ಮೂರನೇ ಮಹಾಯುದ್ಧ ಆಗುತ್ತಾ…..?

0
744

ಒಂದನೇ ಮಹಾಯುದ್ಧ ಹಾಗೂ ಎರಡನೇ ಮಹಾಯುದ್ಧ ಇತಿಹಾಸದ ಪುಟ ಸೇರಿದೆ. ಇದರ ಸಾಧಕ, ಬಾಧಕಗಳನ್ನು ನೋಡಿಯೂ ಈಗ ಸದ್ದಿಲ್ಲದೆ ಮೂರನೇ ಮಹಾಯುದ್ಧ ನಡೆಯುವ ಸೂಚನೆ ಸಿಕ್ಕಿದೆ. ಹಲವು ವರ್ಷಗಳಿಂದ ತನ್ನ ಒಡಲಲ್ಲಿ ಆಕ್ರೋಶದ ಕಿಚ್ಚನ್ನು ಹತ್ತಿಕೊಂಡಿದ್ದ ಅಮೆರಿಕ ಈಗ ಉತ್ತರ ಕೊರಿಯಾ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅಮೆರಿಕ ಈ ನಡೆ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ ಈ ರೀತಿ ಆದಲ್ಲಿ ಇದನ್ನು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂಬ ವಿಶ್ಲೇಷಣೆಗಳು ನಡೆದಿವೆ. ಇದರ ಬೆನ್ನಲ್ಲೆ ತನ್ನ ಮಿತ್ರ ರಾಷ್ಟ್ರ ಉ.ಕೊರಿಯಾ ನೆರವಿಗೆ ಚೀನಾ ಧಾವಿಸಿದ್ದು, ಆತಂಕವನ್ನು ಇಮ್ಮಡಿಗೊಳಿಸಿದೆ. ಇನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಸಹ ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ರವಾನಿಸಿದ್ದಾರೆ.

ಚೀನಾ ಕೊರಿಯಾ ಸಮಸ್ಯೆಯನ್ನು ಇತ್ಯರ್ಥಕ್ಕೆ ನೆರವು ನೀಡಬೇಕು. ಇಲ್ಲದೇ ಇದಲ್ಲಿ ನಾವೇ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಬಹಿರಂಗ ಪಡಿಸಿದ್ದಾರೆ. ಕೊರಿಯಾ ಅಧ್ಯಕ್ಷ ಜೋಂಗ್ ಅಮೆರಿಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರಿಂದ ಬೇಸತ್ತ ಅಮೆರಿಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಟ್ರಂಪ್ ಎಚ್ಚರಿಕೆನೀಡುತ್ತಿದಂತೆ ಜಗತ್ತಿನ ಅತ್ಯಂತ ದೊಡ್ಡ ದೇಶ ಚೀನಾ ತನ್ನ ಸ್ನೇಹಿತ ದೇಶ ಕೊರಿಯಾಗೆ ಸಹಾಯದ ನೆರವು ನೀಡಲು ಮುಂದಾಗಿದ್ದು, ಸೈನಿಕರನ್ನು ಕಳುಹಿಸಿದೆ ಎನ್ನಲಾಗಿದೆ. ಇನ್ನು ಅಮೆರಿಕ ಸಹ ತನ್ನ ಯುದ್ಧ ನೌಕೆಯನ್ನು ಕೊರಿಯಾಗೆ ಕಳುಹಿಸಿದೆ.
ಇದು ಒಂದು ಬದಿಯಾದರೆ ಇನ್ನು ಏಷ್ಯಾ ಖಂಡ ಬದ್ಧ ವೈರಿಗಳೆಂದೆ ಬಿಂಬಿತ ಭಾರತ-ಪಾಕ್ ನಡುವೆಯು ವಾಕ್ವಾರ್ ನಡೆದಿದೆ. ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಅವರನ್ನು ಗುಪ್ತಚರ ಎಂದು ಪಾಕ್ ಬಿಬಿಸುತ್ತಿದೆ. ಗುಢಾಚಾರ, ವಿಧ್ವಂಸಕ ಕೃತ್ಯ ಎಸಗಿದ ಆರೋಪದಲ್ಲಿ ಅವರಿಗೆ ನೇಣು ಶಿಕ್ಷೆ ಆದೇಶ ನೀಡಿದೆ. ಇದಕ್ಕೆ ಕೆಂಡಲಾ ಮಂಡಲವಾಗಿರುವ ಭಾರತ ನೇಣಿ ಗೇರಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಜಾದವ್ ಅವರ ರಕ್ಷಣೆಗೆ ಪ್ರಯತ್ನಿಸುವುದಾಗಿ ಸರ್ಕಾರ ತಿಳಿಸಿದೆ. ಅಲ್ಲದೆ ಸದನದಲ್ಲೂ ಈ ವಿಷಯ ಕೋಲಾಹಲ ಎಬ್ಬಿಸಿದೆ.