ನವರಾತ್ರಿಯ ಹಬ್ಬದಲ್ಲಿ ಶೇಂಗಾ ಹೋಳಿಗೆಯನ್ನು ಮಾಡಿ ಸವಿದು ನೋಡಿ…

0
1062

ನವರಾತ್ರಿಯ ಒಂಬತ್ತು ದಿನಗಳ ಉಪವಾಸದ ಬಳಿಕ ಬರುವ ದಸರಾ ಹಬ್ಬ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಇಡಿಯ ದೇಶದಲ್ಲಿ ಭಕ್ತಿ ಮತ್ತು ಸಂಭ್ರಮದಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ ಹಾಗೆ 9 ದಿನವು ತರಹತರಹದ ಸಿಹಿ ಅಡುಗೆ ಮಾಡಿ ಸವಿಯಿತ್ತಾರೆ.

Also read: ಮೈಸೂರಿನ ಮಹಾರಾಜರಿಂದ ಹೆಸರು ಪಡೆದ ಮೈಸೂರು ಪಾಕ್ ತಯಾರಿಸುವ ವಿಧಾನ..

ಕೊನೆಯಲ್ಲಿ ಬರುವ ವಿಜಯ ದಸಮಿಯ ಹಬ್ಬದಲ್ಲಿ ಶೇಂಗಾ, ಕಡಲೆ, ಬೆಳೆ ಹೋಳಿಗೆ, ಕಡಲೆಬೇಳೆಯಿಂದ ತಯಾರಿಸಿದ ಹೂರಣದ ಹೋಳಿಗೆ, ಕಾಯಿ ಹೋಳಿಗೆ, ಸಕ್ಕರೆ ಹೋಳಿಗೆ ಮುಂತಾದ ತರಹೇವಾರಿ ಹೋಳಿಗೆಗಳನ್ನು ಮಾಡುತ್ತಾರೆ. ಇವೆಲ್ಲಕ್ಕೆ ಹೊರತಾಗಿ ಹೊಸಬಗೆಯ ಸಿಹಿತಿನಿಸನ್ನು ಬಯಸುವವರಿಗೆ ಹೊಸರುಚಿ. ಶೇಂಗಾ ಹೋಳಿಗೆಯನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

Also read: ಡ್ರೈ ಫ್ರೂಟ್ಸ್-ನಿಂದ ಮಾಡಿದ ಪೌಷ್ಟಿಕಾಂಶಯುಕ್ತ, ಗೋಕಾಕ್ ಕರದಂಟು ಮಾಡುವ ವಿಧಾನ..!!

 • ಒಂದು ಬಟ್ಟಲು ಶೇಂಗಾ
 • ಒಂದು ಬಟ್ಟಲು ಬೆಲ್ಲ
 • ಒಂದು ಬಟ್ಟಲು ಗೋಧಿಹಿಟ್ಟು
 • ಒಂದು ಚಮಚ ಏಲಕ್ಕಿ ಪುಡಿ
 • ತಕ್ಕಷ್ಟು ಅಡುಗೆ ಎಣ್ಣೆ

  ಮಾಡುವ ವಿಧಾನ:

Also read: ದೇಶಾದ್ಯಂತ ಹೆಸರು ಮಾಡಿದ ಬೆಳಗಾಂ ಕುಂದಾ ತಯಾರಿಸುವ ವಿಧಾನ..!!

 • ಶೇಂಗಾ ಅಥವಾ ಕಡಲೆಕಾಯಿ ಬೀಜಗಳನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ.
 • ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು.
 • ನಂತರ ಉಂಡೆ ಬೆಲ್ಲವನ್ನು ಹೆರೆದಿಟ್ಟುಕೊಂಡು ಅದಕ್ಕೆ ಪುಡಿ ಮಾಡಿದ ಶೇಂಗಾವನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು.
 • ನಂತರ ಗೋಧಿಹಿಟ್ಟಿನ ಕಣಕವನ್ನು ತಯಾರಿಸುವುದು. ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ.
 • ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ.
 • ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿರಿ.
 • ನೆನಪಿಡಿ, ಈ ಶೇಂಗಾ ಹೋಳಿಗೆಯನ್ನು ಬಿಸಿಬಿಸಿಯಾಗಿರುವಾಗಲೇ ತಿಂದರೆ ರುಚಿಯಾಗಿರುತ್ತೆ.
 • ಒಂದು ಚಮಚ ತುಪ್ಪದೊಡನೆ ತಿಂದರೆ ರುಚಿಯಾಗಿರುತ್ತದೆ.