ವಿಚಿತ್ರ ಪ್ರೇಮ ಕತೆ; ಮದುವೆಯಾದ ಒಂದೇ ವಾರದಲ್ಲಿ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲೇ ನವವಿವಾಹಿತೆ ಪರಾರಿ..

0
496

ಜಗತ್ತಿನಲ್ಲಿ ಹಲವು ರೀತಿಯಲ್ಲಿ ಲವ್ ಆಗಿ ವಿಭಿನ್ನ ರೀತಿಯಲ್ಲಿ ಪ್ರೇಮಿಗಳು ಒಂದಾಗಿರುವ ಘಟನೆಗಳು ದಿನನಿತ್ಯವೂ ನಡೆಯುತ್ತಾನೆ ಇರುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಮದುವೆಯಾದ ಹುಡುಗಿ 15 ದಿನದಲ್ಲಿ ಮದುವೆ ಮಾಡಿಸಿದ ಪಂಡಿತನ ಜೊತೆಯಲ್ಲಿ ಓಡಿ ಹೋಗಿರುವ ಘಟನೆ ನಡೆದಿದ್ದು ಬಾರಿ ವೈರಲ್ ಆಗಿದೆ. ಈ ಸುದ್ದಿ ಒಂದೆಡೆ ಹಾಸ್ಯಕ್ಕೆ ಗುರಿಯಾದರೆ ಇನ್ನೊಂದೆಡೆ ಸಮಾಜದ ಪರಿಸ್ಥಿತಿ ಎಲ್ಲಿಗೆ ಬಂತು ಎನ್ನುವ ಅಳುಕು ಮೂಡಿಸುತ್ತಿದೆ. ಇದರ ಬಗ್ಗೆ ತಿಳಿದ ಜನರು ಯಾರನ್ನು ನಂಬುವ ಕಾಲವಲ್ಲ ಎನ್ನುತ್ತಿದ್ದಾರೆ. ಮದುವೆಗೆ ಬಂದು ಜೋಡಿಯನ್ನು ಒಂದು ಮಾಡಿಸುವ ಪುರೋಹಿತರು ಈಗ ವಧುವನ್ನೇ ಕರೆದುಕೊಂಡು ಓಡಿ ಹೋಗುವಂತ ಕಾಲ ಬಂದಿತ್ತಲ್ಲ ಎಂದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಹೌದು ಸಿರೋಜ್‍ನ ಟೋರಿ ಬ್ಯಾಗ್ರೋಡ್ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಇಡಿ ಊರಿಗೆ ಬೆಂಕಿ ಹಚ್ಚಿದೆ. ಈ ಘಟನೆಯಲ್ಲಿ ಮೊದಲ ಅಪರಾಧಿಯಾದ 21 ವರ್ಷದ ಯುವತಿಯ ಮದುವೆ ಮೇ 7 ರಂದು ನಡೆದಿತ್ತು. ಅದೇ ಗ್ರಾಮದ ಪಂಡಿತ ವಿನೋದ್ ಮಹಾರಾಜ್ ಯುವತಿಯ ಮದುವೆ ಮಾಡಿಸಿದ್ದನು. ನಂತರ ಮದುಮಗಳು ಸಂಪ್ರದಾಯ ಬದ್ದವಾಗಿ ನಡೆದುಕೊಂಡು 15 ದಿನಗಳ ನಂತರ ಅದೇನಾಯಿತೋ ಗೊತ್ತಿಲ್ಲ ವಿವಾಹ ಮಾಡಿಸಿದ್ದ ಪಂಡಿತನ ಜೊತೆ ಓಡಿಹೋಗಿದ್ದಾಳೆ.

ಏನಿದು ಘಟನೆ?

ವಿನೋದ್ ವಿನೋದ್ ಮಹಾರಾಜ್ ಎನ್ನುವ ಪುರೋಹಿತ ಮದುವೆ ಮಾಡಿದ ನಂತರ ಮದುಮಗಳುಸಂತೋಷದಿಂದ ಗಂಡನ ಜೊತೆಯಲ್ಲಿದ್ದಳು ನಂತರ ಮದುವೆಯಾದ ಮೂರನೇ ದಿನಕ್ಕೆ ವಧು ಸಂಪ್ರದಾಯದಂತೆ ತವರು ಮನೆಗೆ ಹಿಂದಿರುಗಿದ್ದಳು. ಹೊಸತನದಲ್ಲಿ ಮದುವೆಯಾದ ಮಗಳು ಮನೆಗೆ ಬಂದರೆ ತಂದೆತಾಯಿಗಳಿಗೆ ಅದೇನೋ ಒಂದು ಸಂತೋಷ ಅದರಂತೆ ಮಗಳನ್ನು ತವರು ಮನೆಯಲ್ಲಿ ಇರುವಷ್ಟು ದಿನ ಅರಾಮವಾಗಿರಲಿ ಎಂದು ಪ್ರೀ ಆಗಿ ಬಿಟ್ಟು ಅದೇ ಊರಿನಲ್ಲಿ ಮೇ 23ರಂದು ಯುವತಿಯ ಕುಟುಂಬಸ್ಥರು ಮತ್ತೊಂದು ಮದುವೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು.

ಸಂಬಂಧಿಕರ ಮದುವೆಯಲ್ಲಿ ಮದುವೆಯಾದ ವದು ಕೂಡ ಗಂಡನ ಜೊತೆಯಲ್ಲಿ ಬಂದಿದಳು, ಈ ಮದುವೆಯನ್ನು ಸಹ ವಿನೋದ್ ಮಹಾರಾಜ್ ಮುಂದೆ ನಿಂತು ಮಾಡಿಸುತ್ತಿದ್ದನು. ಆದರೆ ಎಲ್ಲವೂ ಸರಳವಾಗಿ ನಡೆಯುತ್ತಿದ್ದ ವೇಳೆ ಯುವತಿಗೆ ಪುರೋಹಿತ ಮೇಲೆ ಅದೇನ್ ಲವ್ ಅಯಿತ್ತೋ ಗೊತ್ತಿಲ್ಲ, ಪುರೋಹಿತನಿಗೆ ನವ ವಿವಾಹಿತೆಯ ಮೇಲೆ ಅದೇನ್ ಪ್ರೀತಿ ಹುಟ್ಟಿತೋ ಗೊತ್ತಿಲ್ಲ ಇಬ್ಬರು ಸೇರಿ ಮಾಂಗಲ್ಯ ಧಾರಣೆ ಮತ್ತು ಸಪ್ತಪದಿಯ ವೇಳೆಗೆ ನಾಪತ್ತೆಯಾಗಿದ್ದಾನೆ. ಈ ವೇಳೆ ಆತನನ್ನು ಹುಡುಕಲು ಹೋದಾಗ ನವವಿವಾಹಿತೆಯೊಂದಿಗೆ ಓಡಿಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನು ತಿಳಿದ ಮದುವೆಯ ಮನೆಯಲ್ಲಿ ಕೆಲವು ಹೊತ್ತು ಮದುವೆ ನಿಂತು ಹೋಯಿತು.

ವಿಷಯ ತಿಳಿಯುತ್ತಿದ್ದಂತೆ ವರನ ಮನೆಯವರು ಯುವತಿಯ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆಗ ಪಂಡಿತ ವಿನೋದ್ ಮತ್ತು ಯುವತಿ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಪುರೋಹಿತ ವಿನೋದ್ ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಜೊತೆಗೆ ಅಂದಿನ ದಿನವೇ ಪಂಡಿತನ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ವರನ ಮನೆಯವರು ಕಿಡಿಕಾರಿದ್ದು ನಮ್ಮ ಮನೆಯಿಂದ 2 ಲಕ್ಷ ರೂ ಬೆಲೆ ಬಾಳುವ ವಡವೆ, 50 ಸಾವಿರ ಹಣ ತೆಗೆದುಕೊಂಡು ಹೋಗಿದ್ದಾಳೆ. ಎಂದು ದೂರು ನೀಡಿದ್ದಾರೆ.