ಮಹಾರಾಷ್ಟ್ರದಲ್ಲಿ ಭಾರತದ ಮೊದಲ 90ರ ಇಳಿ ವಯಸ್ಸಿನ ಅಜ್ಜಿಯರ ಶಾಲೆ

0
494

ವಿದ್ಯೆ ಕಲಿಯುವುದು ಜೀವನೋಪಾಯಕ್ಕಾಗಿ ಅಲ್ಲ, ಜ್ಞಾನಕ್ಕಾಗಿ ಎಂಬುದಕ್ಕೆ ಮಹಾರಾಷ್ಟ್ರದ ಥಾಣೆ ಸಮೀಪದ ಫಂಗಣೆ ಗ್ರಾಮದ ಈ ವೃದ್ಧೆಯರು ಜ್ವಲಂತ ಸಾಕ್ಷಿಯಾಗಿದ್ದಾರೆ.

ವಿದ್ಯೆ ಕಲಿಯಲು ಯಾವ ವಯಸ್ಸಿನ ಮಿತಿ ಇರುವುದಲಿಲ್ಲ ಕಲಿಯಲು ವದಿಯು ಬೇಕಾಗಿಲ್ಲ ಸಾಯುವವರೆಗು ಕಲಿಯಬಹುದು ಎಂದು ಈ ಅಜ್ಜಿಯರು ಸಾಧಿಸಿದ್ದಾರೆ. ಕೃಷಿಯೇ ಪ್ರಧಾನ ಕಸುಬಾಗಿರುವ ಈ ಹಳ್ಳಿಯಲ್ಲಿ ಕೆಲವು ಕುಟುಂಬಗಳಲ್ಲಿ ವೃದ್ಧೆಯರು ಇದ್ದಾರೆ. ಅವರೆಲ್ಲಾರು ವಿದ್ಯೆಕಲಿಯಲು ಮತ್ತು ವಿದ್ಯಾವಂತರಾಗಲು ತಮ್ಮಜ್ಞಾನವನ್ನು ಹೆಚ್ಚಿಸಿಕೊಳ್ಳಲು ಆಸಕ್ತಿ ಇರುವುದನ್ನು ಇರುವುದನ್ನು ಯೋಗೇಂದ್ರ ಬಂಗರ್ ಅವರು ಅಜ್ಜಿಯರಿಹೊಂದು ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು.

ಈ ಶಾಲೆಯನ್ನು ಮಹಿಳೆಯರ ದಿನದಂದು ಪ್ರಾರಂಭಮಾಡಿದ್ದಾರೆ. ಈ ಶಾಲೆ ಶಿಕ್ಷಣ ಕ್ಷೇತ್ರದಲ್ಲೇ ಬೆಲೆ ಕಟ್ಟಲಾಗು ಹಾಗೂ ಶಿಕ್ಷಣದ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಹೇಳಲಾಗಿದೆ.

ಫಂಗಣಿ ಗ್ರಾಮದಲ್ಲಿ 60 ರಿಂದ 90 ವಯಸ್ಸಿನವರು ಇದ್ದಾರೆ, ಇವರೆಲ್ಲಾರು ವಿದ್ಯೆ ಕಲಿಯಲು ಉತ್ಸಾಹಕ್ಕೆ ವೈದ್ಧೆಯರು ಮತ್ತು ಕುಟುಂಬದವರೂ ಒಟ್ಟಾಗಿ ಕಲಿಯಲು ಒಮ್ಮತ ನೀಡಿರುವುದರಿಂದ ಗ್ರಾಮದಲ್ಲಿ ‘ಅಜಿಬೈಂಚಿ ಶಾಲಾ’ ಎಂಬ ಹೆಸರಿನ ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದಾರೆ. ಇವರು ಪ್ರತಿ ದಿನ ಬೆಳಗ್ಗೆ ಶಿಸ್ತಿನಿಂದ ಶಾಲೆಗೆ ಹೊಹಹುತ್ತಾರೆ.

ಈ ಶಿಕ್ಷಣವನ್ನು ಕಲಿಯಲು ಅಜ್ಜಿಯರೆಲ್ಲಾರು ಯಾವುದೇ ಅಂಜಿಕೆ ಇಲ್ಲದೆ ಉತ್ಸಾಹದಿಂದ ಶಾಲೇಗೆಹೊಗಿ ವಿದ್ಯೆಯನ್ನು ಕಲಿಯುತ್ತಿದ್ದಾರೆ. ಮತ್ತು ಇತರರಿಗೂ ಮಾದರಿಯಾಗಿದ್ದಾರೆ.

ಈ ಅಜ್ಜಿಯರ ಶಾಲೇಗೆ ಸಮವಸ್ತ್ರವನ್ನು ಮಾಡಲಾಗಿಗೆ ಅದು ಕೆಂಪು ಬಣ್ಣದ ಧರಿಸುತ್ತಾರೆ. ಶಾಲೆಯಲ್ಲಿ ಕಲಿಸುವ ವಿಷಯವೆಂದರೆ ಗಣಿತ, ಅಕ್ಷರ ಮಾಲೆಗಳು ಸೇರಿದಂತೆ ಎಲ್ಲ ಪ್ರಾಥಮಿಕ ಶಿಕ್ಷಣ ಹಾಗೂ ಅವುಗಳ ಸರಿಯಾದ ಉಚ್ಚಾರ ಕಲಿಸಲಾಗುತ್ತದೆ.ಈ ವಿಷಯಗಳನ್ನು ಚಿಕ್ಕ ಮಕ್ಕಳಂತೆ ಕಪ್ಪು ಬಳಪದಲ್ಲಿ ಸುಣ್ಣದ ಕಡ್ಡಿಯನ್ನು ಹಿಡಿದು ತಿದ್ದುತ್ತಾರೆ. ಇದರ ಜೊತೆಗೆ ಮರಾಠಿ ಪದ್ಯಗಳು ಹಾಗೂ ಶ್ಲೋಕಗಳನ್ನೂ ಇಲ್ಲಿ ಕಲಿಸಲಾಗುತ್ತದೆ.

ಈ ಅಲ್ಲಿಯರ ಶಾಲೆಯಲ್ಲಿ ಶಿಕ್ಷಣ ಪಡೆದ ಕಾಂತ ಎಂಬ ವೃದ್ಧೆಯು ಈಗ ಮರಾಠಿಯಲ್ಲಿ ಓದಬಲ್ಲರು ಹಾಗೂ ಬರೆಯುವುದನ್ನು ಕಲಿತಿದ್ದಾರೆ. ಈ ಶಿಕ್ಷಣವನ್ನು ಪಡೆಯುತ್ತಿರುವ ಕಾರಣ ತಮಗೀನ ಸ್ವತಂತ್ರಗೊಂಡ ಭಾವನೆ ಬರುತ್ತದೆ ಎಂದು ಹೇಲಿದ್ದಾರೆ. “ನನಗೀಗ ಶಿಕ್ಷದ ಮಹತ್ವ ಅರ್ಥವಾಗಿದೆ” ಎಂದು ಹೇಳಿಕೊಂಡಿದ್ದಾರೆ. ಈ ಕಾಂತ ಅವರ ಮೊಮ್ಮಗಳು ಈ ಅಜಿಬೈಂಚಿ ಶಾಲಾ’ಯಲ್ಲಿ ಕಲಿಸುತಿದ್ದಾರೆ. ಇದರಿಂದ ವಿದ್ಯೆ ಕಲಿಯಲು ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೊಮ್ಮೆ ಈ ಗ್ರಮದವರ ವೈದ್ಧೆಯರು ಸಾಬೀತು ಮಾಡಿದ್ದಾರೆ.