ಮುಸುಕಿನ ಜೋಳದ ಆರೋಗ್ಯಕರ ಗುಣಗಳು..!

0
899

ಮುಸುಕಿನ ಜೋಳವನ್ನು ಮೆಕ್ಕೆ ಜೋಳ ಮತ್ತು ಕಾರ್ನ್ ಅಂತಾ ಕೂಡ ಕರೆಯುತ್ತಾರೆ. ಇದು ಭೂಮಿಯ ಮೇಲೆ ವ್ಯಾಪಕವಾಗಿ ಬೆಳೆಯುವ ಏಕದಳ ಬೆಳೆಗಳಲ್ಲಿ ಒಂದಾಗಿದೆ. ಈಗಿನ ಆಹಾರ ಪದ್ಧತಿಯಲ್ಲಿ ಹೊಸ ಟ್ರೆಂಡ್ ಅಂದರೆ ಕಾರ್ನ್‌ಸ್ಟ್ರಾಚ್‌ ಬಳಕೆ. ಕಾರ್ನ್‌ಸ್ಟ್ರಾಚ್‌ ಅಂದರೆ ಮುಸುಕಿನ ಜೋಳದ ತರಿಗಳು. ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವುದರ ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಮಾನವ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ, ಜಾನುವಾರುಗಳ ಮೇವು ಸಹ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ. ಮೆಕ್ಕೆ ಜೋಳವು ಆಹಾರ ಪದಾರ್ಥವಾಗಿ ಜನಪ್ರಿಯವಾಗಿದ್ದು, ಇದು ಜೀವಸತ್ವಗಳು, ಖನಿಜಗಳು ಮತ್ತು ಆಹಾರದ ಫೈಬರ್ಗಳ ಉತ್ತಮ ಮೂಲವಾಗಿದೆ.

ಮೆಕ್ಕೆ ಜೋಳದ ಪ್ರಯೋಜನಗಳು ಇಂತಿವೆ….

ಅಧಿಕ ನಾರಿನಂಶ:
ಮುಸುಕಿನ ಜೋಳದ ತರಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದು ದೇಹಕ್ಕೆ ಪ್ರತಿದಿನ ಅಗತ್ಯವಿರುವ ನಾರಿನಾಂಶವನ್ನು ಪೂರೈಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ರಕ್ತ ಸಂಚಾರವನ್ನು ನಿಯಂತ್ರಣದಲ್ಲಿರಿಸುತ್ತದೆ.

source: alibaba.com

ವಿಟಮಿನ್ ಬಿ ಯ ಆಗರ:
ಮುಸುಕಿನ ಜೋಳದ ತರಿಯಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಬಿ, ನಮ್ಮ ದೇಹವನ್ನು ಲವಲವಿಕೆಯಿಂದ ಇರಿಸುತ್ತದೆ. ಹಾಗೂ ದೇಹದಲ್ಲಿ ಕೆಂಪು ರಕ್ತ ಕಣ ಉತ್ಪತ್ತಿಯಾಗಲು ನೆರವಾಗುತ್ತದೆ. ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗುವ ರೋಗಗಳನ್ನು ಇದು ತಡೆಯುತ್ತದೆ.

source: Natural-HomeRemedies.com

ಕಡಿಮೆ ಕ್ಯಾಲರಿ:
ಕಾರ್ನ್‌ಸ್ಟ್ರಾಚ್‌ನಲ್ಲಿ ಕ್ಯಾಲರಿ ಅಂಶ ಕಡಿಮೆಯಿದೆ ಎನ್ನುವುದು ಅತ್ಯಂತ ಗಮನಾರ್ಹ. ಆದ್ದರಿಂದ ಇದರ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ ಎಂಬ ಭಯ ಬೇಡ. ಜೊತೆಗೆ ಮಧುಮೇಹ ಹಾಗೂ ಕೊಬ್ಬನ್ನೂ ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ದೇಹ ತೂಕವನ್ನೂ ಕಾಯ್ದುಕೊಳ್ಳಬಹುದು.

ಸ್ಕಿನ್‌ ಅಲರ್ಜಿ ನಿವಾರಣೆ:
ಇದು ಸ್ಕಿನ್‌ ಇರಿಟೇಶನ್‌ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಅಲರ್ಜಿ, ಸನ್‌ಬರ್ನ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡಾಗ ಇದನ್ನು ಪೇಸ್ಟ್‌ ಮಾಡಿ ಸ್ಕಿನ್‌ಗೆ ಹಚ್ಚಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:
ಇದರಲ್ಲಿ ಹೆಚ್ಚಿಯ ಫೈಬರ್‌ ಅಂಶ ಇದೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆಗಳನ್ನು ಸಹ ನಿವಾರಣೆ ಮಾಡುತ್ತದೆ.

source: tradeindia.com

ದೇಹಕ್ಕೆ ಶಕ್ತಿ ನೀಡುತ್ತದೆ:
ಗ್ಲುಟೆನ್ ಮುಕ್ತ ಆಹಾರ ಸೇವಿಸುವವರಿಗೆ ಕಾರ್ನ್‌ಸ್ಟ್ರಾಚ್‌ ಸೂಕ್ತ ಆಯ್ಕೆಯಾಗಿದೆ. ಇದರಲ್ಲಿರುವ ಅಧಿಕ ಪ್ರಮಾಣದ ಕಾರ್ಬೊಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ತುಂಬುತ್ತವೆ.

source: aliexpress.com

ರಕ್ತಹೀನತೆ ನಿವಾರಣೆ:
ವಿಟಾಮಿನ್‌ ಬಿ12 ಮತ್ತು ಫಾಲಿಕ್‌ ಆಸಿಡ್‌ ಕಡಿಮೆ ಆಗುವುದರಿಂದ ಅನಿಮಿಯಾ ಸಮಸ್ಯೆ ಕಾಡುತ್ತದೆ. ಈ ಸಮಯದಲ್ಲಿ ನೀವು ಕಾರ್ನ್‌ ಸ್ಟ್ರಾಚ್‌ ಸೇವನೆ ಮಾಡಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ. ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚುತ್ತವೆ.

source: ekunji.com

ಕೆಲವು ಕ್ಯಾನ್ಸರ್ಗಳ ಪರಿಣಾಮಗಳನ್ನು ಎದುರಿಸುತ್ತದೆ:
ಧಾನ್ಯಗಳು ಸಾಮಾನ್ಯವಾಗಿ ಗೋಧಿ, ಅಕ್ಕಿ, ರಾಗಿ, ಓಟ್ಮೀಲ್ ಮತ್ತು ಮೆಕ್ಕೆ ಜೋಳವನ್ನು ದೊಡ್ಡ ಪ್ರಮಾಣದಲ್ಲಿ ತಿನ್ನಬೇಕು ಏಕೆಂದರೆ ಅವು ಕಾರ್ಬೋಹೈಡ್ರೇಟ್ಗಳು ಮತ್ತು ಪಿಷ್ಟದ ಮೂಲಗಳಾಗಿ ಇರುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಮೆಕ್ಕೆ ಜೋಳದ ಬಳಕೆಯು ಕೆಲವು ಕ್ಯಾನ್ಸರ್ಗಳ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

source: drronacher.com