ಮಕರ ಜ್ಯೋತಿಯನ್ನು ಕಂಡು ಪುನೀತರಾದ ಭಕ್ತವೃಂದ..

0
960

ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ಪಡೆದ ಅಯ್ಯಪ್ಪ ಸ್ವಾಮಿ ಭಕ್ತರು ಪುನೀತರಾದರು. ಸಂಕ್ರಮಣ ದಿನದ ಅಂಗವಾಗಿ ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ನಿನ್ನೆ ಸಂಜೆ 6.44ರ ಸುಮಾರಿಗೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತ್ತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಂಡರು.

ಯಾವುದೇ ಬೇದಭಾವವಿಲ್ಲದೆ ಕಡು ಬಡವರಿಂದ ಶ್ರೀಮಂತರವರೆಗೂ ಪ್ರತಿ ವರ್ಷವೂ ಶಬರಿಮಲೆಗೆ ಭಕ್ತಾದಿಗಳಾಗಿ ಆಗಮಿಸಿ ಅಯ್ಯಪ್ಪ ಸ್ವಾಮಿ ಹಾಗೂ ಜ್ಯೋತಿಯ ದರ್ಶನ ಪಡೆದು ಲಂಕ್ಷಾಂತರ ಜನ ಪುನೀತರಾಗುವರು. ಶಬರಿಮಲೆಗೆ ಕೇವಲ ದಕ್ಷಿಣ ಭಾರತ ರಾಜ್ಯಗಳಿಂದಷ್ಟೇ ಅಲ್ಲದೆ ಉತ್ತರ ಭಾರತದ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.

ಗಂಗಾದರನನ್ನು ಸ್ಪರ್ಶಿಸಿದ ಸೂರ್ಯದೇವ

ಇನ್ನು ಇತ್ತ ಗವಿಪುರಂನ ಗವಿ ಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸೂರ್ಯದೇವ ಸ್ಪರ್ಶಿಸಿದ ಅಪೂರ್ವ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು. ಸಂಜೆ 5.15 ರಿಂದ 5.30ರ ತನಕ ಸೂರ್ಯನ ಕಿರಣಗಳು ಶನವಲಿಂಗವನ್ನು ಸ್ಪರ್ಶಿಸಿದೆ.

ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬೆಳಕಿನ ಚಮತ್ಕಾರವೊಂದು ಕಣ್ಣಿಗೆ ಹಬ್ಬ. ಶಿವನೂ ಸೂರ್ಯನೂ ಒಂದೇ ಕಡೆ ಮುಖಾಮುಖಿಯಾಗುವ ಅಪೂರ್ವ ಕ್ಷಣವಿದು.ಸೂರ್ಯನು ಗಂಗಾಧರನ ಪಾದ ಸ್ಫರ್ಶಿಸಿ ಪಥ ಬದಲಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮಕರ ಸಂಕ್ರಾಂತ್ರಿಯ ಮೊದಲು 10 ದಿನ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಚಲಿಸುವ ಎಲ್ಲಾ ಲಕ್ಷಣಗಳು ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಕಾಣಿಸುತ್ತದೆ. ಆದರೆ ಮಕರ ಸಂಕ್ರಾಂತಿಯಂದು ಸೂರ್ಯಸ್ತ ಸಮಯದಲ್ಲಿ ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣ ಕಿಟಕಿಯ ಮೂಲಕ ಹಾದು, ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವನ ಪಾದವನ್ನು ನೇರವಾಗಿ ಸ್ಪರ್ಶಿಸುವ ಮೂಲಕ ಸಂಪೂರ್ಣವಾಗಿ ಪಥ ಬದಲಿಸುವುದನ್ನು ಕಾಣಬಹುದು. ಅಪಾರ ಸಂಖ್ಯೆಯಲ್ಲಿ ಭಕ್ತರು ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.