹಾಭಾರತ ತಾತ್ಪರ್ಯ ನಿರ್ಣಯ, ವಿಷ್ಣು ತತ್ವ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ, ಸೂತ್ರ ಭಾಷ್ಯ, ಮಾಯಾವಾದ ಖಂಡನಾ ಮುಂತಾದವು.

ಮಧ್ವಚಾರ್ಯರ ಸಿದ್ಧಾಂತವನ್ನು ಪ್ರಚಾರ ಮಾಡಿದ ಅವರ ಮುಖ್ಯ ಶಿಷ್ಯರೆಂದರೆ ಪದ್ಮನಾಭ ತೀರ್ಥರು, ನರಹರಿ ತೀರ್ಥರು, ವಿಜಯೇಂದ್ರ ತೀರ್ಥರು ಹಾಗೂ ವಾದಿರಾಜ ತೀರ್ಥರು.