ಗಂಡು ಮಗುವಿಗೆ ತಂದೆಯಾದ ಮೈಸೂರಿನ 27ನೇ ಅರಸರು, ಕೇವಲ 25 ವರ್ಷ ವಯಸ್ಸಿನ ಶ್ರೀ ಯದುವೀರ್ ರವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಸಾಕಷ್ಟಿವೆ..

0
2210

ಡಿಸೆಂಬರ್ 6 ರಂದು ಮೈಸೂರು ರಾಜಮನೆತನಕ್ಕೆ ನೂತನವಾಗಿ ಆಗಮಿಸಿದ ಪುಟ್ಟ ರಾಜಕುಮಾರನ ತಂದೆ ಮೈಸೂರಿನ 27ನೇ ಅರಸರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಬಗ್ಗೆಗಿನ ಮಾಹಿತಿ ಜೊತೆಗೆ ಎಕ್ಸ್ ಕ್ಲೂಸಿವ್ ಫೋಟೋಸ್ ನಿಮಗಾಗಿ..

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಈಗ ಪ್ರಸಿದ್ಧರಾಗಿರುವ ಯದುವೀರರನ್ನು ಯದು ವಂಶದ 27ನೇ ಅರಸರಾಗಿ ಮಹಾರಾಣಿ ಪ್ರಮೋದದೇವಿಯವರು 2015 ರ ಫೆಬ್ರವರಿ 23 ರಂದು ದತ್ತುಪುತ್ರನಾಗಿ ಸ್ವೀಕರಿಸಿದರು. ಇವರು ಹುಟ್ಟಿದ್ದು 1992 ರಲ್ಲಿ.. ಯದುವೀರ್ ರವರ ಮೊದಲ ಹೆಸರು ಯದುವೀರ್ ಗೋಪಾಲರಾಜೇ ಅರಸ್ ಎಂದು.. ದತ್ತು ಸ್ವೀಕಾರದ ಸಮಯದ ಸಂಧರ್ಭದಲ್ಲಿ ಈ ಹೆಸರನ್ನು ಬದಲಾಯಿಸಲಾಯಿತು.. ಶ್ರೀಕಂಠ ದತ್ತ ಒಡೆಯರ್ ಮತ್ತು ಪ್ರಮೋದದೇವಿಯವರಿಗೆ ಮಕ್ಕಳಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಬೇಕಾಯಿತು.. ದಿ.ಶ್ರೀಕಂಠ ದತ್ತ ಒಡೆಯರ್ ನಿಧನರಾದ 14 ತಿಂಗಳ ಬಳಿಕ ಯದುವಂಶಕ್ಕೆ ಒಬ್ಬ ಸಮರ್ಥ, ಉತ್ತರಾಧಿಕಾರಿಯನ್ನು ಹುಡುಕಲಾಯಿತು.. ಯದುವೀರ್ ರವರ ತಂದೆ ಬೆಟ್ಟದ ಕೋಟೆ ಅರಸು ಪರಂಪರೆಯವರು.. ಜಯಚಾಮರಾಜ ಒಡೆಯರ್ ರವರ ಮರಿಮಗ.. ದಿ.ಶ್ರೀಕಂಠ ದತ್ತ ಒಡೆಯರ್ ರವರಹಿರಿಯ ಸಹೋದರಿ ದಿ.ಗಾಯತ್ರಿ ದೇವಿ ಮತ್ತುಬ್ದಿ.ರಾಮಚಂದ್ರ ಅರಸ್ ರವರ ಪುತ್ರಿ ತ್ರಿಪುರಸುಂದರಿದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ರವರ ಏಕೈಕ ಪುತ್ರ.. ಯದುವೀರ್ ರವರಿಗೆ ಒಬ್ಬ ಸಹೋದರಿ ಜಯಾತ್ಮಿಕ ಇದ್ದರೆ..

ಶಿಕ್ಷಣ

‘ಯದುವೀರ್ ರವರು’ ಬೆಂಗಳೂರಿನ, ‘ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆ’ಯಲ್ಲಿ ‘ಎಸ್. ಎಸ್.ಎಲ್.ಸಿ’. ತರಗತಿ ಮುಗಿಸಿ, ‘ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆ’ಯಲ್ಲಿ ೧೨ ನೆಯ ತರಗತಿಯವರೆಗೆ ಓದಿರುವ ಅಮೆರಿಕದಲ್ಲಿ ‘ಬಾಸ್ಟನ್ ವಿಶ್ವವಿದ್ಯಾಲಯ’ದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿ.ಎ; ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ. ೨೦೧೫ ರ, ‘ದಸರಾ’ ಹಬ್ಬದವೇಳೆಗೆ ಅವರಿಗೆ ಪಟ್ಟಾಭಿಷೇಕಮಾಡಾಲಾಗುತ್ತದೆ. ಅರಮನೆಯ ಆವರಣದಲ್ಲಿನ ೧೪ ದೇವಾಲಯಗಳ ಅರ್ಚಕರುಗಳು, ಅಪಾರ ಬಂಧು-ಬಾಂಧವರು, ಹಿತೈಷಿಗಳು, ಮಿತ್ರರು, ದತ್ತು ಸ್ವೀಕಾರ ಸಮಯದಲ್ಲಿ ಹಾಜರಿದ್ದರು.

41 ವರ್ಷಗಳ ಬಳಿಕ ಪಟ್ಟಾಭಿಷೇಕ ೨೨ ವರ್ಷ ಹರೆಯದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ೨೦೧೫ ರ ಮೇ, ೨೮, ಗುರುವಾರ ವಿಧ್ಯುಕ್ತವಾಗಿ ೨೭ ನೇ ರಾಜರಾಗಿ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸಿಕೊಂಡಿದ್ದರು. ಈ ದಸರಾಹಬ್ಬದಲ್ಲಿ ಮೈಸೂರಿನ ಅರಮನೆಯಲ್ಲಿ ಅದೇ ಸಮಾರಂಭ ರಾಜಗೌರವಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಯದುವೀರರು, ಮೇ,೨೭, ಬುಧವಾರ ಇಲ್ಲಿಯ ಅಂಬಾವಿಲಾಸ ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
25 ವರ್ಷ ವಯಸ್ಸಿನವರಾದರೂ ಈಗಲೂ ಮೈಸೂರಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗಿ ಪಾಠ ಮಾಡುತ್ತಾರೆ.. ಸ್ವಲ್ಪವೂ ಅಹಂಕಾರ ಭಾವ ವಿಲ್ಲದ ಶ್ರೀ ಯಧುವೀರ್ ರವರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ..