ಇನ್ಮುಂದೆ ನಿಮ್ಮ ವಾಹನಕ್ಕೆ PRESS, POLICE, ARMY, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಝ್ ಪಕ್ಕಾ; ಯಾಕೆ ಅಂತ ಈ ಮಾಹಿತಿ ನೋಡಿ..

0
1495

ವಾಹನಗಳ ಮಾಲೀಕರು ತಮ್ಮ ವೃತ್ತಿಯ ಚಿನ್ನೆಯನ್ನು ಬೈಕ್, ಕಾರು ಸೇರಿದಂತೆ ವಾಹನಗಳ ಮೇಲೆ ಬರೆದುಕೊಂಡು ತಿರುವುದಕ್ಕೆ ಬ್ರೇಕ್ ಬಿದಿದ್ದೆ ಒಂದು ವೇಳೆ ಈ ನಿಯಮವನ್ನು ಮಿರಿ ಸ್ಟಿಕ್ಕರ್ಸ್ ಹಾಕಿಸಿದರೆ ಡೈರೆಕ್ಟ್ ಸೀಜ್ ಮಾಡಲಾಗುತ್ತೆ. ಈಗಾಗಲೇ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸುತ್ತಿದ್ದಂತೆ ಎಚ್ಚೆತ್ತ ಮುಂಬೈ ಪೊಲೀಸರು ಸ್ಟಿಕ್ಕರ್ ಇರೋ ಖಾಸಗಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಂತೆ ಹೆಚ್ಚುತ್ತಿರುವ ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪ್ರೆಸ್, ಪೊಲೀಸ್ ಮತ್ತು ಲಾಯರ್ ವಾಹನಗಳೇ ಹೆಚ್ಚು ಭಾಗಿಯಾಗಿರುವುದು ಕಂಡುಬಂದಿದೆ.

Also read: ಭಾರತದಲ್ಲಿ ತಯಾರಾಗುವ ವಿವಿಧ ಬ್ರಾಂಡ್ ಉಪ್ಪುಗಳು ಕ್ಯಾನ್ಸರ್ ಕಾರಕವಂತೆ; ಅಮೆರಿಕಾದ ಲ್ಯಾಬ್-ನಿಂದ ಪತ್ತೆಯಾಯಿತು ಆಘಾತಕಾರಿ ಸುದ್ದಿ!!

ಏನಿದು ಹೊಸ ನಿಯಮ?

ಹೌದು ಕಾರು, ಬೈಕ್, ಸ್ಕೂಟರ್ ಸೇರಿದಂತೆ ಖಾಸಗಿ ವಾಹನದ ಮೇಲೆ ಪೊಲೀಸ್, ಪ್ರೆಸ್, ವಕೀಲರು ಸೇರಿದಂತೆ ಹಲವು ಸ್ಟಿಕ್ಕರ್ ಅಂಟಿಸಿ ತಿರುಗಾಡುವುದು ಕಾನೂನು ಪ್ರಕಾರ ತಪ್ಪು ಎಂದು ಹೈಕೋರ್ಟ್ ಆದೇಶದ ಹೊರಡಿಸಿದೆ. ಈ ಆದೇಶದ ಪ್ರಕಾರ ಖಾಸಗಿ ವಾಹನಗಳಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್ ಆಗಲಿದೆ. ಏಕೆಂದರೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ನಂತರ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿರುತ್ತಿದ್ದ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನ ಮಾಲೀಕರಿಗೆ ಬಾಂಬೆ ಹೈಕೋರ್ಟ್ ಶಾಕಿಂಗ್ ಸುದ್ದಿ ನೀಡಿದ್ದು, ನಿಯಮಬಾಹಿರವಾಗಿ ಸ್ಟಿಕ್ಕರ್‌ಗಳನ್ನು ಬಳಸುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು ದಂಡವಿಧಿಸುವಂತೆ ಪೊಲೀಸ್ ಇಲಾಖೆಗೆ ಖಡಕ್ ಆದೇಶ ನೀಡಿದೆ.

Also read: ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

ಈ ನೂತನ ನಿಯಮ ಕಟ್ಟು ನಿಟ್ಟಾಗಿ ಪಾಲನೆ ಆಗುತ್ತಿರುವುದು ಮಹಾರಾಷ್ಟ್ರದಲ್ಲಿ. ಬಾಂಬೆ ಹೈಕೋರ್ಟ್ ನೂತನ ಆದೇಶ ಹೊರಡಿಸಿದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲನೆ ಮಾಡಿದ ಬಾಂಬೆ ಹೈಕೋರ್ಟ್ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ದ ಕೂಡಲೇ ಕ್ರಮ ಜರುಗಿಸುವಂತೆ ಆದೇಶಿಸಿದ್ದು, ಕೋರ್ಟ್ ಆದೇಶ ಮೇರೆಗೆ ಮಾಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಯುತ್ತಿದ್ದಾರೆ.

ಮೋಟಾರ್ ವಾಹನ ಕಾಯ್ದೆ ಪ್ರಕಾರ

ಮಹಾರಾಷ್ಟ್ರ ಮೋಟಾರ್ ವಾಹನ ಕಾಯ್ದೆ 134 (6) ಸೆಕ್ಷನ್ 177 ಪ್ರಕಾರ, ಖಾಸಗಿ ವಾಹನಗಳಲ್ಲಿ ಪೊಲೀಸ್, ಪ್ರೆಸ್ ಸೇರಿದಂತೆ ಯಾವುದೇ ಸ್ಟಿಕ್ಕರ್ ಅಂಟಿಸುವುದು ಅಪರಾಧ. ಈ ರೀತಿ ಸ್ಟಿಕ್ಕರ್ ಇದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಬಹುದು ಅಥವಾ 200 ರೂಪಾಯಿ ದಂಡ ವಿದಿಸಬಹುದು.

ಸ್ಟಿಕ್ಕರ್ಸ್ ಹೊಂದಿರುವ ವಾಹನಗಳಿಗೆ ದಂಡ?

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಮುಂಬೈ ಮತ್ತು ಪುಣೆಯಲ್ಲಿ ಈಗಾಗಲೇ ಸಾವಿರಾರು ಸ್ಟಿಕ್ಕರ್ಸ್ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆದು ದಂಡವಿಧಿಸುತ್ತಿರುವ ಪೊಲೀಸರು, ನಿಯಮಬಾಹಿರವಾಗಿ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನ ಮಾಲೀಕರಿಗೆ ರೂ. 200 ದಂಡ ವಿಧಿಸಿದ್ದಾರೆ. ಜೊತೆಗೆ ಸ್ಟಿಕ್ಕರ್ ಅಂಟಿಸುವ ಶಾಪ್ ಮಾಲೀಕರಿಗೂ ಎಚ್ಚರಿಕೆ ನೀಡಲಾಗುತ್ತಿದ್ದು, ನಿಯಮಬಾಹಿರ ಸ್ಟಿಕ್ಕರ್ಸ್ ಅಂಟಿಸಿದ್ದಲ್ಲಿ ಶಾಪ್ ಮಾಲೀಕರ ವಿರುದ್ಧವೂ ಕ್ರಮ ಜರಗಿಸಲು ಮುಂದಾಗಿದ್ದಾರೆ.