ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಮದುವೆಯಾದ ಒಂದೇ ದಿನದಲ್ಲಿ ಪತಿಯನ್ನು ಬಿಟ್ಟು ಹೋದ ನವ ವಿವಾಹಿತೆ; ಮೋದಿ ಅವರ ಯೋಜನೆಗೆ ಸ್ಪೂರ್ತಿಯಾದ ಯುವತಿ.!

0
277

ದೇಶದಲ್ಲಿ ಪ್ರತಿಯೊಂದು ಮನೆಗೂ ಶೌಚಾಲಯ ಇರುವುದು ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರ ಉಚಿತವಾಗಿ ಶೌಚಾಲಯಗಳನ್ನು ಕಟ್ಟಿ ಕೊಡುತ್ತಿದೆ. ಅಷ್ಟೇ ಅಲ್ಲದೆ ಶೌಚಾಲಯ ಇಲ್ಲದಿದ್ದರೆ ಎಷ್ಟೊಂದು ತೊಂದರೆ ಎನ್ನುವುದನ್ನು ಕೂಡ ಮನವರಿಕೆ ಮಾಡಲು ಕೋಟ್ಯಾಂತರ ಹಣ ಕರ್ಚು ಮಾಡಿ ಜಾಗೃತಿ ಮೂಡಿಸುತ್ತಿದೆ. ಆದರು ಕೆಲವರು ಬೇರೊಂದು ಕಾರಣಗಳಿಂದ ಶೌಚಾಲಯ ಕಟ್ಟುವುದನ್ನು ನಿರ್ಲಕ್ಷಿಸಿದ್ದಾರೆ, ಹೀಗೆ ಮನೆಯಲ್ಲಿ ಕೇಂದ್ರ ಸರ್ಕಾರದ ನಿಯಮವನ್ನು ಪಾಲಿಸದೆ ಶೌಚಾಲಯ ನಿರ್ಮಾಣ ಮಾಡದೆ ಇದ್ದ ವ್ಯಕ್ತಿಯ ಜೀವನದಲ್ಲಿ ಬಿರುಗಾಳಿ ಎದಿದ್ದು, ಮದುವೆಯಾಗಿ ಮರು ದಿನವೇ ಹೆಂಡತಿ ಬಿಟ್ಟು ಹೋಗಿದ್ದಾಳೆ.

ಹೌದು ಶೌಚಾಲಯ ಇಲ್ಲದಕ್ಕೆ ಹೆಂಡತಿ ಚಿಮಾರಿ ಹಾಕಿ ಬಿಟ್ಟು ಹೋದ ಘಟನೆಯೊಂದು ಪ್ರದೇಶದಲ್ಲಿ ನಡೆದಿದ್ದು, ಈ ಮಹಿಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆಯದ ಸ್ವಚ್ಛ ಭಾರತ್ ಅಭಿಯಾನದ ಸ್ಪೂರ್ತಿಗೊಂಡ ಮಹಿಳೆಯಾಗಿದ್ದಾಳೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ, ಏಕೆಂದರೆ ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸಿನಿಮಾ 2017 ರಲ್ಲಿ ತೆರೆಕಂಡಿತ್ತು. ಆಈ ,ಸಿನಿಮಾ ಕೂಡ ಶೌಚಾಲಯದ ಕಥಾ ಹಂದರ ಹೊಂದಿತ್ತು. ತೆರೆ ಮೇಲೆ ನೋಡಿದ್ದ ಕಥೆ ನೈಜ ಜೀವನದಲ್ಲೂ ನಡೆದಿದೆ.

ಆಗಿದ್ದು ಏನು?

ಮದ್ಯ ಪ್ರದೇಶದಲ್ಲಿ ಜ್ಯೋತಿ ಎನ್ನುವ ಮಹಿಳೆ 2019ರ ಮೇ ತಿಂಗಳಲ್ಲಿ ವಿವೇಕ್ ಪಂಕಜ್ ಎಂಬಾತನ ಜೊತೆ ವಿವಾಹವಾಗಿದ್ದರು, ಮದುವೆ ಏನೋ ಮನೆಯವರ ಇಚ್ಚೆಯಂತೆ ನಡೆದಿದೆ. ಆದರೆ ಮದುವೆಯಾಗಿ ಸಂತೋಷದಿಂದ ಇರಬೇಕಿದ್ದ ಯುವತಿಗೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದೆ ಇರುವ ವಿಷಯ ತಿಳಿದಿದೆ. ಇದೇ ಕಾರಣಕ್ಕೆ ಜಗಳ ತೆಗೆದ ಮಹಿಳೆ ಮದುವೆಯಾದ ಮೂರನೇ ದಿನಕ್ಕೆ ಪತಿಯನ್ನು ಬಿಟ್ಟು ಮನೆ ತ್ಯಜಿಸಿ ಹೋಗಿದ್ದಾಳೆ. ಹೆಂಡತಿ ಹೋಗಿ ಐದು ತಿಂಗಳಾದರೂ ಪಂಕಜ್ ಮನೆಯಲ್ಲಿ ಶೌಚಾಲಯ ಕಟ್ಟಿಸದ ಕಾರಣ ಜ್ಯೋತಿ ಮನೆಗೆ ವಾಪಸ್ ಬರಲಿಲ್ಲ, ಆಕೆ ಮನೆ ಬಿಟ್ಟು ಹೋದ ಮೇಲೆ ಸುಮಾರು 7 ಬಾರಿ ಹೋಗಿ ವಾಪಸ್ ಬರುವಂತೆ ಕರೆದರು ಹೆಂಡತಿ ಬೈದು ಕಳುಹಿಸಿದ್ದಾಳೆ.
ಪ್ರತಿ ಬಾರಿ ಆಕೆ ಮನೆಗೆ ಹೋಗಿ ಬರುವಂತೆ ಮನವಿ ಮಾಡಿದೆ, ಆದರೆ ಶೌಚಾಲಯ ಕಟ್ಟುವವರೆಗೂ ಯಾವುದೇ ಕಾರಣಕ್ಕೂ ಮನೆಗೆ ಬರುವುದಿಲ್ಲವೆಂದು ಜ್ಯೋತಿ ಪಟ್ಟು ಹಿಡಿದಿದ್ದಾರೆ ಎಂದು ಪಂಕಜ್ ತಿಳಿಸಿದ್ದಾರೆ, ಇದೆ ರೀತಿಯ ಘಟನೆಗಳು ಹಲವು ಕಡೆಯಲ್ಲಿ ನಡೆಯುತ್ತಿವೆ, ಆದರೆ ಬೆಳಕಿಗೆ ಬರುತ್ತಿಲ್ಲವಷ್ಟೇ, ಅದಕ್ಕಾಗಿ ಪ್ರಧಾನಿ ಮೋದಿ ಹೇಳುವಂತೆ ಮೊದಲು ಶೌಚಾಲಯ ಕಟ್ಟಿಕೊಳ್ಳಿ, ಏಕೆಂದರೆ ಈಗೀಗ ಹೆಣ್ಣು ಕೊಡಲು ಅಸ್ತಿ, ಹಣ ನೋಡುತ್ತಿಲ್ಲ ಮನೆಯಲ್ಲಿ ಶೌಚಾಲಯ ನೋಡುತ್ತಿದ್ದಾರೆ. ಅದಕ್ಕಾಗಿ ಈ ರೀತಿಯ ಘಟನೆ ನಿಮಗೂ ಬರುವ ಮೊದಲು ಜಾಗೃತರಾಗಿ.