ಮಹಾಭಾರತದಲ್ಲಿ ಬರುವ ಭೀಷ್ಮನ ಪಾತ್ರ ನಿಮ್ಮ ಜೀವನಕ್ಕೆ ಎಷ್ಟೊಂದು ಒಳ್ಳೆ ಪಾಠ ಕಲಿಸುಕೊಡುತ್ತದೆ ಅಂತ ಓದಿ..

0
3907

ಪುರಾಣ ಕಾಲದಿಂದಲೂ ಮಹಾಭಾರತದ ಕಥೆಗಳನ್ನು ಕೇಳುತ್ತ ಬಂದಿದ್ದೇವೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳೂ ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳನ್ನು ಆಧರಿಸಿಯೇ ಇದೆ. ಹುಟ್ಟುತ್ತಾ ಅಣ್ಣತಮ್ಮಂದಿರುವ ಬೆಳೆಯುತ್ತಾ ದಾಯಾದಿಗಳು ಎಂಬ ಪದಕ್ಕೆ ಮಹಾಭಾರತ ತಕ್ಕ ಉದಾಹರಣೆ. ಇಂತಹ ಕತೆಗಳು ಆಗಾಗ್ಗೆ ಸಾಕಷ್ಟು ನೀತಿಯನ್ನು ಹೇಳುತ್ತವೆ. ಇವುಗಳನ್ನು ತಿಳಿದುಕೊಂಡರೆ ಸಾಕು ನಮ್ಮ ಬದುಕಿಗೆ ಇವು ದಾರಿದೀಪಗಳಾಗುತ್ತವೆ.

ಮಹಾಭಾರತದಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲವು ಪಾತ್ರಗಳೂ ಇದ್ದು ಅದರಲ್ಲಿ ಸದಾ ನೆನಪಿನಲ್ಲಿ ಉಳಿಯುವುದು ಭೀಷ್ಮ. ಹಸ್ತಿನಾಪುರಕ್ಕಾಗಿ ತನ್ನೆಲ್ಲ ಸರ್ವಸ್ವವನ್ನೂ ತ್ಯಾಗ ಮಾಡಿದವ, ಶಪಥಕ್ಕೆ ಮತ್ತೊಂದು ಹೆಸರೇ ಭೀಷ್ಮ. ಇಡೀ ಮಹಾಭಾರತದ ಆಗು ಹೋಗು, ಒಳ ಹೊರಗುಗಳನ್ನು ಈತ ಬಲ್ಲವನಾಗಿರುತ್ತಾನೆ.

ಭೀಷ್ಮನ ಜನ್ಮ ರಹಸ್ಯ

ಒಮ್ಮೆ ಗಂಗಾ ತೀರದಲ್ಲಿ ಸಂಚರಿಸುತ್ತಿದ್ದಾಗ ಹಸ್ತಿನಾಪುರದ ಮಹಾರಾಜಾ ಶಂತನು ಒಬ್ಬಳು ಅನನ್ಯ ಸೌಂದರ್ಯವತಿಯನ್ನು ನೋಡಿ ಆಕರ್ಷಿತನಾಗಿ ಅವಳನ್ನು ಮದುವೆಯಾಗುವಂತೆ ಕೇಳಿಕೊಂಡನು. ಆ ಸುಂದರಿ ಮದುವೆಗೆ ಒಪ್ಪಲು ಒಂದು ಷರತ್ತನ್ನು ವಿಧಿಸಿದಳು. ಅದರ ಪ್ರಕಾರ, ಯಾವುದೇ ಕ್ಷಣ ರಾಜನು ಅವಳು ಏನೇ ಮಾಡಿದರೂ ಪ್ರಶ್ನೆ ಮಾಡಬಾರದು, ಮಾಡಿದರೆ ಅವನನ್ನು ಬಿಟ್ಟು ಹೋಗುವುದಾಗಿ ಹೇಳಿದಳು. ಹಿಂದೆ ಮುಂದೆ ನೋಡದೆ ರಾಜನು ಇದಕ್ಕೆ ಒಪ್ಪಿ ವಿವಾಹ ವಾಗುತ್ತಾನೆ.

ಮುಂದೆ ಸ್ವಲ್ಪ ಕಾಲದ ನಂತರ ಆ ಸೌಂದರ್ಯವತಿ ಶಂತನು ಮಗುವೇಗೆ ಜನ್ಮ ನೀಡಿ ಮೂರು ದಿನಗಳ ನಂತರ ಆ ಮಗುವನ್ನು ಗಂಗಾ ನದಿಗೆ ಎಸೆದುಬಿಡುತ್ತಾಳೆ. ಷರತ್ತಿನ ಪ್ರಕಾರ ಶಂತನು ಅವಳಿಗೆ ಏನೂ ಪ್ರಶ್ನೆ ಮಾಡಲಿಲ್ಲ. ಇದೆ ರೀತಿಯಾಗಿ ನಡೆಯುತ್ತಿರುತ್ತದೆ ಆದರೆ ಎಂಟನೆಯ ಮಗು ಹುಟ್ಟಿ, ಈ ಕೂಸನ್ನೂ ತನ್ನ ಪತ್ನಿ ನದಿಗೆ ಎಸೆಯುವುದನ್ನು ನೋಡಿದಾಗ ರಾಜ ಶಂತನುಗೆ ಸಿಟ್ಟು ತಡೆಯಲಾಗದೆ. ಅವಳನ್ನು ತಡೆದು ಕೂಸುಗಳನ್ನು ನದಿಗೆ ಎಸೆಯಲು ಕಾರಣವೇನೆಂದು ಕೇಳಿದಾಗ, ಆ ಸುಂದರಿ ತನ್ನ ನಿಜವಾದ ಹೆಸರು ಗಂಗೆಯೆಂದು ಹೇಳಿ, ತಾನು ಈ ಮಗುವನ್ನು ಕರೆದು ಕೊಂಡು ಹೋಗಿ ಕಾಲಾಂತರದಲ್ಲಿ ರಾಜನಿಗೆ ಹಿಂದಿರುಗಿಸುವುದಾಗಿ ಹೇಳಿದಳು. ಹೀಗೆ ಗಂಗಾ ಮಾತೆಯ ಎಂಟನೆಯ ಮಗುವಾಗಿ ಜನಿಸಿದ ಭೀಷ್ಮ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು.

ಭೀಷ್ಮನ ಶಿಕ್ಷಣ

ಬಾಲ್ಯವನ್ನು ತಾಯಿಯೊಂದಿಗೆ ಕಳೆದ ದೇವವ್ರತನಿಗೆ ಭರತ ವರ್ಷದ ಋಷಿ ಶ್ರೇಷ್ಠರಾದ ವಸಿಷ್ಠರು, ದೇವತೆಗಳಿಗೆ ಗುರುವಾಗಿರುವ ಬೃಹಸ್ಪತಿ, ಶುಕ್ರಾಚಾರ್ಯ, ಪರಶುರಾಮರಿಂದ ಶಿಕ್ಷಣ ದೊರೆಯಿತು. ಶಿಕ್ಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ, ತಾಯಿ ಗಂಗೆ ದೇವವ್ರತನನ್ನು ಮಹಾರಾಜ ಶಂತನುವಿಗೆ ಒಪ್ಪಿಸುತ್ತಾಳೆ.

ಭೀಷ್ಮ ಶಪಥ ಮತ್ತು ಬ್ರಹ್ಮಚಾರಿ ಸ್ವೀಕಾರ

ಒಮ್ಮೆ ಶಂತನು ಮೀನುಗಾರನ ಮಗಳಾದ ಸತ್ಯವತಿಯನ್ನು ನೋಡಿ ಮೋಹಿತನಾಗಿ ಅವಳನ್ನು ವಿವಾಹವಾಗಲು ಬಸಿದ್ದಾಗ. ಸತ್ಯವತಿಯ ತಂದೆಯು ಮದುವೆಗೆ ಒಪ್ಪಲು ಒಂದು ಷರತ್ತನ್ನು ವಿಧಿಸಿದನು. ಇದರ ಪ್ರಕಾರ ಸತ್ಯವತಿ ಜನ್ಮ ನೀಡುವ ಸಂತಾನಮಾತ್ರ ಸಿಂಹಾಸನಕ್ಕೆ ಅಧಿಕಾರಿಯಾಗಬೇಕು ಎಂದು ಹೇಳಿದನು. ಈ ಷರತ್ತಿಗೆ ಒಪ್ಪಲಾರದೇ ರಾಜ ನಿರಾಸೆಯಿಂದ ಹಿಂದಿರುಗಿದನು. ಆದರೆ ದೇವವ್ರತನು ಇದನ್ನರಿತು ಸಿಂಹಾಸನದ ಆಸೆಯನ್ನು ತೊರೆದು ಸತ್ಯವತಿಯ ಸಂತಾನವೇ ಸಿಂಹಾಸನವೇರುವುದಾಗಿ ಸತ್ಯವತಿಯ ತಂದೆಗೆ ಮಾತು ಕೊಟ್ಟನು. ತಾನು ಆಜನ್ಮ ಬ್ರಹ್ಮಚಾರಿಯಾಗಿ ಉಳಿಯುತ್ತೇನೆಂದು ಪ್ರತಿಜ್ಞೆ ಮಾಡುತ್ತಾರನೆ. ಅಷ್ಟೇ ಅಲ್ಲದೇ ಮುಂದೆ ರಾಜರಾಗುವ ಶಂತನುವಿನ ಮಕ್ಕಳಿಗೆ ತಾನು ನಿಷ್ಠನಾಗಿರುವುದಾಗಿಯೂ ಶಪಥ ಮಾಡುತ್ತಾರೆ. ದೇವವ್ರತ ಈ ರೀತಿ ಶಪಥ ಮಾಡಿದ್ದರಿಂದಲೇ ಅವರಿಗೆ ಭೀಷ್ಮ ಎಂಬ ಹೆಸರು ಬಂದಿತ್ತು.

ಭೀಷ್ಮ ಮತ್ತು ರಾಜಕುಮಾರಿ ಅಂಬೆ ಶಪಥ

ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನ ಮದುವೆಗೆಂದು ಅಂಬೆ, ಅಂಬಿಕಾ, ಅಂಬಾಲಿಕ ಎಂಬ ಮೂವರು ರಾಜಕುಮಾರಿಯನ್ನು ಸ್ವಯಂವರನಲ್ಲಿ ಅತಿಥಿಯಾಗಿ ತೆರಳಿ ಮೂರು ಹೆಣ್ಣು ಮಕ್ಕಳನ್ನು ಸ್ವಯಂ ವರದಲ್ಲಿ ಗೆದ್ದು ತರುತ್ತಾನೆ . ಅವರಲ್ಲಿ ಅಂಬೆ (ಅಂಬಾ) ತಾನು ಮತ್ತೊಬ್ಬ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿರುವದಾಗಿಯೂ, ತನ್ನನ್ನು ಬಿಟ್ಟು ಬಿಡಬೇಕೆಂದೂ ಭೀಷ್ಮನಲ್ಲಿ ವಿನಂತಿಸಿಕೊಳ್ಳುತ್ತಾಳೆ. ಮನ ಕರಗಿದ ಭೀಷ್ಮ ಅಂಬೆಯನ್ನು ಆಕೆಯ ಪ್ರಿಯಕರನಿಗೋಸ್ಕರ ಕಳಿಸಿಕೊಡುತ್ತಾನೆ. ಆದರೆ ಪ್ರಿಯಕರ ಅಂಬೆಯನ್ನು ತಿರಸ್ಕರಿಸುತ್ತಾನೆ. ಈಗ ಅಂಬೆಯದು ವಿಚಿತ್ರ ಪರಿಸ್ಥಿತಿ. ಇತ್ತ ಪ್ರಿಯಕರನಿಂದಲೂ ತಿರಸ್ಕೃತಗೊಂಡು ಅತ್ತ ವಿಚಿತ್ರವೀರ್ಯನನ್ನೂ ಮದುವೆಯಾಗದೇ ಕಂಗೆಡುತ್ತಾಳೆ. ಹತಾಶೆಗೊಂಡ ಅಂಬೆ ತೀರ ಕೊನೆಗೆ ಭೀಷ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸು ತ್ತಾಳೆ. ಭೀಷ್ಮ ಒಪ್ಪುವುದಿಲ್ಲ. ಹೀಗೆ ಎಲ್ಲ ಕಡೆಗಳಿಂದಲೂ ತಿರಸ್ಕೃತಗೊಂಡ ಅಂಬೆ ಆಗ ಕೋಪದಿಂದ ಭೀಷ್ಮನೆದುರು ಭೀಷ್ಮನನ್ನು ತಾನೇ ಅಂತ್ಯ ಮಾಡುವುದಾಗಿ ಶಪಥಗೈಯುತ್ತಾಳೆ.

ಹೀಗೆ ಅಂಬೆ ತನ್ನ ಮುಂದಿನ ಜೀವನದಲ್ಲಿ ಶಿಖಂಡಿ ಜನ್ಮ ತಾಳಿ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಭೀಷ್ಮನಿಗೆದುರಾಗಿ ಶಿಖಂಡಿಯನ್ನೇ ತಂದು ನಿಲ್ಲಿಸುತ್ತಾನೆ. ಭೀಷ್ಮ ಹೆಣ್ಣಿನ ಎದುರು ಯುದ್ಧ ಮಾಡಲಾರೆ ಎಂದು ಶಸ್ತ್ರ ಕೆಳಗಿಡುತ್ತಾನೆ. ಆಗ ಕೃಷ್ಣ ಅರ್ಜುನನಿಗೆ ಮೋಸದಿಂದ ಭೀಷ್ಮನೊಂದಿಗೆ ಹೋರಾಡುವಂತೆ ಪ್ರೆರೇಪಿಸಿ ಭೀಷ್ಮನನ್ನು ಹೊಡೆದುರುಳಿಸುತ್ತಾನೆ. ಹೀಗೆ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅಂಬೆಯು ಶಿಖಂಡಿಯಾಗಿ ತನ್ನ ಶಪಥ ಪೂರೈಸಿಕೊಳ್ಳುತ್ತಾಳೆ.

ಭೀಷ್ಮರಿಗೆ ಓತಿಕ್ಯಾತ ಶಾಪ

ಒಮ್ಮೆ ಭೀಷ್ಮ ದೋಣಿಯಲ್ಲಿ ಹೋಗುವಾಗ ಓತಿಕ್ಯಾತವೊಂದು ಅಕಸ್ಮಾತ್ತಾಗಿ ಅವರು ದೊಣ್ಣೆ ಊರುವುದಕ್ಕೂ ಓತಿ ಅದರ ತುದಿಗೆ ಸಿಕ್ಕಿಕೊಳ್ಳುವುದಕ್ಕೂ ಸಮನಾಯಿತು. ಓತಿ ದೊಣ್ಣೆಯ ತುದಿಯಿಂದ ಬಿಡಿಸಿಕೊಳ್ಳಲು ವಿಲವಿಲ ಒದ್ದಾಡಿತು. ಆಗ ಅದರ ಇರುವಿಕೆ ಭೀಷ್ಮರ ಗಮನಕ್ಕೆ ಬಂದು, ತನ್ನ ಕೆಲಸಕ್ಕೆ ಅಡ್ಡವಾಗಿ ಬಂದ ಓತಿಯ ಮೇಲೆ ಕೋಪಗೊಂಡು “ಬೆಳಿಗ್ಗೆಯೇ ಇದೆಂತಹ ಅಪಶಕುನ” ಎಂದು ತಮ್ಮಲ್ಲಿಯೇ ಸಿಡಿಮಿಡಿಗೊಂಡು ದೊಣ್ಣೆಯ ತುದಿಯಿಂದ ಆ ಓತಿಯನ್ನು ಎತ್ತಿ ದೂರಕ್ಕೆ ಚಿಮ್ಮಿದರು. ರೊಯ್ಯನೆ ಹಾರಿದ ಓತಿ ಅನತಿ ದೂರದಲ್ಲಿದ್ದ ಮುಳ್ಳಿನ ರಾಶಿಯ ಮೇಲೆ ಬಿದ್ದಿತು. ಆಗ ಓತಿ ದೊಣ್ಣೆ ಊರಿದ್ದು ಭೀಷ್ಮನ ತಪ್ಪಲ್ಲ. ಆದರೆ ತಿಳಿದೂ ತಿಳಿದೂ ಎತ್ತಿ ಬಿಸಾಕಿದ್ದು ಭೀಷ್ಮನ ತಪ್ಪು ಎಂದು ಸಿಟ್ಟಾಗಿ ಸಾಯುವ ಕಾಲದಲ್ಲಿ ನಾನು ಹೇಗೆ ಮುಳ್ಳಿನ ಮೇಲೆ ಒರಗಿ ಒದ್ದಾಡ್ತಾ ಇದ್ದೀನೋ ಹಾಗೆ ನೀವೂ ಸಹ ಕಡೆಗಾಲದಲ್ಲಿ ಮುಳ್ಳಿನ ಮೇಲೆ ಒರಗಿ ಸಾಯ್ರಪ್ಪಾ” ಎಂದು ಶಾಪ ಕೊಟ್ಟಿತು. ಮುಂದೆ ಮಹಾಭಾರತ ಯುದ್ಧ ಸಂದರ್ಭದಲ್ಲಿ ಭೀಷ್ಮರು ಅರ್ಜುನ ರಚಿಸಿದ ಶರಶಯ್ಯೆಯ ಮೇಲೆ ಮಲಗಿ ಅಪಾರ ನೋವನ್ನನುಭವಿಸುತ್ತಾ ಕೊನೆಯುಸುರೆಳೆದರು.