ಈ ಸ್ಟೋರಿ ನೋಡಿದ ಬಳಿಕ ಕೃಷಿಕ ಯುವಕರನ್ನು ಮದುವೆಯಾಗಲು ಒಪ್ಪದ ಯುವತಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ..

0
399

ಈಗಿನ ಕಾಲದಲ್ಲಿ ಮದುವೆಯಾಗಲು ಹೆಣ್ಣುಮಕ್ಕಳಿಗೆ ಸರ್ಕಾರೀ ನೌಕರಿ ಇರುವ ಹುಡುಗ, ಇಲ್ಲ ಲಕ್ಷ -ಲಕ್ಷ ಹಣ ಪಡೆಯಿವ ಇಂಜಿನಿಯರಿಂಗ್, ಡಾಕ್ಟರ್ಸ್- ರನ್ನು ಮಾತ್ರ ಇಷ್ಟ ಪಡುತ್ತಾರೆ. ಆದರೆ ಕೃಷಿ ಕೆಲಸ ಮಾಡುವ ರೈತ ಯುವಕರನ್ನು ಮದುವೆಯಾಗಳು ಯಾರು ಮುಂದೆ ಬರುತ್ತಿಲ್ಲ, ಅದಕ್ಕಾಗಿಯೇ ಹಲವು ರೈತ ಯುವಕರ ವಿವಾಹಗಳು ಇನ್ನೂ ಆಗಿಲ್ಲ, ಬೇಕಾದರೆ ಕೋಲಿ ಮಾಡಿಕೊಂಡು ಜೀವನ ಮಾಡುವರಿಗೆ ಹೆಣ್ಣು ಕೊಡಬಹುದು ಆದರೆ ರೈತರಿಗೆ ಹೆಣ್ಣು ಕೊಡುವುದು ಕಷ್ಟ, ಎಂದು ಹೆಣ್ಣು ಹೆತ್ತವರು ಹೇಳುತ್ತಿದ್ದಾರೆ. ಏಕೆಂದರೆ ಈಗಿನ ಕಾಲದ ಕೃಷಿಯಲ್ಲಿ ಏನು ಲಾಭವಿಲ್ಲ ಎನ್ನುವ ಉದ್ದೇಶದಿಂದ ಮತ್ತು ರೈತರ ಮನೆಯಲ್ಲಿ ಕೆಲಸಗಳು ಹೆಚ್ಚು ಎನ್ನುವ ಉದ್ದೇಶದಿಂದ ಯಾರು ಮುಂದೆ ಬರುತ್ತಿಲ್ಲ ಎನ್ನುವುದು ಸತ್ಯವಾಗಿದೆ.

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

ಇಂತಹ ಉದ್ದೇಶವನ್ನು ಹೊಂದಿರುವವರಿಗೆ ಇಲ್ಲೊಬ್ಬ ರೈತ, ದೇಶದಲ್ಲಿ ತಮ್ಮ ಅರ್ಹತೆ ಏನು ಎನ್ನುವದನ್ನು ಮದುವೆಯಲ್ಲಿ ತೋರಿಸಿದ್ದು ದೇಶದಲ್ಲೇ ಬಾರಿ ವೈರಲ್ ಆಗಿದೆ, ಹೆಣ್ಣು ಕೊಡಲು ಹಿಂಜರಿಯಿವ ಹೆಣ್ಣು ಹೆತ್ತವರಿಗೆ ಮತ್ತು ಹುಡುಗಿಯರಿಗೆ ರೈತರ ಶಕ್ತಿ ಏನು ಎನ್ನುವುದನ್ನು ಸಾಭಿತು ಪಡಿಸಿದ್ದು, ತಾನು ಮದುವೆಯಾಗುವ ಮದುಮಗಳನ್ನು ಮಂಟಪಕ್ಕೆ ಕರೆತರಲು ಹೆಲಿಕ್ಯಾಪ್ಟರ್​ ಕಳುಹಿಸಿ ದೇಶದಲ್ಲೇ ಮೊದಲನೇ ಸಾಹಸ ಮಾಡಿದ ವ್ಯಕ್ತಿಯಾಗಿದ್ದಾನೆ.

ಏನಿದು ರೈತನ ಮದುವೆ?

Also read: ಒಂದೇ ತಟ್ಟೆಯಲ್ಲಿ 50 ವರ್ಷಗಳಿಂದ ಊಟ ಮಾಡ್ತೀರೋ ಅಣ್ಣ-ತಮ್ಮನ ಪ್ರೀತಿ ವಾತ್ಸಲ್ಯ ಹೇಗಿದೆ ನೋಡಿ..

ಹೌದು ದೇಶದಾದ್ಯಂತ ರೈತರಾದ ಯುವಕರಿಗೆ ಮದುವೆಗೆ ಯುವತಿಯರೇ ಸಿಗುತ್ತಿಲ್ಲ ಎಂಬ ವಾತಾವರಣ ನಿರ್ಮಾಣವಾಗಿ. ಅದೆಷ್ಟೋ ರೈತರು ಮದುವೆಯಾಗದೆ ಇದ್ದಾರೆ. ಆದರೆ ಈ ಸ್ಟೋರಿ ನೋಡಿದ ಬಳಿಕ ಯುವತಿಯರು ಕೃಷಿಕ ಯುವಕರನ್ನು ಮದುವೆಯಾಗಲು ಕ್ಯೂ ನಿಲ್ಲುವುದರಲ್ಲಿ ಅನುಮಾನವಿಲ್ಲ, ಹೌದು ಇಲ್ಲೊರ್ವ ಕೃಷಿಕ ಯುವಕ ತನ್ನ ವಧುವನ್ನು ಮಂಟಪಕ್ಕೆ ಕರೆತರಲು ಹೆಲಿಕ್ಯಾಪ್ಟರ್​ ಕಳುಹಿಸಿದ್ದು, ದೇಶದ ಗಮನ ಸೆಳೆದಿದೆ. ಮಹಾರಾಷ್ಟ್ರದ ಸೊಲ್ಲಾಪುರ ಪಂಡರಾಪುರದ ಉಪ್ಲಾಸಿ ನಿವಾಸಿ ಐಶ್ವರ್ಯ ಎಂಬ ವಿದ್ಯಾವಂತ ವಧುವಿನ ಮದುವೆ, ಕೃಷಿಕ ನಿತಿನ್​ ಎಂಬುವವರೊಂದಿಗೆ ನಿಶ್ಚಯವಾಗಿತ್ತು.

ವಧು ಐಶ್ವರ್ಯ ವಿದ್ಯಾವಂತೆ. ಆದರೆ ಆಕೆ ಕೃಷಿಕನನ್ನು ಮದುವೆಯಾಗಬೆಂದು ನಿರ್ಧರಿಸಿದ್ದಳು. ವರ ನಿತಿನ್ ಕೂಡ ಎಂಬಿಎ ಪದವೀಧರನಾಗಿದ್ದು, ಕೃಷಿಯ ಮೇಲಿನ ಆಸಕ್ತಿಯಿಂದ ಹಳ್ಳಿಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ವರ ನಿತಿನ್ ತನ್ನ ಮದುವೆ ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದನು. ಅದರಂತೆಯೇ ವಧುವಿನ ದಿಬ್ಬಣಕ್ಕೆ ಕುದುರೆ ಗಾಡಿ, ಎತ್ತಿನಗಾಡಿ, ಅಲಂಕೃತ ಕಾರಿನ ಬದಲು ಹೆಲಿಕಾಪ್ಟರನ್ನೇ ಕಳುಹಿಸಲು ನಿರ್ಧರಿಸಿದ್ದು, ಬಾಡಿಗೆ ಹೆಲಿಕಾಪ್ಟರ್ ಅನ್ನು ವಧು ಮನೆಗೆ ಕಳುಹಿಸಿದ್ದನು.

Also read: ವಿಚಿತ್ರ ಪ್ರೇಮ ಕತೆ; ಮದುವೆಯಾದ ಒಂದೇ ವಾರದಲ್ಲಿ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲೇ ನವವಿವಾಹಿತೆ ಪರಾರಿ..

ವರ ಕಳುಹಿಸಿದ್ದ ಹೆಲಿಕಾಪ್ಟರ್ ನಲ್ಲಿ ವಧು ಸಿಂಗಾರಗೊಂಡು ಮದುವೆ ಮಂಟಪಕ್ಕೆ ಆಗಮಿಸಿದರು. ಇವರಿಬ್ಬರ ವಿಶೇಷ ಮದುವೆಗೆ ಇಡೀ ಗ್ರಾಮದವರೇ ಸಾಕ್ಷಿಯಾಗಿದ್ದರು. ಅದರಂತೆ ಗ್ರಾಮದಲ್ಲಿ ನಿತಿನ್​ ಕುಟುಂಬದ ಕುಲಕಸಬು ಕೃಷಿಯಾಗಿದ್ದು, ಈಗಾಗಲೇ ಈ ಕುಟುಂಬ ಕೃಷಿಯಲ್ಲಿಯೇ ಸಾಕಷ್ಟು ಯಶಸ್ವಿಯಾಗಿದೆ. ಅದನ್ನೇ ಹೊಸ ರೀತಿಯಲ್ಲಿ ಕೈಗೊಳ್ಳುತ್ತಿರುವ ನಿತಿನ್ ತನ್ನ ವಿವಾಹವನ್ನು ವಿಶೇಷವಾಗಿ ಮಾಡಿಕೊಳ್ಳಲು ಯಾರು ಮಾಡದ ರೀತಿಯಲ್ಲಿ ವಿವಾಹ ಮಾಡಿಕೊಂಡಿದ್ದು ದೇಶದೆಲ್ಲೆಡೆ ವೈರಲ್ ಆಗಿದೆ.