ಮುಸ್ಲಿಂ ಯುವಕನ ಜೊತೆಗೆ ಲವ್ವಿ ಡವ್ವಿ ನಡೆಸಿದ ಮಗಳನ್ನು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ತಂದೆ.!

0
597

ಪ್ರೀತಿಯ ವಿಷಯದಲ್ಲಿ ಹೆಚ್ಚಾಗಿ ಅಡ್ಡ ಬರುವುದು ಮತ್ತು ಕೊಲೆಯಂತಹ ಘಟನೆಗಳಿಗೆ ಕಾರಣವಾಗುವುದು ಧರ್ಮ, ಮತ್ತು ಜಾತಿಯ ವಿಷಯಗಳು, ಆದರೆ ಹದಿ -ಹರೆಯದವರು ಇವೆಲ್ಲವನ್ನೂ ಯೋಚಿಸದೆ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಇಂತಹದೆ ಘಟನೆಯೊಂದು ನಡೆದಿದ್ದು, ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆ ಆಗುತ್ತೇನೆ ಎಂದ ಕಾರಣಕ್ಕೆ ತಂದೆ ಮಗಳನ್ನು ಪೀಸ್ ಪೀಸ್ ಮಾಡಿ ಕೊಂದು ಬಳಿಕ ಆಕೆಯ ಶವವನ್ನು ಸೂಟ್ ಕೇಸಿನಲ್ಲಿ ತುಂಬಿ ಬಿಸಾಡಲೆಂದು ಹೋದಾಗ ಸಿಕ್ಕಿಬಿದ್ದಿದ್ದಾನೆ.

ಏನಿದು ಘಟನೆ?

ಪದವೀಧರೆಯಾದ 22 ವರ್ಷದ ಫ್ರಿನ್ಸಿಯನ್ನು ಆರೋಪಿ ಅರವಿಂದ್ ತಿವಾರಿ ಕೊಲೆ ಮಾಡಿದ್ದಾನೆ, 6 ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶಕ್ಕೆ ಸಮೀಪವಿರುವ ಜೌನ್ಪುರ್ ಸಿಟಿಯಿಂದ ಬಂದಿದ್ದಳು. ಅಲ್ಲದೆ ಆಕೆ ಕೆಲಸ ಮಾಡುತ್ತಿರುವ ಭಂದೂಪ್ ಕಂಪನಿಯಲ್ಲಿ ಸಹೋದ್ಯೋಗಿಯ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಯುವಕ ಮುಸ್ಲಿಂ ಆಗಿದ್ದು, ಮದುವೆಯಾಗಲು ರೆಡಿಯಾಗಿದ್ದಳು. ಆದರೆ ಈ ವಿಚಾರ ತಿಳಿದ ತಂದೆ, ಆತನ ಜೊತೆಗಿನ ಮದುವೆ ಮಾಡಿಕೊಳ್ಳುವುದು ಬೇಡವೆಂದು ಹೇಳಿದ್ದಾನೆ. ಆದರೆ ಮಗಳು ಮಾತು ಕೇಳದ ಹಿನ್ನೆಲೆಯಲ್ಲಿ ತಂದೆ, ಮಗಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ಇದೂವರೆಗೂ ಆಕೆಯ ದೇಹದ ಪೂರ್ತಿ ಭಾಗ ಸಿಗಲಿಲ್ಲ. ಹೀಗಾಗಿ ಅದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಆರೋಪಿ ತಿವಾರಿ ಮಲಾಡ್ ನಲ್ಲಿರುವ ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರ ಪ್ರಕಾರ, ಮುಸ್ಲಿಂ ಯುವಕನೊಂದಿಗಿನ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ತನ್ನ ಮಗಳ ಜೊತೆ ಕ್ಯಾತೆ ತೆಗೆದಿದ್ದನು. ತನಿಖೆಯ ಸಂದರ್ಭದಲ್ಲಿಯೂ ಆತ, ನನಗೆ ನನ್ನ ಮಗಳು ಬೇರೆ ಸಮುದಾಯದ ಯುವಕನೊಂದಿಗೆ ಸಂಬಂಧ ಬೆಳೆಸಿರುವುದು ಇಷ್ಟವಾಗಿರಲಿಲ್ಲ. ಆದರೆ ಆಕೆ ಮಾತ್ರ, ತಾನು ಅತನನ್ನೇ ಮದುವೆಯಾಗುವುದೆಂದು ಹಠ ಹಿಡಿದಿದ್ದಳು. ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಲು ತೀರ್ಮಾನ ಮಾಡಿದೆ ಎಂದು ಪೊಲೀಸರ ಬಳಿ ತಿಳಿಸಿದ್ದಾನೆ.

ತಿವಾರಿ ಹಾಗೂ ಮೃತ ಮಗಳು ತಿಟ್ ವಾಲಾದ ಇಂದಿರಾ ನಗರದಲ್ಲಿರುವ ಪ್ರದೇಶದಲ್ಲಿ ವಾಸವಾಗಿದ್ದರು. ಮೃತ ಪ್ರಿನ್ಸಿಯ ತಾಯಿ ಹಾಗೂ ಮೂವರು ಸಹೋದರಿಯರು ಉತ್ತರಪ್ರದೇಶ ಜೌನ್ಪುರದಲ್ಲಿ ವಾಸವಾಗಿದ್ದಾರೆ. ಇತ್ತ ತಂದೆ ಜೊತೆ ವಾಸವಾಗಿದ್ದ ಪ್ರಿನ್ಸಿ, ಶುಕ್ರವಾರ ರಾತ್ರಿ ಮುಸ್ಲಿಂ ಯುವಕನ ಜೊತೆ ಮದುವೆಯ ಪ್ರಸ್ತಾಪವನ್ನು ಅಪ್ಪನ ಮುಂದಿಟ್ಟಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ತಂದೆ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳೆಕಿಗೆ ಬಂದಿದ್ದು ಹೇಗೆ?

ಮಗಳ ಕತ್ತರಿಸಿದ ದೇಹದೊಂದಿಗೆ ತಂದೆ ರಿಕ್ಷಾದಲ್ಲಿ ತಿಟ್ ವಾಲಾ ರೈಲ್ವೆ ನಿಲ್ದಾಣದತ್ತ ತೆರಳಿದ್ದಾನೆ. ಅಲ್ಲಿಂದ ಆತ ಕಲ್ಯಾಣ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದು, ಮತ್ತೆ ಆಟೋ ಹಿಡಿದುಕೊಂಡು ಭಿವಾಂಡಿ ಪ್ರದೇಶಕ್ಕೆ ತೆರಳಿ, ಅಲ್ಲಿ ಮೃತ ದೇಹವನ್ನು ಬಿಸಾಕುವ ಯೋಜನೆ ಹಾಕಿಕೊಂಡಿದ್ದನು. ಈ ಮಧ್ಯೆ ಆಟೋ ಚಾಲಕ ಸೂಟ್ ಕೇಸಿನಲ್ಲಿ ಏನಿದೆ ತುಂಬಾ ವಾಸನೆ ಬರುತ್ತಿದೆಯಲ್ವಾ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಭಯಭೀತನಾದ ತಿವಾರಿ, ಸೂಟ್ ಕೇಸನ್ನು ಆಟೋದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಂಶಯಗೊಂಡ ಆಟೋ ಚಾಲಕ, ಇತರ ಆಟೋ ಡ್ರೈವರುಗಳಿಗೆ ಮಾಹಿತಿ ನೀಡುತ್ತಾರೆ. ಇತ್ತ ಕೂಡಲೇ ಸ್ಥಳೀಯ ಮಹಾತ್ಮ ಫುಲೆ ಪೊಲೀಸ್ ಠಾಣೆಗೂ ಮಾಹಿತಿ ರವಾನಿಸುತ್ತಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿವೆ. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ನಂತರ ಸತ್ಯವೇನೆ ಎನ್ನುವುದು ಬೆಳಕಿಗೆ ಬಂದಿದೆ.

Also read: ಜಾತಿ ಕಾರಣ ನೀಡಿ ಪ್ರೀತಿಗೆ ಒಪ್ಪದ ಯುವತಿಯ ಕುಟುಂಬಸ್ಥರು; ಸೇಡು ತೀರಿಸಿಕೊಳ್ಳಲು ಉಗ್ರ ಸಂಘಟನೆಗೆ ಸೇರ್ಪಡೆಯಾದ ಯುವಕ.!