ಕನ್ನಡ ಮಲ್ಲಿ ಇಂದ USನಲ್ಲಿ ಕನ್ನಡ ಡಿಮ್ ಡಿಮ

0
1493

ಮಲ್ಲಿ ಸಣ್ಣಪ್ಪನವರ್ ಅಂತ ಸೈಬರ್ ಲೋಕದ YOUTUBE-ಫೇಸ್ ಬುಕ್ ನಲ್ಲಿ “ಕನ್ನಡಮಲ್ಲಿ” ಅಂತ ಪರಿಚಿತ , ಹುಟ್ಟು ಊರು ” ಕದರಮಂಡಲಗಿ ” ಬ್ಯಾಡಗಿ ಹತ್ತಿರ ಒಂದು ಪುಟ್ಟ ಹಳ್ಳಿ , ನಮ್ಮ ತಂದೆ ಅಲ್ಲೇ ವ್ಯವಸಾಯ ಮಾಡ್ತಾ ಇದ್ದರು , ೧೦ ನೇ ತರಗತಿ ವರೆಗೂ ನಮ್ಮ ಊರಲ್ಲೇ ಇದ್ದು ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ , ಆಮೇಲೆ ದಾವಣಗೆರೆ ಬಿಡಿಟಿ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದು , ಸುಮಾರು ಹದಿನೇಳು ವರ್ಷದಿಂದ ಅಮೇರಿಕಾದ ನ್ಯೂಯಾರ್ಕ್ ನ ಪ್ರತಿಷ್ಟಿತ ಹಣಕಾಸು ಕಂಪನಿಯಲ್ಲಿ ಡೈರೆಕ್ಟರ್ ಆಗಿ ಕೆಲ್ಸಾ ಮಾಡ್ತಾ ಇದ್ದೇನೆ. ನನ್ನ ಹೆಂಡತಿ ಹೆಸರು “ಮಧು” ಅಂತಾ , ನನಗೆ ಇಬ್ಬರುರು ಮಕ್ಕಳು ೮ ವರ್ಷದ ಮಾನವ್ ಮತ್ತು ೬ ವರ್ಷದ ಮಾನಸಿ ಅಂತಾ ಅವ್ರು ಹೆಸರು. ನಾನು ಸುಮಾರು ೫೦ ಕ್ಕೂ ಹೆಚ್ಚು ರಾಜಕೀಯ ,ಹಾಸ್ಯ , ರಿಮಿಕ್ಸ್ youtube ವೀಡಿಯೊಗಳನ್ನು ಮಾಡಿದ್ದೇನೆ, ವಿವಿದ ಕನ್ನಡ ಚಾನೆಲ್ ಗಳಲ್ಲಿ ಅವುಗಳು ಪ್ರಸಾರ ವಾಗಿವೆ , ನನ್ನ youtube ಚಾನೆಲ್ “ಕನ್ನಡಮಲ್ಲಿ” ೨ ಮಿಲಿಯನ್ ವೀಕ್ಷಣೆ ಗಳನ್ನು ಪೂರೈಸಿದೆ , ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಸುಮಾರು ವೀಡಿಯೊ ಗಳು ವೈರಲ್ ಆಗಿವೆ . ಯಡಿಯೊರಪ್ಪ ಮಹಾತ್ಮೆ , ಗ್ಯಾಂಗ್ ನಮ್ ಯೆಡಿಯೋರಪ್ಪ, ಫೇಸ್ಬುಕ್ ಉಪೇಂದ್ರ , ಫೇಸ್ಬುಕ್ ಬಬ್ರುವಾಹನ , ಜವಾರಿ ಸ್ಟೈಲ್ ಜನಮನ ಸೊರೆ ಗೊಂಡ ವಿಡಿಯೋಗಳು . ಸುಮಾರು ಹತ್ತು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ . ಸುಮಾರು ೫೦ ಕ್ಕೂ ಜಾಸ್ತಿ ನಾಟಕಗಳಳನ್ನು ಅಮೆರಿಕಾದ ವಿವಿದ ಪ್ರದೇಶದ ವೇದಿಕೆಗಳ ಮೇಲೆ ಪ್ರದರ್ಶನ ಮಾಡಿದ್ದೇವೆ . ಜಾನಪದ , ಸಿನಿಮಾ , ಕಾಂಟೆಂಪರರಿ ನೃತ್ಯಗಳು , ಸ್ಟಾಂಡ್ ಅಪ್ ಕಾಮಿಡಿ , ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅಮೇರಿಗನ್ನಡಿಗರಿಗೆ ಕೊಟ್ಟಿದ್ದೇವೆ , ಅಮೆರಿಕಾದಲ್ಲಿ ಯಮರಾಜ ,ಅಮೇರಿಕಾ ಅಳಿಯ ,ಅಮೆರಿಕಾದಲ್ಲಿ ಬಸವಣ್ಣ , ಕಮಲಾನಂದ ಮಹಾತ್ಮೆ , ಸಂತೆಯೊಳಗೆ ಒಂದು ಮನೆಯ ಮಾಡಿ ನನ್ನ ಜನಪ್ರಿಯ ನಾಟಕಗಳು .

14718630_1447175665314294_477828373742113436_n

ಬಿಡಿಟಿ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದು , ಸುಮಾರು ಹದಿನೇಳು ವರ್ಷದಿಂದ ಅಮೇರಿಕಾದ ನ್ಯೂಯಾರ್ಕ್ ನ ಪ್ರತಿಷ್ಟಿತ ಹಣಕಾಸು ಕಂಪನಿಯಲ್ಲಿ ಡೈರೆಕ್ಟರ್ ಆಗಿ ಕೆಲ್ಸಾ ಮಾಡ್ತಾ ಇದ್ದೇನೆ.

ನಿಮ್ಮ ಆಸಕ್ತಿ ಕ್ಷೇತ್ರ

ನನಗೆ ಕನ್ನಡ ಕಲೆ ಮತ್ತು ಸಂಸ್ಕೃತಿ , ನಾಟಕ , ಚಲನ ಚಿತ್ರ ಜಾನಪದ ಹೀಗೆ ಹಲವಾರು ಕ್ಷೇತ್ರಗಳಲಿ ಹೊಸ ಹೊಸ ಕ್ರಿಯಾಶೀಲ ಪ್ರಯೋಗ ಮಾಡೋ ಬಗ್ಗೆ ಅಪಾರ ಆಸಕ್ತಿ ಇದೆ, ಈ ಇಂಟರ್ ನೆಟ್ ನ ಯುಗದಲ್ಲಿ youtube,ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಬಳಸಿಕೊಂಡು ಒಂದು ಹೊಸ online ಪ್ರೇಕ್ಷಕ ವರ್ಗ ಮಾರ್ಪಾಟು ಆಗಿದೆ , ಆ ಕನ್ನಡದ ಇ-ಪ್ರೇಕ್ಷಕನಿಗೆ ಹೊಸ ಹೊಸ ಬಗೆಯ ವಿಡಿಯೋಗಳ ಮುಖಾಂತರ ಕನ್ನಡ ಅರಿವು ,ನಮ್ಮ ಪರಂಪರೆ ನನವು , ನಮ್ಮ ರಾಜಕೀಯ ಪ್ರಚಲಿತ ಸ್ಥಿತಿಯ ವಿಡಂಬನೆ ಹೀಗೆ ಹತ್ತು ಹಲವಾರು ಬಗೆಯ ವೀಡಿಯೊ ಕೊಡಬೇಕು ಅನ್ನೂ ಹಂಬಲ ಇದೆ .

ನಿಮ್ಮ ಇನ್ಸ್ಪಿರೇಷನ್

ಪ್ರತಿ ಸಲ ನನ್ನ ಹೊಸ ವೀಡಿಯೊ ನಾನು ರಿಲೀಸ್ ಮಾಡಿದ್ದಾಗ ಹೊಸ ಹೊಸ ಪ್ರೇಕ್ಷಕರು ನನಗೆ ಫೇಸ್ ಬುಕ್ , ವಾಟ್ಸ್ ಅಪ್ ಮತ್ತು youtube ಮೂಲಕ ಕನೆಕ್ಟ್ ಆಗ್ತಾರೆ , ಒಂದು ವೀಡಿಯೊ ಲಿಂಕ್ ನಿಂದ ಪ್ರಾರಂಬಿಸಿ ನನ್ನ ಎಲ್ಲಾ ಉಳಿದ ವೀಡಿಯೊ ಗಳನ್ನು ನೋಡಿ ಇಷ್ಟಪಟ್ಟು ನನಗೆ ಮೆಸೇಜ್ ಕಳಿಸ್ತಾರೆ , ೧೦-೧೨ ವರ್ಷದ ಹೈ ಸ್ಕೂಲ್ ಹುಡುಗರಿಂದ ಹಿಡಿದು ನನ್ನ ತಂದೆಯಷ್ಟು ಸಮಾನ ವಯಸ್ಕ ರಾದವರು ಕೂಡ ನನ್ನ ವೀಡಿಯೊ ಗಳನ್ನು ನೋಡಿ ಮೆಚ್ಚುತ್ತಾರೆ ಅನ್ನೂ ಕುಶಿ ನೇ ನನಗೆ ಒಂತರಾ ಪ್ರೇರಣೆ . ಅದು ಬೇರೆ ಇತ್ತೀಚಿಗೆ ವಾಟ್ಸ್ ಅಪ್ ಬಂದ ಮೇಲೆ ಕರ್ನಾಟಕದ ರಿಮೋಟ್ ಊರುಗಳಿಂದ ಬರೋ ಪ್ರೀತಿಯ ಮೆಸೇಜ್ ಗಳು ನಾನು ಹೊಸ ವಿಡಿಯೋಗಳನ್ನು ಮಾಡೋಕೆ ಪ್ರೇರಣೆ ಅಂತಾ ಹೇಳಬಹುದು. ನನ್ನ ಈ ಎಲ್ಲಾ ಕ್ರಿಯಾಶೀಲ ಚಟುವಟಿಕೆಗಳಿಗೆ ನನ್ನ ಹೆಂಡತಿ ಕೂಡ ತುಂಭಾ ಸಹಕಾರ ಕೊಡುತ್ತಾಳೆ ಅವಳೇ ನನ್ನ ಇನ್ನೊದು ದೊಡ್ಡ ಪ್ರೇರಣೆ ಅಂದ್ರು ತಪ್ಪಿಲ್ಲಾ .

ನೀವು ಯಾವಾಗ ಹೀಗೆ ರಾಜಕೀಯವನ್ನು ವ್ಯಂಗ್ಯ ಮಾಡುವ video clips start ಮಾಡಿದ್ದೂ . ಇಂಥ ಆಸಕ್ತಿ ಯಾಕೆ ಬೆಳೆಯಿತು

ನಾನು ೨೦೧೦ ಫೆಬ್ರುವರಿ ನಲ್ಲಿ ನನ್ನ ಮೊದಲ ರಾಜಕೀಯ ವೀಡಿಯೊ ಮಾಡಿದ್ದು, ಆಗ ಕರ್ನಾಟಕ ರಾಜಕೀಯ ತುಂಭಾ ನಾಟಕೀಯ ಹಂತ ತಲುಪಿತ್ತು , ಆ ಪರಿಸ್ತಿತಿ ಬಳಸಿಕೊಂಡು ಒಂದು ರಿಮಿಕ್ಸ್ -ಕಾರ್ಟೂನ್- ಅಣುಕು ವೀಡಿಯೊ ಮಾಡಿದೆ , ೫ ವರ್ಷದ ಹಿಂದೆ ಆ ತರದ Remix ವೀಡಿಯೊ ಗಳು ತುಂಭಾ ಕಮ್ಮಿ , ಜಾಕಿ ಚಿತ್ರದ ಜನಪ್ರಿಯ ಗೀತೆ “ಶಿವಾ ಅಂತಾ ಹೋಗುತ್ತಿದೆ ಬೈಕ್ ನಲಿ …” ಹಾಡನ್ನು ರಿಮಿಕ್ಸ್ ಮಾಡಿ , ಯೆಡಿಯುರಪ್ಪನವರು ಕುರ್ಚಿ ಉಳಿಸಿಕೊಳಲು ಪಡುತ್ತಿದ್ದ ಕಸರತ್ತನ್ನು ಕಾರ್ಟೂನ್ ಮೂಲಕ ತೋರಿಸಿದೆ , ಈ ವೀಡಿಯೊ ರಾತ್ರೋ ರಾತ್ರಿ ವೈರಲ್ ಆಗಿ , ಎಲ್ಲರ ಮೊಬೈಲ್ ಮತ್ತು ಟಿವಿ ಚಾನೆಲ್ ಗಳಲ್ಲಿ ಮೂಡಿ ಬಂತು , ಅಲ್ಲಿಂದ ನನ್ನ youtube ಚಾನೆಲ್ ಗೆ ಮತ್ತು ಕನ್ನದಮಲ್ಲಿ ಡಾಟ್ ಕಾಮ್ ಗೆ ಪ್ರಚಾರ ಸಿಕ್ತು .

ಫೇಮಸ್ ಸಾಂಗ್ಸ್ ಗೆ ಲಿರಿಕ್ಸ್ ಚೇಂಜ್ ಮಾಡಿ ಹೊಸ ರೂಪ ಕೊಡ್ತೀರಿ. ಈ ಲಿರಿಕ್ಸ್ , ಗ್ರಾಫಿಕ್ಸ್ ಎಲ್ಲ ಯಾರು ಮಾಡ್ತಾರೆ

ಹೌದು ಇಲ್ಲಿವರ್ಗೂ ನಂದು ಒನ್ ಮ್ಯಾನ್ ಆರ್ಮಿ , ಲಿರಿಕ್ಸ್ – ಗ್ರಾಫಿಕ್ಸ್ ಆಡಿಯೋ – ವೀಡಿಯೊ ಎಡಿಟಿಂಗ್ , ವೋಕಲ್ ಎಲ್ಲಾ ನಾನೇ ಮಾಡೋದು. ನಂಗೆ ರಾಜಕೀಯ ಅಸ್ಟೊಂದು ಡೀಪ್ ಆಗಿ ಗೊತ್ತಿಲ್ಲಾ ಆದ್ರೆ ಹೆಡ್ ಲೈನ್ ನಲ್ಲಿ ಸಿಗೋ humor ಇಟ್ಕೊಂಡು ಸಾಹಿತ್ಯ ಬರೀತೀನಿ . ನನ್ನಲ್ಲಿ ಇನ್ನು ಸುಮಾರು ವೀಡಿಯೊ ಮಾಡೋ ಐಡಿಯಾ ಗಳಿವೆ ಆದ್ರೆ ನಂಗೆ ಸಿಗೋ ಫ್ರೀ ಟೈಮ್ ನಲ್ಲಿ ಇಲ್ಲಿವರ್ಗೂ ಸುಮಾರು ೫೦-೬೦ ವೀಡಿಯೊ ಗಳನ್ನು ಮಾತ್ರ ನನ್ನಿಂದ ಮಾಡೋಕೆ ಆಗಿರೋದು .

ನಿಮ್ಮ ಪ್ರೊಫೆಶನ್ ಜೊತೆ ಇದಕ್ಕೆಲ್ಲ ಹೇಗೆ time ಮಾಡ್ಕೋತೀರಿ

” ಇಷ್ಟ ಪಟ್ಟು ಮಾಡಿದ್ರೆ ಯಾವುದು ಕಷ್ಟ ಆಗಲ್ಲಾ ” ಅಂತಾ ಹೇಳ್ತಾರೆ ಹಾಗೆ, ನಾನು ನ್ಯೂ ಯಾರ್ಕ್ ಸಿಟಿನಲ್ಲಿ ಕೆಲ್ಸಾ ಮಾಡೋದು ನನ್ನ ಮನೆಯಿಂದ ಒಂದೂವರೆ ಗಂಟೆ ಟ್ರೈನ್ ಪ್ರಯಾಣ , ಒಟ್ಟಿನಲ್ಲಿ ದಿನಕ್ಕೆ ಮೂರು ಗಂಟೆ ಒಂದೇ ಜಾಗದಲ್ಲಿ ಕುತ್ತಿರಬೇಕು , ಆ ಸಮಯವನ್ನು ನಾನು ವೀಡಿಯೊ ಎಡಿಟಿಂಗ್ , ಆಡಿಯೋ ಎಡಿಟಿಂಗ್ , ಹಾಡು ಬರಿಯೊದ್ರಲ್ಲಿ ಹೀಗೆ ಉಪಯೋಗಿಸಿಕೊಳುತ್ತೇನೆ. ಮೊದಲೇ ಹೇಳಿದಂತೆ ಇವೆಲ್ಲಾ ಚಟುವಟಿಕೆಗಳಿಗೆ ನನ್ನ ಹೆಂಡತಿ ಸಹಕಾರ ತುಂಭಾ ದೊಡ್ಡ ಮಟ್ಟದು.

ನೀವು ನಿಮ್ಮ ಖುಷಿಗೆ ಮಾಡ್ತಿರುವ ಈ ಕೆಲಸ ನಮಗೂ ಖುಷಿ ಕೊಡುತ್ತೆ but ನಿಮಗೆ ಇದರಿಂದ ಏನು ಉಪಯೋಗ? Financial support?

ನನಗೆ ಕುಶಿ ಕೊಡೋ ಕೆಲ್ಸಾ ಬೇರೆಯವರು ನೋಡಿ ಕುಶಿಪಡ್ತಾರೆ ಅಂದ್ರೆ ಅದು ನನಗೆ ದುಪ್ಪಟು ಕುಶಿ ಕೊಡುತ್ತೆ . “ವೀಡಿಯೊ ನೋಡಿ ಬಿಟ್ಟು ನಮ್ಮ ದಿನನಿತ್ಯದ ಕಷ್ಟ ಮರೆತು ಒಂದಿಷ್ಟು ಕಾಲ online ನಲ್ಲಿ ನಗ್ತಾ ಟೈಮ್ ಕಳಿತಿವ್ವಿ ಸಾರ್ ” ಅಂತಾ ಹಲವರು ಕಳ್ಸೋ ಮೆಸೇಜ್ ಗಳನ್ನು ಓದಿದಾಗ ಅಗೋ ಕುಶಿ ಕೋಟಿ ಕೊಟ್ರು ಸಿಗೋದಿಲ್ಲಾ . ಸಮ್ಮೇಳನ ಗಳಲ್ಲಿ ನಮ್ಮ ಹಾಸ್ಯ ನಾಟಕ ಗಳನ್ನು ನೋಡಿ ಹತ್ತಿರ ಬಂದು ಕೈ ಕುಲುಕಿ ,ಬೆನ್ನು ತಟ್ಟಿ ನಮ್ಮನ್ನ ಹರಿಸಿದಾಗ ಸಿಗೋ ಹರುಷ ಕ್ಕೆ ಬೆಲೆ ಕಟ್ಟೋಕೆ ಆಗಲ್ಲಾ, ಇಲ್ಲಿವರ್ಗೂ ನಮ್ಮ ಚಟುವಟಿಕೆ ಗಳು ಹವ್ಯಾಸಕ್ಕೆ ಅಂತಾ ಮಾಡ್ತಾ ಇರೋದು.

ಇಲ್ಲಿಯವರೆಗೆ ಯಸ್ತು ಇಂಥ ವೀಡಿಯೋಸ್ ಮಾಡಿದ್ದೀರಿ ರೆಸ್ಪೋನ್ಸ್ ಹೇಗಿದೆ ?

ಇಲ್ಲಿವರ್ಗೂ ಸುಮಾರು ೬೦ ಕ್ಕೂ ಹೆಚ್ಚು ವೀಡಿಯೊ ಗಳನ್ನು ಮಾಡಿದ್ದೇನೆ ,whatsಅಪ್ ,ಫೇಸ್ಬುಕ್ , youtube ನಲ್ಲಿ ವೀಡಿಯೊ ಗಳಿಗೆ ತುಂಭಾ ಒಳ್ಳೆ Response ಇದೆ , ಕನ್ನಡ ಮಲ್ಲಿ youtube ಚಾನೆಲ್ ೨ ಮಿಲಿಯನ್ ಕ್ಕೂ ಹೆಚ್ಚು ವೀಕ್ಷಣೆ ಗಳನ್ನು ಪೂರೈಸಿದೆ .
ಸರಳ ಕಾರ್ಟೂನ್ ನಿಂದ ಹಿಡಿದು ರಾಜಕೀಯ , ಸಿನೆಮಾ , ಕನ್ನಡ ಪರ ಕಾಳಜಿ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ವೀಡಿಯೊ ಗಳನ್ನು ಮಾಡಿದ್ದೇನೆ . ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಸುಮಾರು ವೀಡಿಯೊ ಗಳು ವೈರಲ್ ಆಗಿವೆ . ಯಡಿಯೊರಪ್ಪ ಮಹಾತ್ಮೆ , ಗ್ಯಾಂಗ್ ನಮ್ ಯೆಡಿಯೋರಪ್ಪ, ಫೇಸ್ಬುಕ್ ಉಪೇಂದ್ರ , ಫೇಸ್ಬುಕ್ ಬಬ್ರುವಾಹನ , ಜವಾರಿ ಸ್ಟೈಲ್ ಜನಮನ ಸೊರೆ ಗೊಂಡ ವಿಡಿಯೋಗಳು . ಹಲವಾರು ಚಾನೆಲ್ ಗಳಲ್ಲಿ ಇವುಗಳು ಪ್ರಸಾರ ಗೊಂಡಿವೆ . ಸುಮಾರು ಹತ್ತು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಸುಮಾರು ೫೦ ಬಾರಿ ಈ ನಾಟಕಗಳಳನ್ನು ಅಮೆರಿಕಾದ ವಿವಿದ ಪ್ರದೇಶದ ವೇದಿಕೆಗಳ ಮೇಲೆ ಪ್ರದರ್ಶನ ಮಾಡಿದ್ದೇವೆ . ಬೇರೆ ಬೇರೆ ಕನ್ನಡ ಕೂಟ ಗಳ ಕರೆದಾಗ ಹೋಗಿ ನಾಟಕಗಳನ್ನು ಮಾಡಿ ಬಂದಿದ್ದೇವೆ , ಕೆಲವೊಮ್ಮೆ ೧೨ ತಾಸು ಡ್ರೈವ್ ಮಾಡಿ ನಾಟಕ ಮಾಡಿ ಬಂದ ಉದಾಹರಣೆಗಳು ಉಂಟು . ಅಮೆರಿಕಾದ ಸಮ್ಮೇಳನಗಳಲ್ಲಿ ನಮ್ಮ ನಾಟಕಕ್ಕೆ ತುಂಭಾ ಒಳ್ಳೆಯ reposne ಸಿಕ್ಕಿದೆ .

ಪಾಲಿಟಿಕ್ಸ್ ಬೇಸ್ಡ್ ವೀಡಿಯೋಸ್ ಜಾಸ್ತಿ ಅನ್ಸುತ್ತೆ. ಪಾಲಿಟಿಕ್ಸ್ ಮೇಲೆ ಇಂಟರೆಸ್ಟ್ ಇದೆಯಾ

ರಾಜಕೀಯ ವಿಡಂಬನೆ ಮೂಲಕ ಜನ ಜಾಗೃತಿ ಮಾಡೋದು ಇಷ್ಟ , ಆದ್ರೆ ನನಗೆ ರಾಜಕೀಯ ಮಾಡೋದು ಅಂದ್ರೆ ಕಷ್ಟ .

ನಿಮ್ಮ ಈ ಕೆಲ್ಸಕ್ಕೆ ಯಾರ್ಯಾರು ಸಪೋರ್ಟ್ ಮಾಡ್ತಿದ್ದಾರೆ

14711043_1444503645581496_5389568772756533134_o

ನನ್ನ ಕುಟುಂಬ ಮತ್ತು ನನ್ನ ಗೆಳೆಯರು ಮತ್ತು ನನ್ನ ಸಾವಿರಾರು online ಪರಿಚಯ ವಾಗಿರೋ ನನ್ನ ಹಿತೈಷಿ ಗಳು .