ದಿಢೀರ್‌ ಮಾಡಬಹುದಾದ ಹಾಗೂ ಆರೋಗ್ಯಕ್ಕೆ ಒಳ್ಳೆಯದಾದ ಮಜ್ಜಿಗೆ ಹುಳಿ ಮಾಡುವ ವಿಧಾನ..!!

0
2212

ಬೇಕಾಗುವ ಸಾಮಗ್ರಿಗಳು

 • ಒಂದು ಸೌತೆಕಾಯಿ
 • ಬೂದು ಕುಂಬಳಕಾಯಿ
 • ಕಡಲೆಬೇಳೆ
 • ಹಸಿಮೆಣಸಿನಕಾಯಿ
 • ಅರಿಶಿಣ ಪುಡಿ
 • ಜೀರಿಗೆ
 • ಕೊತ್ತಂಬರಿ ಬೀಜ
 • ಕರಿಮೆಣಸು
 • ಬೆಳ್ಳುಳ್ಳಿ
 • ಹಸಿಶುಂಠಿ
 • ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

 • ಸೌತೆಕಾಯಿ, ಬೂದು ಕುಂಬಳಕಾಯಿ ಸಿಪ್ಪೆ ತೆಗೆದು ಹೋಳು ಮಾಡಿ ಬೇಯಿಸಿ ಇಡಿ. ಮತ್ತು ಕಡಲೆಬೇಳೆಯನ್ನು ಮೊದಲೇ ನೀರಿನಲ್ಲಿ ನೆನೆಸಿಡಿ.
 • ಈಗ ನೆನೆಸಿಟ್ಟಿರುವ ಕಡಲೆಬೇಳೆ, ಹಸಿಮೆಣಸಿನಕಾಯಿ, ಉಪ್ಪು, ಅರಿಶಿಣಪುಡಿ, ಜೀರಿಗೆ, ಕೊತ್ತಂಬರಿ ಬೀಜ, ಕರಿಮೆಣಸು, ಬೆಳ್ಳುಳ್ಳಿ, ಹಸಿಶುಂಠಿ ಸಣ್ಣಗೆ ಹೆಚ್ಚಿ ಎಲ್ಲ ಮಿಕ್ಸಿಗೆ ಹಾಕಿ ರುಬ್ಬಿ ಮಸಾಲಾ ಮಾಡಿಕೊಳ್ಳಿ.
 • ನಂತರ ಬೇಯಿಸಿದ ಸೌತೆಕಾಯಿ, ಬೂದು ಕುಂಬಳಕಾಯಿ ಮತ್ತು ರುಬ್ಬಿ ಇಟ್ಟ ಮಸಾಲಾ ಹಾಕಿ ಕುದಿಸಿ.
 • ನಂತರ ಇದಕ್ಕೆ ಮೊಸರು ಅಥವಾ ಹುಳಿಮಜ್ಜಿಗೆ ಹಾಕಿ.
 • ಈಗ ರುಚಿಯಾದ ಮಜ್ಜಿಗೆ ಹುಳಿ ಸವಿಯಲು ಸಿದ್ಧ.