ಈ ಶಿವರಾತ್ರಿಯಂದು ನೀವು ಹೀಗೆ ಮಾಡಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗಿ ಜೀವನದಲ್ಲಿರುವ ಎಲ್ಲ ತೊಡಕುಗಳು ನಿವಾರಣೆಯಾಗಿ ಯಶಸ್ಸನ್ನು ಕಾಣುತ್ತೀರ!!

0
731

ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸ ನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೊರೈಸುತಾನೆ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.

ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಈ ಉಪವಾಸವು ಮಾನವನಲ್ಲಿ ರಜ ಮತ್ತು ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹಕ್ಕೆ ಆರೋಗ್ಯದೊಂದಿಗೆ ರಜ ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡುವ ವಿಶೇಷ ಸಿದ್ಧಿ ಶಿವರಾತ್ರಿ ವೃತಾ ಆಚರಣೆಯಿಂದ ಲಭ್ಯ.

ರಜ ಗುಣಗಳೆಂದರೆ ಸಿಟ್ಟು, ಅಸೂಯೆ, ಮುಂತಾದವು. ತಾಮಸ ಗುಣಗಳೆಂದರೆ ಅಂಧಕಾರ, ಅಜ್ಞಾನ, ಪ್ರತಿರೋಧ, ಸಾವು ಮತ್ತು ವಿನಾಶ. ಶಿವರಾತ್ರಿಯ ಉಪವಾಸವು ಈ ಎರಡೂ ಕೆಟ್ಟ ಗುಣಗಳ ಮೇಲೆ ಹತೋಟಿಯನ್ನಿಡುವ ಶಕ್ತಿಯನ್ನು ನಮಲ್ಲಿ ಉತ್ಪಾದಿಸುತ್ತದೆ. ವೃತಾಚರಣೆ ಮಾಡುವಾಗ ಕೆಲವೊಂದು ಸಿದ್ಧಾಂತಗಳನ್ನು ಅನುಸರಿಸಬೇಕಾಗುತ್ತದೆ.

ಶಿವ ಅಂದ್ರೆ ಕಲ್ಯಾಣ ಎಂದು ಅರ್ಥ. ಲೋಕ ಕಲ್ಯಾಣಕ್ಕಾಗಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ರಾತ್ರಿ ಇಡೀ ಆ ಪರಶಿವನ ಧ್ಯಾನ ಮಾಡುವುದು. ಇದು ಮಾಘ ಮಾಸದ ಬಹುಳ ಚತುರ್ದಶಿಯಂದು ಬರುವುದು. ಇದರ ಬಗ್ಗೆ ಒಂದು ಸಣ್ಣ ಕಥೆ ಇದೆ. ಶಿವಪುರಾಣದಲ್ಲಿ ಹೇಳಿರುವಂತೆ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಟ್ರುಎಂಬ ಬಗ್ಗೆ ಜಗಳವಾಯಿತು. ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆ ವಹಿಸಲು ಶಿವನನ್ನು ಕೇಳಿಕೊಂಡರು.

ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯೆ ನಿಂತನು. ಬೆಂಕಿಯ ತೀಕ್ಷ್ಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು. ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣುವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು.