ವಾಹನ ದಾಖಲಾತಿಯಲ್ಲಿ ಭಾರಿ ಬದಲಾವಣೆ; ಅಕ್ಟೋಬರ್​​ 1ರಿಂದಲೇ ದೇಶಾದ್ಯಂತ ಒಂದೇ ಮಾದರಿ ಡಿಎಲ್, ಆರ್.ಸಿ.

0
349

ಈಗಾಗಲೇ ಕೇಂದ್ರ ಸರ್ಕಾರ ವಾಹನ ಸಂಚಾರಿ ನಿಯಮಕ್ಕೆ ಸಂಬಂಧಪಟ್ಟಂತೆ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಸಂಚಾರಿ ನಿಯಮದಲ್ಲಿ ಮತ್ತೊಂದು ನಿಯಮ ಜಾರಿ ಮಾಡಿದ್ದು. ಅಕ್ಟೋಬರ್​​ 1ರಿಂದ ಡಿಎಲ್​​​​, ಆರ್​​ಸಿ ಪತ್ರದಲ್ಲಿ ಭಾರೀ ಬದಲಾವಣೆ ಆಗಲಿದ್ದು, ಇನ್ನು ಮುಂದೆ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್ ನಿಯಮ ಜಾರಿಗೆ ಬರಲಿದ್ದು, ಒಂದೇ ಮಾದರಿಯ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನಗಳ ಪ್ರಮಾಣ ಪತ್ರ(ಆರ್.ಸಿ.) ನೀಡಲಾಗುವುದು. ಸ್ಮಾರ್ಟ್ ರಿಯಲ್ ಕಾರ್ಡ್ ಮತ್ತು ಆರ್.ಸಿ. ಗಳು ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್ ಗಳನ್ನು ಹೊಂದಿರಲಿದೆ. ಇವುಗಳ ಸಹಾಯದಿಂದ ಸಂಚಾರ ಪೊಲೀಸರು ತಮ್ಮಲ್ಲಿರುವ ಡಿವೈಸ್ ಗೆ ಆರ್.ಸಿ., ಡಿ.ಎಲ್. ಹಿಡಿದಾಗ ಮಾಹಿತಿ ಸಿಗಲಿದೆ.

Also read: ಅಮೆರಿಕಾದಲ್ಲಿ ಮೋದಿ ಕನ್ನಡ ಸೇರಿ ಅನೇಕ ಭಾರತೀಯ ಭಾಷೆಯಲ್ಲಿ ಮಾತಾಡಿದ್ದು ವಿಶೇಷ, ಹಿಂದಿ ಹೇರಿಕೆ ವಿವಾದಕ್ಕೆ ಈಥರ ಉತ್ತರ ಕೊಟ್ರ ಮೋದಿ?

ಏನಿದು ಒಂದೇ ಮಾದರಿ DL, RC?

ಹೌದು ಡಿಎಲ್​​ ಮತ್ತು ಆರ್​​ಸಿ ಪತ್ರವನ್ನು ಒಂದೇ ರೀತಿಯಾಗಿ ಮುದ್ರಿಸಲಾಗುವುದು. ಹಳೆಯ ವಿನ್ಯಾಸ, ಮುದ್ರಣ ಶೈಲಿ ಎಲ್ಲವೂ ಬದಲಾಗಲಿವೆ. ಅಂತೆಯೇ ಎರಡೂ ದಾಖಲೆಗಳಲ್ಲೂ ಮೈಕ್ರೋಚಿಪ್‌ ಮತ್ತು ಕ್ಯೂ ಆರ್‌ ಕೋಡ್‌ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಚಾರವನ್ನು ಬಹುದಿನಗಳ ಹಿಂದೆಯೇ ತಿಳಿಸಿದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದ ಬಳಿಕ ಕೇಂದ್ರ ಸರ್ಕಾರವೂ ವಾಹನ ಚಾಲನೆ ಪರವಾನಿಗೆ ಮತ್ತು ದಾಖಲಾತಿ ಪತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇಡೀ ದೇಶದಲ್ಲಿ ಒಂದೇ ಮಾದರಿಯ ಡಿಎಲ್​​ ಮತ್ತು ಆರ್​​ಸಿ ಪತ್ರವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳು ಅಕ್ಟೋಬರ್​​​​ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ.

Also read: ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪರಿಸರ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ ಸರಳತೆ ಮೆರೆದ ನರೇಂದ್ರ ಮೋದಿಯವರ ವೀಡಿಯೋ ಭಾರಿ ವೈರಲ್.!

ಟ್ರಾಫಿಕ್​​ ಪೊಲೀಸರಿಗೆ ಟ್ರ್ಯಾಕಿಂಗ್‌ ಉಪಕರಣ;

ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್​​ ಪೊಲೀಸ್​​ ಠಾಣೆಗಳಿಗೆ ಟ್ರ್ಯಾಕಿಂಗ್‌ ಉಪಕರಣ ನೀಡಲಾಗಿದೆ. ಈ ಟ್ರ್ಯಾಕಿಂಗ್​​​ ಉಪಕರಣದ ಮೂಲಕ ಪೊಲೀಸರು ಯಾವುದೇ ವಾಹನದ ಮಾಹಿತಿಯನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಆಗಸ್ಟ್​​ ತಿಂಗಳಲ್ಲಿಯೇ ಮೋಟಾರು ವಾಹನ(ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿತ್ತು. ಸಂಚಾರ ನಿಯಮ ಉಲ್ಲಂಘನೆ ತಡೆಯುವುದೇ ಈ ಮಸೂದೆಯ ಮೂಲ ಉದ್ದೇಶವಾಗಿತ್ತು. ಒಂದು ವೇಳೆ ಇನ್ಮುಂದೆ ಯಾರಾದರೂ ರಸ್ತೆಯಲ್ಲಿ ಕುಡಿದು ಅಡ್ಡಾದಿಡ್ಡಿ ವಾಹನ ಚಲಾಯಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಟ್ರಾಫಿಕ್​​​ ಪೊಲೀಸ್​​ ಮೂಲಗಳು ತಿಳಿಸಿದ್ದವು.

Also read: ಉಪ ಚುನಾವಣೆ ಸಿದ್ದವಾದ ಕಾಂಗ್ರೆಸ್; 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ, ಯಾವ ಕ್ಷೇತ್ರಕ್ಕೆ ಯಾರು ಪ್ರಭಾವಿ ಅಭ್ಯರ್ಥಿ??

ಅದರಂತೆ ದೆಶ್ಯಾದಂತ ಕಟ್ಟುನಿಟ್ಟಿನ ಸಾರಿಗೆ ಸಂಚಾರ ನಿಯಮಗಳನ್ನು ಹೊಂದಿರುವ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆಪ್ಟೆಂಬರ್​​ 2ರಿಂದಲೇ ದೇಶಾದ್ಯಂತ ಚಾಲನೆಗೆ ಬಂದಿತ್ತು. ಆದರೆ, ಕೆಲ ಬಿಜೆಪಿಯೇತರ ಸರ್ಕಾರಗಳು ಈ ಹೊಸ ಕಾನೂನನ್ನು ಜಾರಿಗೆ ತರಲು ಹಿಂದೆ ಮುಂದೆ ನೋಡುತ್ತಿದ್ದವು. ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳ ಹಾಗೂ ಕಾಂಗ್ರೆಸ್ ಆಡಳಿತವಿರುವ ಮಧ್ಯ ಪ್ರದೇಶ ರಾಜ್ಯಗಳು ಕೇಂದ್ರದ ಈ ನೂತನ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಿರಲು ನಿರ್ಧರಿಸಿದ್ದವು. ಪೊಲೀಸರು ಹಲವು ಪ್ರಕರಣಗಳಲ್ಲಿ 1 ಲಕ್ಷಕ್ಕೂ ಅಧಿಕ ದಂಡ ವಿಧಿಸಿದ ಬೆನ್ನಲ್ಲೇ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಗುಜರಾತ್, ಕರ್ನಾಟಕವೂ ಕೂಡ ರಾಜ್ಯಕ್ಕೆ ಬೇಕಾದಂತೆ ದುಬಾರಿ ದಂಡವನ್ನು ಕಡಿಮೆಗೊಳಿಸಿ ಆದೇಶ ಹೊರಡಿಸಿದರು.