ತಾರಸಿ ತೋಟ ಮಾಡುವುದು ಹೇಗೆ..?? ಮನೆಯಲ್ಲಿ ಜಾಗವಿಲ್ಲದಿದ್ದರೂ ತಾರಸಿಯ ಸ್ವಲ್ಪ ಜಾಗದಲ್ಲೆ ಎಲ್ಲಾ ರೀತಿಯ ಗಿಡಗಳನ್ನು ಹೀಗೆ ಬೆಳೆಸಿ..

0
801

ಸಾಮಾನ್ಯವಾಗಿ ಗಿಡ ಬೆಳೆಸುವುದು ಬಹಳಷ್ಟು ಮಂದಿಗೆ ತುಂಬಾ ಇಷ್ಟವಾದ ಕೆಲಸ.. ಈಗಿನ ದಿನಗಳಲ್ಲಿ ಪರಿಸರ ಹಾಳಾಗುತ್ತಿರುವುದನ್ನು ನೋಡಿದರೇ ಇದು ಅವಷ್ಯಕವೂ ಕೂಡ…. ಅದೇ ರೀತಿಯಾಗಿ ಕೆಲವರು ಮನೆಯಲ್ಲಿ ಸಸ್ಯ ಕಾಶಿಯನ್ನೇ ನಿರ್ಮಾಣ ಮಾಡಿರುತ್ತಾರೆ.. ಆದರೆ ಇನ್ನು ಕೆಲವರಿಗೆ ಬೆಳೆಸುವ ಬಯಕೆಯಿದ್ದರೂ ಜಾಗದ ಕೊರತೆ ಇರುತ್ತದೆ.‌ ಚಿಂತೆ ಬಿಡಿ ಮನೆಯ ಮಹಡಿಯ ಮೇಲೆ ಸುಲಭವಾಗಿ ನಿಮಗೆ ಬೇಕಾದಷ್ಟು ಗಿಡಗಳನ್ನು ಬೆಳೆಸಬಹುದು.. ಹೇಗೆ ಎಂದು ಇಲ್ಲಿದೆ ನೋಡಿ..

ಮಹಡಿಗಳಲ್ಲಿ ನಾಲ್ಕು ರೀತಿಯಾಗಿ ಗಿಡಗಳನ್ನು ಬೆಳೆಸಬಹುದು.

  • ತಾರಸಿಯ ಮೇಲೆ ಕಟ್ಟೆಗಳನ್ನು ಕಟ್ಟಿ ಅಲ್ಲಿಗೆ ಮಣ್ಣನ್ನು ಹಾಕಿ ಅಲ್ಲಿ ಗಿಡಗಳನ್ನು ಬೆಳೆಸಬಹುದು.. ಹೌದು ಹೀಗೆ ಮಾಡಿದರೆ ಅತಿ ಹೆಚ್ಚು ಜಾಗ ಸಿಗುತ್ತದೆ.. ಜೊತೆಗೆ ಇಲ್ಲಿ ಗಿಡಗಳಷ್ಟೇ ಅಲ್ಲ ಸೊಪ್ಪು ತರಕಾರಿಗಳನ್ನು ಸುಲಭವಾಗಿ ಬೆಳೆಸಬಹುದು.
  • ಮಹಡಿಯ ಮೇಲೆ ಪಾಟ್ ಗಳನ್ನು ಅಲಂಕಾರಕ್ಕಾಗಿ ಇಟ್ಟು ಗಿಡ ಬೆಳೆಸುವುದು ಟ್ರೆಂಡ್ ಆಗಿ ಹೋಗಿದೆ.. ಏನೇ ಆಗಲಿ ನಮ್ಮ ಪರಿಸರ ಉಳಿದರೆ ನಮಗಷ್ಟೇ ಸಾಕಲ್ಲವೇ.. ಇದು ಒಂದು ಸುಲಭದ ವಿಧಾನ ಮಣ್ಣಿನ ಅಥವಾ ಗಾರೆಯ ಪಾಟ್ ಗಳನ್ನು ಇಟ್ಟು ಅವುಗಳಲ್ಲಿ ಕೂಡ ಸುಲಭವಾಗಿ ಗಿಡ ಬೆಳೆಸಬಹುದು.. ಹಣ ವ್ಯಯ ಆಗಬಾರದು ಎನ್ನುವವರು.. ಮನೆಯಲ್ಲಿ ಸಿಗುವ ಉಪಯೋಗಿಸದ ಡಬ್ಬಗಳನ್ನು ಬಳಸಿ ಗಿಡಗಳನ್ನು ಬೆಳೆಸಿ..

  • ತಾರಸಿ ಚಪ್ಪರ.. ಚಪ್ಪರದ ರೀತಿಯಲ್ಲಿ ತಾರಸಿಯಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ತಾರಸಿ ಚಪ್ಪರ ಎನ್ನುತ್ತಾರೆ.. ಅಂದರೆ ಪುಟ್ಟ ಪುಟ್ಟ ಡ್ರಮ್ ಅಥವಾ ಡಬ್ಬಗಳಲ್ಲಿ ಹಬ್ಬುವ ಗಿಡಗಳನ್ನು ಹಾಕಿ ಅದು ಬೆಳೆದು ಬಳ್ಳಿಯಂತೆ ಹಬ್ಬಿಕೊಳ್ಳಲು ಸಹಾಯಕವಾಗುವಂತೆ ಚಪ್ಪರವನ್ನು ನಿರ್ಮಾಣ ಮಾಡುವುದು.. ಈ ರೀತಿಯಾಗಿ ಅಲಂಕಾರಿಕ ಗಿಡಗಳಷ್ಟೇ ಅಲ್ಲ.. ತರಕಾರಿಗಳಾದ ಸೋರೆ ಕಾಯಿ… ಹೀರೇಕಾಯಿ.. ಚಪ್ಪರದ ಅವರೇ ಕಾಯಿ.. ಹಾಗಲಕಾಯಿ.. ಇನ್ನಿತರ ತರಕಾರಿಗಳು ಹಾಗೂ ಸೂಜಿ ಮಲ್ಲಿಗೆಯಂತಹ ಹೂವಿನ ಗಿಡಗಳನ್ನು ಸುಲಭವಾಗಿ ಬೆಳೆಯಬಹುದು..
  • ಇನ್ನು ಕೊನೆಯದಾಗಿ ದೊಡ್ಡ ದೊಡ್ಡ ಡ್ರಮ್ ಗಳನ್ನು ಬಳಸಿ ದೊಡ್ಡ ಗಿಡಗಳನ್ನು ಕೂಡ ಬೆಳೆಯಬಹುದು.. ಈ ರೀತಿಯಾಗಿ ಸೀಬೆ ಗಿಡ.. ಪರಂಗಿ ಗಿಡ.. ದಾಸವಾಳದ ಗಿಡ ಹಾಗೂ ಇನ್ನಿತರ ಗಿಡಗಳನ್ನು ದೊಡ್ಡ ಡ್ರಮ್ ಗಳಲ್ಲಿ ಬೆಳೆಸಬಹುದು..

ಇನ್ನು ಒಂದು ಮಾಹಿತಿ ಏನೆಂದರೆ ಸರ್ಕಾರಿ ತೋಟಗಾರಿಕಾ ಇಲಾಖೆಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಗಿಡಗಳನ್ನು ಎಲ್ಲಾ ಕಾಲದಲ್ಲಿಯೂ ಮಾರಾಟ ಮಾಡುತ್ತಾರೆ.. ಇದರಿಂದಾಗಿ ಯಾವುದೇ ಹಣವ್ಯಯ ಕೂಡ ಆಗುವುದಿಲ್ಲ.. ನೀವೂ ಕೂಡ ನಿಮ್ಮ ಕೈಲಾದಷ್ಟು ಗಿಡಗಳನ್ನು ಬೆಳೆಸಿ..

ಇದೊಂದು ಸಾಮಾಜಿಕ ಕಳಕಳಿಯಿಂದ ಬರೆದ ಲೇಖನ ಸಾದ್ಯವಾದರೇ ಶೇರ್ ಮಾಡಿ.. ಇತರರಿಗೂ ಇದರಿಂದ ಅರಿವು ಮೂಡಿ ಒಂದು ಗಿಡ ನೆಡಲಿ.. ಶುಭವಾಗಲಿ..