ಪ್ರಧಾನಿಯ ಮಹತ್ವಾಕಾಂಕ್ಷೆಯ “ಮೇಕ್ ಇನ್ ಇಂಡಿಯಾ” ಯೋಜನೆಯನ್ನು ದುರಪಯೋಗ ಪಡೆಸಿಕೊಂಡು, ಭಾರತೀಯರಿಗೆ ಮೋಸ ಮಾಡುತ್ತಿರುವ ಚೀನಿ ಮೊಬೈಲ್ ಕಂಪನಿಗಳು!!

0
917

Kannada News | Karnataka News

ಈಗ ಎಲ್ಲರ ಬಳಿಯೂ ಬಿನ್ನ ವಿಭಿನ್ನ ರೀತಿಯ ಮೊಬೈಲ್ ಗಳು ಬಳಸುತ್ತಾರೆ. ಇದನ್ನು ಪಡೆಯುವಾಗ ಗ್ರಾಹಕ ಇದು ಎಲ್ಲಿ ತಯಾರಿಸಲ್ಪಟ್ಟಿದ್ದು ಎಂದು ನೋಡುತ್ತಾನೆ. ಹಾಗಿದ್ರೆ ನಿಮಗೆ ಗೊತ್ತಾ ನಿಮ್ಮ ಕೈಯನಲ್ಲಿನ ಮೊಬೈಲ್ ಎಲ್ಲಿ ತಯಾರಾಗುತ್ತವೆ..? ಭಾರತ ಈ ಮೊಬೈಲ್ ಗಳಿಗೆ ಯಾವ ಪಾರ್ಟ್ ತಯಾರು ಮಾಡುತ್ತದೆ ಎಂದು ತಿಳಿದುಕೊಳ್ಳಲೇ ಬೇಕು.

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮೇಕಿನ್‍ ಇಂಡಿಯಾ. ಈ ಯೋಜನೆಯಡಿ ಹಲವು ಕಂಪನಿಗಳು ತಮ್ಮ ಉತ್ಪವನ್ನು ಭಾರತದಲ್ಲಿ ಆರಂಭಿಸಲಿ ಎಂಬುದೇ ಪ್ರಧಾನಿಯವರ ಆಶಯ ಹಾಗೂ ಇದರ ಸಹಾಯದಿಂದ ದೇಶದ ಆರ್ಥಿಕತೆ ಸುಧಾರಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಿ ಎಂಬ ಕನಸು ಪ್ರಧಾನಿ ಅವರದ್ದು.

ನಿಮ್ಮ ಕೈಯಲ್ಲಿನ ಮೊಬೈಲ್‍ನ ಚಾರ್ಜರ್‍ ಹಾಗೂ ಹೆಡ್‍ ಫೋನ್ ಭಾರತದ್ದು. ಇಲ್ಲವೇ ಬೇರೆ ದೇಶದ್ದು. ಇದನ್ನು ಬಿಟ್ರೆ ಮೊಬೈಲ್‍ನ ಯಾವುದೇ ಪಾರ್ಟ್ ಇಂಡಿಯಾದಲ್ಲಿ ತಯಾರಿಸಲಾಗದು. ಅಲ್ಲದೆ ಮೊಬೈಲ್ ಬಾಡಿ ಸಹ ಬೇರೆ ದೇಶದಲ್ಲೇ ತಯಾರಾಗುತ್ತದೆ.

ಇನ್ನು ನಿಮ್ಮ ಮೊಬೈಲ್‍ನಲ್ಲಿರುವ ಮದರ್‍ ಬೋರ್ಡ್, ಸೆನ್ಸಾರ್, ಮೈಕ್, ಮುತಾಂದವಗಳನ್ನು ಬೇರೆ ದೇಶಗಳಿಂದ ತಂದು ಭಾರತದಲ್ಲಿ ಜೋಡಿಸಲಾಗುತ್ತದೆ. ಅಂದ್ರೆ ಬೇರೆ ದೇಶದ ವಸ್ತು ಎಂದಂತಾಯಿತು ಅಲ್ಲವೆ. ಇನ್ನು ಮೊಬೈಲ್ ಕಂಪೋನಂಟ್ಸ್‍ಗಳನ್ನು ಚೀನಾ, ಜಪಾನ್, ಕೊರಿಯಾ ದೇಶದಲ್ಲಿ ಉತ್ಪಾದಿಸಲಾಗುತ್ತದೆ.

ಕಂಪನಿಗಳು ಸುಂಕವನ್ನು ಕಡಿಮೆ ಮಾಡಲು ಬಿಡಿ ಭಾಗಗಳನ್ನು ತಂದು ಭಾರತದಲ್ಲಿ ಜೋಡಿಸುವ ಕಾರ್ಯವನ್ನು ಮಾಡುತ್ತವೆ. ಇನ್ನು ಮೊಬೈಲ್ ಬಿಡಿ ಭಾಗಗಳನ್ನು ನಮ್ಮ ದೇಶದಲ್ಲಿ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಹಲವು ಕಂಪನಿಗಳು `ಮೇಡ್ ಇನ್ ಇಂಡಿಯಾ` ಲೇಬಲ್ ಹಚ್ಚಿ ಬೇರೆ ದೇಶದ ಫೋನ್ ನಮ್ಮ ಕೈಗೆ ನೀಡುತ್ತಿವೆ.

ಕಂಪನಿಗಳು ಹೇಳುವಂತೆ ಭಾರತದಲ್ಲಿ ಫೋನ್ ಮಾಡಲು ಬೇಕಾದ ಇಂಜಿನಯರ್ ಗಳ ಕೊರತೆ ಎಂದು. ಆದ್ರೆ ನಮ್ಮ ಶಿಕ್ಷಣದ ಗುಣ ಮಟ್ಟ ತೀರಾ ಕೆಟ್ಟದಾಗಿಯೂ ಇಲ್ಲ. ಕಂಪನಿಗಳು ತಮ್ಮಲ್ಲಿನ ಹಣವನ್ನು ಉಳಿಸಲು ವಾಮ ಮಾರ್ಗ ಅನುಸರಿಸುತ್ತವೆ.