ದ್ವೈತ ಸಿದ್ಧಾಂತ ಪ್ರತಿಪಾದಕ ಕರ್ನಾಟಕದ ಶ್ರೀಮಧ್ವಾಚಾರ್ಯ

0
1678

ನಮ್ಮ ನಾಡಿನ ಸನಾತನ ಧರ್ಮ ಮತ್ತು ಸಂಸ್ಕೃತಿ ಎತ್ತಿ ಹಿಡಿ ದು ಅದನ್ನು ಪ್ರಚಾರ ಮಾಡಿದ ಮಹಾ ಮಹಿಮರೆಂದರೆ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾ ಚಾರ್ಯರು. ಶಂಕರಾ ಚಾರ್ಯರು ಅದ್ವೈತ ಸಿದ್ಧಾಂತ, ರಾಮಾನು ಜಾಚಾ ರ್ಯರು ವಿಶಿಷ್ಟಾದ್ವೈತ ಮತ್ತು ಮಧ್ವಾ ಚಾರ್ಯರು ದ್ವೈತ ಸಿದ್ಧಾಂತವನ್ನು ಪ್ರತಿ ಪಾದಿಸಿದರು. ಕೃತ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಭಗವಂತನೇ ನೇರ ವಾಗಿ ಅವತರಿಸಿ ಧರ್ಮ ಸ್ಥಾಪನೆ ಮಾಡಿದನು.

Shri Madhvacharya.jpgಈ ಕಲಿಯುಗದಲ್ಲಿ ತನ್ನ ಅಂಶಗಳಿಂದ ಮಹಾಮಹಿಮರನ್ನು ಸೃಷ್ಟಿಸಿ ಅವರ ಮೂಲಕ ಲೋಕಕಲ್ಯಾಣ ಮಾಡಿಸಿದನು. ವಾಯುದೇವನು ಭಗವಂತನ ಆಜ್ಞೆ ಯಂತೆ ಯುಗಯುಗಗಳಲ್ಲೂ ಅವತರಿ ಸಿದ್ದು, ತ್ರೇತಾಯುಗದಲ್ಲಿ ಹನುಮಂತ, ದ್ವಾಪರ ಯುಗದಲ್ಲಿ ಭೀಮಸೇನ, ಕಲಿ ಯುಗದಲ್ಲಿ ಮಧ್ವಾ ಚಾರ್ಯರ ರೂಪ ದಲ್ಲಿ ಅವತರಿಸಿದ್ದ. ಆಚಾರ್ಯರ ದೇಹ ಮಾರುತಿ ಹಾಗೂ ಭೀಮಸೇನರ ಹಾಗಿತ್ತು. ಹನುಮಂತನ ಬುದ್ಧಿವಂತಿಕೆ ಮತ್ತು ಭೀಮಸೇನನ ಬಲ ಅವರಿಗಿತ್ತು ಎಂಬುದು ಅವರ ಬದುಕನ್ನೊಮ್ಮೆ ಅವ ಲೋಕಿಸಿದರೆ ತಿಳಿದು ಬರುತ್ತದೆ.ಉಡುಪಿಯಿಂದ ೧೨ ಕಿ.ಮೀ. ದೂರದ ಪಾಜಕ ಎಂಬ ಊರಿ ನಲ್ಲಿ ೧೨೩೮ರಲ್ಲಿ ಆಚಾರ್ಯರು ಜನಿ ಸಿದರು.

ಬಾಲ್ಯದಲ್ಲೇ ವೇದಗಳ ಸಾರ ವನ್ನು ಗ್ರಹಿಸಿದ್ದ ಈ ಬಾಲಕನಿಗೆ ವ್ಯಾಯಾಮ ಮತ್ತು ಕಸರತ್ತಿನಲ್ಲಿ ಆಸಕ್ತಿ. ಒಮ್ಮೆ ಭಗವಂತನು ಬಾಲಕನ ತಂದೆಯ ಕನಸಿನಲ್ಲಿ ಕಾಣಿಸಿಕೊಂಡು, ನಿನ್ನ ಮಗನಿಗೆ ಸಂನ್ಯಾಸ ಸ್ವೀಕರಿಸಲು ಅನುಮತಿ ನೀಡು. ಏಕೆಂದರೆ ಈ ಜಗತ್ತಿನಲ್ಲಿ ಅಜ್ಞಾನದ ಕತ್ತಲು ತುಂಬಿದೆ. ಅದನ್ನು ಹೋಗಲಾಡಿಸಲು ಈ ಬಾಲಕನೇ ಸರಿ ಎಂದನು.

ನಂತರ ಆ ಬಾಲಕನು ಸಂನ್ಯಾಸ ಸ್ವೀಕರಿಸಿ ಶ್ರೀಮಧ್ವಾಚಾರ್ಯರೆನಿಸಿದರು. ನಂತರ ಅವರು ದ್ವೈತ ಮತ ಸಿದ್ಧಾಂತವನ್ನು ಪ್ರತಿಪಾದಿಸಿದರು. ವಾದ-ವಿವಾದದಲ್ಲಿ ಪಂಡಿತರನ್ನು ಸೋಲಿಸಿದರು. ಜನರಲ್ಲಿದ್ದ ಮೂಢ ನಂಬಿಕೆಗಳನ್ನು ಹೋಗ ಲಾಡಿಸಿ ಭಗವಂತನ ಇರುವಿಕೆ ತೋರಿಸಿಕೊಟ್ಟರು. ಸೃಷ್ಟಿಕರ್ತ ಹರಿಯೇ ಪರಿಪೂರ್ಣ. ಅಣುಅಣುವಿನಲ್ಲಿ ಭಗವಂತನಿದ್ದಾನೆ ಎಂದು ತಿಳಿಸಿದರು. ಮೂಲದೇವರಾದ ಶ್ರೀಕೃಷ್ಣ ನನ್ನು ಪೂಜಿಸಿ ಅನೇಕ ಮಠ ಮಂದಿರ ಗಳನ್ನು ಸ್ಥಾಪಿಸಿದರು.

ಅದರಲ್ಲಿ ಮುಖ್ಯವಾದ ವುಗಳು ಉಡುಪಿ ಮಠ ಮತ್ತು ಅದರ ಅಷ್ಟಮಠ. ಈ ಮಠಗಳಿಗೆ ಅವರೇ ಪೀಠಾಧಿಪತಿಗಳನ್ನು ಸಹ ನೇಮಿಸಿ ಒಬ್ಬೊಬ್ಬರು ಎರಡು ವರ್ಷಗಳ ಕಾಲ ಶ್ರೀ ಕೃಷ್ಣನ ಪೂಜೆ ಹಾಗೂ ಧರ್ಮಪ್ರಚಾರ ಮಾಡುವ ಪದ್ಧತಿ ತಂದರು. ದ್ವೈತ ಸಿದ್ಧಾಂ ತಕ್ಕೆ ಸಂಬಂ ಧಿಸಿದ ಅನೇಕ ಪುಸ್ತಕಗಳನ್ನೂ ಬರೆದರು.ಸಂದೇಶ: ಶಾಸ್ತ್ರಗಳು ಏನು ಪ್ರತಿಪಾದಿಸುತ್ತವೆ ಎಂಬುದಕ್ಕಿಂತ ಅವು ಎಷ್ಟು ಅನುಭವ ನೀಡುತ್ತವೆ ಹಾಗೂ ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬ ಚಿಂತನೆ ಮುಖ್ಯ. ಅನುಭವ ಉತ್ತಮ ಪಾಠವಾದರೂ ಅನುಭವವಾದ ಮೇಲೆ ಅದು ಸತ್ಯ ವೆಂಬ ಹಠ ಬೇಡ. ಜ್ಞಾನಿಗಳ ಅನುಭವ ಮತ್ತು ಹೇಳಿಕೆಗಳಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರಲಿ. ಶ್ರದ್ಧೆಯೇ ಮುಕುತಿಗೆ ದಾರಿ.ಮಧ್ವಾ ರ್ಯರು ಕ್ರಿ.ಶ. ೧೩೧೭ರ ಮಾಘಮಾಸದ ಶುಕ್ಲಪಕ್ಷದ ನವಮಿ ದಿನ ದೇಹ ತ್ಯಾಗ ಮಾಡಿದರು. ಪ್ರತೀವರ್ಷ ಆ ದಿನವನ್ನು ಮಧ್ವ ನವಮಿ ಎಂದು ದ್ವೈತ ಮಠಗಳಲ್ಲಿ ಆಚರಿಸ ಲಾಗುತ್ತದೆ.