ಮಜಾ ಟಾಕೀಸ್ ಮುಗಿದ ಮೇಲೆ ಸೃಜನ್ ಲೋಕೇಶ್ ಮುಂದಿನ ಕಾರ್ಯಕ್ರಮ ಯಾವುದು ಗೊತ್ತ??

0
631

ದಿಗ್ಗಜ ನಟ ಲೋಕೇಶ್-ರವರ ಪುತ್ರ ಸೃಜನ್ ಲೋಕೇಶ್-ರವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಿನೆಮಾಗಳಲ್ಲಿ ಅಷ್ಟೇನೂ ಯಶಸ್ಸು ಕಾಣದೆ ಇದ್ದರೂ ಕಿರುತೆರೆಯಲ್ಲಿ ತಮ್ಮ ಛಾಪನ್ನು ಮೂಡಿಸಿ ಒಬ್ಬ ಸಿನಿಮಾ ಹೀರೊನಷ್ಟೇ ಜನಪ್ರಿಯರಾಗಿದ್ದಾರೆ. ‘ಮಜಾ ವಿಥ್ ಸೃಜಾ’ ಕಾರ್ಯಕ್ರಮ ಕೂಡ ಭಾರಿ ಜನಪ್ರಿಯತೆ ಪಡೆದಿತ್ತು, ತದ ನಂತರ ‘ಮಜಾ ಟಾಕೀಸ್’ ಇವರಿಗೆ ತುಂಬಾ ಯಶಸ್ಸು ತಂದು ಕೊಟ್ಟಿದ್ದು ಇತಿಹಾಸ.

ಕೇವಲ ಕಿರುತೆರೆ ಮಾತ್ರವಲ್ಲದೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ ನೇರವಾಗಿ ನೋಡುವುದಕ್ಕೂ ಭಾರಿ ಬೇಡಿಕೆ ಇತ್ತು. ಮಜಾ ಟಾಕೀಸ್ ಕೊನೆಯ ಹಂತಗಳಲ್ಲಿ ಮೊದಲಿದ್ದ ಜನಪ್ರಿಯತೆ ಉಳಿಸಿಕೊಳ್ಳಲು ಆಗಲಿಲ್ಲ, ಇನ್ನೂ ಜನಪ್ರಿಯತೆ ಕಡಿಮೆ ಆಗದಿರಲಿ ಎಂದು ಹಾಗು ತುಂಬಾ ಒತ್ತಡವಿದ್ದ ಕಾರಣ ಮಜಾ ಟಾಕೀಸ್-ನನ್ನ ಸೃಜನ್ ನಿಲ್ಲಿಸಿದರು ಎಂದು ವದಂತಿಗಳು ಹೇಳುತ್ತಿವೆ.

ಮಜಾ ಟಾಕೀಸ್ ನಿಂತರು, ಸೃಜನ್-ರವರ ಜನಪ್ರಿಯತೆ ಒಂದು ಚೂರು ಕಡಿಮೆಯಾಗಿಲ್ಲ. ಆದರೆ ಮಜಾ ಟಾಕೀಸ್ ನಿಂತಾಗ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದಂತೂ ನಿಜ. ಅವರ ಅಭಿಮಾನಿಗಳು ಮಾತ್ರವಲ್ಲ ಎಲ್ಲರಿಗು ಸೃಜನ್-ರವರ ಮುಂದಿನ ಕಾರ್ಯಕ್ರಮ ಯಾವುದು ಅಂತ ಕುತೂಹಲವಿತ್ತು.

ಮಜಾನಿಂದ ಕಾಮಿಡಿ ಕಡೆ ಹೊರಟ ಸೃಜನ್ ಲೋಕೇಶ್:
ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ, ಶೀಘ್ರವೇ ಸೃಜನ್-ರವರು ‘ಕಾಮಿಡಿ ಟಾಕೀಸ್’ ಅನ್ನೋ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಒಂದು ರಿಯಾಲಿಟಿ-ಕಾಂಪಿಟಿಷನ್ ಶೋ ಆಗಿದ್ದು ಇದರಲ್ಲಿ ಹಲವಾರು ಉದಯೋನ್ಮುಖ ಹಾಸ್ಯ ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮದಲ್ಲಿ ಸೃಜನ್-ರವರು ಜಡ್ಜ್-ಆಗಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಶೋ-ನ ಮುಖ್ಯ ಆಕರ್ಷಣೆಯಾಗಿದ್ದ ಇವರ ಹಾಸ್ಯ ಚಟಾಕಿಗಳು, ತೀರ್ಪುಗಾರರಾದ ಮೇಲೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೇಳಬಹುದೇನೋ. ಒಟ್ಟಿನಲ್ಲಿ ಸೃಜನ್ ಮತ್ತೆ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗು ಸಂತೋಷ ತಂದಿದೆ.

ಸೃಜನ್-ರವರ ಜೊತೆ ಗುಳಿ ಕೆನ್ನೆಯ ಬೆಡಗಿ ರಚಿತಾ ರಾಮ್ ಕೂಡ ತೀರ್ಪುಗಾರರಾಗಲಿದ್ದಾರೆ, ಇವರಿಬ್ಬರ ಜೋಡಿ ತುಂಬಾ ಚೆನ್ನಾಗಿ ಮೂಡಿಬರಲಿದೆ ಎಂಬುದೇ ಜನರ ನಿರೀಕ್ಷೆ. ರಚಿತಾ ರಾಮ್ ಕೂಡ ಒಳ್ಳೆಯ ಪ್ರತಿಭೆಯುಳ್ಳ ನಟಿ, ಇವರಿಬ್ಬರು ಪ್ರತಿಭಾವಂತರನ್ನು ಮೆಚ್ಚಿಸುವುದು ಸಾಮಾನ್ಯವಾದ ಮಾತಲ್ಲ.

ಈ ಕಾರ್ಯಕ್ರಮವನ್ನು ಅಗ್ನಿ ಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯರವರು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಕಾರ್ಯಕ್ರಮ ಶೀಘ್ರವೇ ಕಿರುತೆರೆ ಮೇಲೆ ಬರಲಿದೆ, ಪ್ರೇಕ್ಷಕರನ್ನು ಮನರಂಜಿಸುವ, ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡುವ ಕಾರ್ಯಕ್ರಮವೊಂದು ಕಿರುತೆರೆ ಮೇಲೆ ಬರುತ್ತಿರುವುದು ಸಂತಸದ ವಿಷಯ, ಕಾರ್ಯಮಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸೋಣ.