ಬಹು ನಿರೀಕ್ಷೆಯ ಮಜಾ ಟಾಕೀಸ್ ಸೀಸನ್ 2 ಬರುತ್ತಿದೆ, ನಗಿಸಲು ಸೃಜನ್ ರೆಡಿ, ನಗಲು ನೀವು ರೆಡಿನಾ??

0
1384

ಮಜಾ ಟಾಕೀಸ್, ಈ ಕಾರ್ಯಕ್ರಮ ಕನ್ನಡಲ್ಲಿಯೇ ಒಂದು ಹೊಚ್ಚ ಹೊಸ ಉಪಾಯದಿಂದ ಹೊರಬಂದ ಕಾರ್ಯಕ್ರಮ. ಈ ಕಾರ್ಯಕ್ರಮದ ಮೊದಲನೇ ಆವೃತ್ತಿ ಅಥವಾ ಸೀಸನ್ 1 ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಇನ್ನು ಟಿಆರ್ ಪಿ ವಿಷಯದಲ್ಲಂತೂ ಈ ಕಾರ್ಯಕ್ರಮವನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗಿತ್ತು ಇದರ ಖ್ಯಾತಿ. ಇನ್ನು ಈ ಕಾರ್ಯಕ್ರಮದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಏನೆಂದರೇ ಸೃಜನ್ ಮತ್ತೊಮ್ಮೆ ನಿಮ್ಮನ್ನು ನಗಿಸಲು ಮಜಾ ಟಾಕೀಸ್ ಸೀಸನ್ 2 ನಲ್ಲಿ ಬರುತ್ತಿದ್ದಾರೆ.

ನಟಿ ಶ್ವೇತ ಚೆಂಗಪ್ಪ ಮತ್ತು ಸೃಜನ್ ಲೋಕೇಶ ನಿರೂಪಣೆಯ ಮಜಾ ಟಾಕೀಸ್, ಕನ್ನಡದ ಮಟ್ಟಿಗೆ ಹೊಸ ರೀತಿಯ ಟಾಕ್ ಶೋ, ಇನ್ನು ಹಿಂದಿಯ ಸೂಪರ್ ಹಿಟ್ ಕಾಮಿಡಿ ಶೋ ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ನಿಂದ ಪ್ರೇರಿತರಾಗಿ ಇದನ್ನು ಮಾಡಲಾಗಿತ್ತು ಎಂದು ಹೇಳಾಗುತ್ತಿತ್ತು. ಆದರೆ ಕನ್ನಡದಲ್ಲಿ ನಟ ಸೃಜನ್ ಕಾರ್ಯಕ್ರಮದ ದಿಕ್ಕನ್ನೇ ಬದಲಾಯಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.

ಇನ್ನು ಈ ಶೋ ನಲ್ಲಿ ಮಿಮಿಕ್ರೀ ದಯಾನಂದ್, ಸಂಗೀತ ನಿರ್ದೇಶಕ ವಿ. ಮನೋಹರ್, ಕಿರುತೆರೆ ನಟಿ ಉಷಾ ಭಂಡಾರಿ ಹಾಗೂ ನಿರೂಪಕಿ ಅಪರ್ಣ ಕೂಡ ಮನೋಜ್ಞವಾಗಿ ನಟಿಸಿ, ಜನರನ್ನು ಮನರಂಜಿಸಿದ್ದರು. ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ತೀರ್ಪುಗಾರರಾದ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಅವರಿಗೆ ಸೈಡ್ ಹೊಡೆಯುವ ಹಾಗೆ ಇತ್ತು ಇಂದ್ರಜೀತ್ ಲಂಕೇಶ್ ಅವರ ನಗು ಹಾಗು ಹಾಸ್ಯ ಚಟಾಕಿಗಳು.

ಈ ಶೋ ಶನಿವಾರ ಮತ್ತು ಭಾನುವಾರ ಸಂಜೆ 7 ರಿಂದ 8 ರ ತನಕ ಪ್ರೇಕ್ಷಕರನ್ನು ಮನರಂಜನೆ ನೀಡುತ್ತ ಮಿಕ್ಕೆಲ್ಲಾ ಶೋ ಗಳಿಗೆ ಸೈಡ್ ಹೊಡೆದಿತ್ತು. ಕೇವಲ ಕಾಮಿಡಿ ಮಾತ್ರವಲ್ಲದೆ ಬಿಡುಗಡೆಯ ಸಮೀಪಿಸುತ್ತಿರುವ ಚಿತ್ರಗಳ ನಟ-ನಟಿಯರನ್ನು ಶೋ ಗೆ ಕರೆಸಿ ಅವರೊಂದಿಗೆ ಹಾಸ್ಯಾಸ್ಪದ ಮಾತುಗಳನ್ನು ಆಡುತ್ತ, ಸಾಮಾನ್ಯ ಜನರಿಗೆ ತಮ್ಮ ನೆಚ್ಚಿನ ನಟ-ನಟಿಯರ ಜೊತೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದರು.

ಮಜಾ ಟಾಕೀಸ್ ನಲ್ಲಿ ಕನ್ನಡದ ಹೆಸರಾಂತ ನಟ ನಟಿಯರು, ಹಲವು ಸೆಲೆಬ್ರಿಟಿಗಳು ತಮ್ಮ ಚಿತ್ರದ ಪ್ರಚಾರಕ್ಕೆಂದು ಮಜಾ ಟಾಕೀಸ್ ಗೆ ಬಂದಿದ್ದಾರೆ. ಅವರಲ್ಲಿ ಪ್ರಮುಖರು ಪುನೀತ್ ರಾಜಕುಮಾರ್, ದರ್ಶನ, ಕಿಚ್ಚ ಸುದೀಪ್, ಶರಣ್, ಪೂಜಾಗಾಂಧಿ, ಪಾರೂಲ್, ರಕ್ಷಿತ್ ಶೆಟ್ಟಿ, ಯೋಗರಾಜ ಭಟ್ ಮತ್ತು ಇನ್ನು ಸಾಕಷ್ಟು ಜನ ಅತಿಥಿಗಳಾಗಿ ಬಂದಿದ್ದರು.

ಒಟ್ಟಿನಲ್ಲಿ ಮಜಾ ಟಾಕೀಸ್ ಸೀಸನ್ 2 ಬರುತ್ತಿರುವುದಂತೂ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದೆ.