ಅಪೌಷ್ಟಿಕತೆ ಸಮಸ್ಯೆಗೆ ಇವರು ಮಾಡುತ್ತಿರುವ ಕೆಲಸವನ್ನು ನೋಡಿದರೆ, ನಿಮಗೂ ಇದರ ಮೇಲೆ ಏನಾದರೂ ಸಹಾಯ ಮಾಡಬೇಕು ಅಂತ ಅನ್ನಿಸುತ್ತದೆ!!

0
468

ಮನಸ್ಸಿದ್ರೆ ಮಾರ್ಗ ಅನ್ನೋದು ಇದಕ್ಕೆ ಅನ್ಸುತ್ತೆ. ಇಲ್ಲೊಂದು ಊರಿದೆ. ಈ ಊರಲ್ಲಿ ಒಂದು ಎನ್ ಜಿ ಓ ಇದೆ. ಈ ಎನ್ ಜಿ ಓ ಬಡವರ ಮಕ್ಕಳ ಪಾಲಿಗೆ ಆಶ್ರಯ ತಾಣ.

ಈ ಜಗತ್ತಿನಲ್ಲಿ ಶ್ರೀಮಂತರು ಶ್ರೀಮಂತರಾಗೇ ಇದ್ದಾರೆ. ಬಡವರು ಬಡವರಾಗೇ ಉಳಿದಿದ್ದಾರೆ. ಬಡವರ ಗೋಳಾಟ ಒಂದಾ ಎರಡಾ.. ಪ್ರತಿದಿನ ಅದೆಷ್ಟೋ ಜನ ಊಟಕ್ಕೂ ಗತಿ ಇಲ್ಲದೆ ಹಸಿವಿನಿಂದ ಸಾಯ್ತಿದ್ದಾರೆ. ಬಡವರ ಮಕ್ಕಳ ಪಾಡಂತೂ ಹೇಳತೀರದು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಹೀಗೆ ಊಟವಿಲ್ಲದೇ ಸೊರಗಿರೋ ಕಂದಮ್ಮಗಳಿಗೆ ಈ ಎನ್ ಜಿ ಓ ಹಸಿವು ನೀಗಿಸೋ ಅಮ್ಮ ಅಂದ್ರೆ ತಪ್ಪಾಗಲ್ಲ. ಜನ್ ಸ್ವಾಸ್ತ್ಯಾ ಸಹ್ಯೋಗ್… ಇದೇ ನಾವ್ ಇವತ್ತು ಹೇಳೋಕ್ ಹೊರಟಿರೋ ಎನ್ ಜಿ ಓ. ಛತ್ತೀಸ್’ಗಢದ ಬಿಸ್ಲಾಪುರದಲ್ಲಿರುವ ಈ ಎನ್ ಜಿ ಓ, ನಿತ್ಯ ಮೂರು ಹೊತ್ತು ಮೂರು ವರ್ಷದ ಕೆಳಗಿನ ಮಕ್ಕಳಿಗೆ ಹೊಟ್ಟೆ ತುಂಬಾ ಪೌಷ್ಟಿಕಾಂಶಯುಕ್ತ ಊಟ ಕೊಡ್ತಿದೆ. ವಾರಕ್ಕೆರಡು ಬಾರಿ ಮಕ್ಕಳಿಗೆ ಮೊಟ್ಟೆ, ಕಬ್ಬಿಣಾಂಶವಿರುವ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಿದೆ..

ಅಷ್ಟೇ ಅಲ್ಲದೇ ಡೇಕೇರ್ ಕೂಡ ನಡೆಸ್ತಿದೆ. ಕೆಲಸಕ್ಕೆಂದು ಕೆಲ ತಾಯಂದಿರು ತಮ್ಮ ಮಕ್ಕಳಿಗೆ ಬರೀ ಎದೆ ಹಾಲುಣಿಸಿ ಮನೆಯಲ್ಲೆ ಬಿಟ್ಟು ಹೋಗುತ್ತಾರೆ. ಆ ಕಂದಮ್ಮಗಳು ಮತ್ತೆ ಅಮ್ಮ ಬರುವವವರೆಗೂ ಹಸಿವಿನಿಂದ ಮನೆಯಲ್ಲೇ ನರಳುತ್ತಿರುತ್ತೆ. ಇಂಥಾ ಮಕ್ಕಳಿಗಾಗೇ  ಜನ್ ಸ್ವಾಸ್ತ್ಯಾ ಸಹ್ಯೋಗ್ ಎನ್ ಜಿ ಓ ಡೇಕೇರ್ ತೆರೆದಿದೆ. ಪ್ರತಿದಿನ ಎಂಟು ಗಂಟೆಗಳ ಕಾಲ ಮಗುವನ್ನು ನೋಡಿಕೊಳ್ಳುತ್ತದೆ. ಈ ಶಿಶುವಿಹಾರದಲ್ಲಿ ಸರಿಯಾಗಿ ಊಟವಿಲ್ಲದೇ ಅಪೌಷ್ಟಿಕತೆಯಿಂದ ಬಳಲುತ್ತಿರೋ ಪುಟಾಣಿಗಳಿಗೂ ದಿನಾಲೂ ಊಟ ಉಣಬಡಿಸಲಾಗುತ್ತಿದೆ. ಜನ್ ಸ್ವಾಸ್ತ್ಯಾ ಸಹ್ಯೋಗ್ ಎನ್ ಜಿ ಓ ವನ್ನು ಕೆಲ ವೈದ್ಯರು ಜತೆಯಾಗಿ ಆರಂಭಿಸಿದ್ದಾರೆ. ಮಕ್ಕಳಲ್ಲಿ ಹಸಿವನ್ನು ನೀಗಿಸೋದರ ಜತೆಗೆ ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.  ಬಿಸ್ಲಾಪುರದಲ್ಲೇ 91 ಶಿಶುವಿಹಾರವನ್ನು ಈ ಜನ್ ಸ್ವಾಸ್ತ್ಯಾ ಸಹ್ಯೋಗ್ ಎನ್ ಜಿ ಓ ಹೊಂದಿದೆ. 1200 ಮಕ್ತಳಿಗೆ ಪ್ರತಿ ದಿನ ಮೂರು ಹೊತ್ತು ಊಟ ನೀಡುತ್ತಿದೆ.

ಸೇವೆ ಮಾಡಬೇಕು ಅನ್ನೋ ಮನಸ್ಸಿದ್ರೆ, ಹೇಗಾದ್ರೂ ಮಾಡಬಹುದು ಅನ್ನೋದಕ್ಕೆ ಈ ಎನ್ ಜಿ ಓ ಉತ್ತಮ ನಿದರ್ಶನ.