ಸದಾ ‘ಸಿದ್ದ’ ಸರ್ಕಾರದ ಮತ್ತೊಂದು ಸಾಧನೆ: ಅತ್ಯಂತ ಕೊಳಕು ಬೀಚ್-ಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ!!

0
439

Kannada News | Karnataka News

ಕರ್ನಾಟಕ ಅಭಿವೃದ್ಧಿಯ ವಿಷಯದಲ್ಲಿ ದೇಶದಲ್ಲಿಯೇ ಮಂಚೂಣಿಯಲ್ಲಿರುವ ರಾಜ್ಯ. ಪ್ರತಿ ಬಾರಿ ನಡೆಯುವ ಇನ್ವೆಸ್ಟರ್ ಮೀಟ್ ನಲ್ಲಿ ವಿದೇಶಿ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ಆದರೆ, ಅಭಿವೃದ್ಧಿಯ ಜೊತೆ-ಜೊತೆಗೆ ನಮ್ಮ ರಾಜ್ಯ ಇನ್ನು ಕೆಲವು ವಿಷಯಗಳಲ್ಲಿ ಮಂಚೂಣಿಯಲ್ಲಿದೆ, ಅದು ತುಂಬಾ ಬೇಸರದ ವಿಷಯ.

ಕರ್ನಾಟಕ ಭ್ರಷ್ಟಾಚಾರದ ವಿಷಯಕ್ಕಾಗಿ ದೇಶಾದ್ಯಂತ ಅಪಖ್ಯಾತಿಗೆ ಒಳಗಾಗಿರುವುದು ನಿಮೆಗೆಲ್ಲ ಗೊತ್ತಿರುವ ವಿಷಯವೇ. ಆದರೆ, ಈಗ ಅದರ ಜೊತೆ ನಮ್ಮ ರಾಜ್ಯದ ಸಮುದ್ರ ತೀರಗಳು ಎಂದರೆ ಬೀಚ್-ಗಳು ದೇಶದಲ್ಲಿಯೇ ಅತ್ಯಂತ ಕೊಳಕು ಬೀಚ್-ಗಳೆಂದು ಸಂಶೋಧನಾ ವರದಿಯೊಂದು ಹೇಳಿದೆ.

ಹೌದು, ಕರ್ನಾಟಕದ ಬೀಚ್-ಗಳು ದೇಶದಲ್ಲಿಯೇ ಅತ್ಯಂತ ಕೊಳಕು ಬೀಚ್-ಗಳೆಂದು ಅಪಖ್ಯಾತಿಗೊಳಗಾಗಿವೆ. ರಾಜ್ಯದ 33 ಬೀಚ್-ಗಳಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ಅವಶೇಷಗಳಿವೆಯಂತೆ. ಇಲ್ಲಿನ ಪ್ರತಿ 1 ಮೀಟರ್ ಮರಳಿನಲ್ಲಿ 21.91 ಗ್ರಾಂನಷ್ಟು ಪ್ಲಾಸ್ಟಿಕ್ ಅವಶೇಷಗಳು ದೊರೆಯುತ್ತವೆ ಎಂದು ವರದಿಯೊಂದು ಹೇಳಿದೆ.

ಇನ್ನು ಕರ್ನಾಟಕವಲ್ಲದೇ ಈ ಲಿಸ್ಟ್-ನಲ್ಲಿ ನಂ.1 ಸ್ಥಾನದಲ್ಲಿರುವ ಗೋವಾದ ಬೀಚ್-ಗಳಲ್ಲಿ, ಪ್ರತಿ 1 ಮೀಟರ್ ಮರಳಿನಲ್ಲಿ ಸರಾಸರಿ 25.47 ಗ್ರಾಂ ಪ್ಲಾಸ್ಟಿಕ್ ಇದೆ. ಇನ್ನು ಈ ಪಟ್ಟಿಯಲ್ಲಿ ಗುಜರಾತ್ ಮೂರನೇ ಸ್ಥಾನದಲ್ಲಿದ್ದು, ಅಲ್ಲಿ ಪ್ರತಿ 1 ಮೀಟರ್ ಮರಳಿನಲ್ಲಿ 12.62 ಗ್ರಾಂ ಪ್ಲಾಸ್ಟಿಕ್ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ಲಾಸ್ಟಿಕ್ ಅವಶೇಷಗಳು ಅತ್ಯಂತ ಹೆಚ್ಚಿರುವ ಬೀಚ್ ಗಳ ಪೈಕಿ ಗೋವಾ ಮೊದಲ ಸ್ಥಾನವನ್ನು ಪಡೆದುಕೊಂಡ್ರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ದೇಶದಲ್ಲಿ 7,516 ಕಿ.ಮೀ ಕರಾವಳಿ ತೀರ ಹೊಂದಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 254 ಬೀಚ್ ಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿಯನ್ನು ನೀಡಲಾಗಿದೆ.

ಇನ್ನು ಈ ವರದಿಯನ್ನು ಕೊಚ್ಚಿಯ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ಬಿಡುಗಡೆ ಮಾಡಿದೆ.

Also Read: ನೀವು ಅತಿರಪಿಳ್ಳಿ ಜಲಪಾತವನ್ನು ಜೀವನದಲ್ಲಿ ಒಮ್ಮೆ ನೋಡಲೇಬೇಕು!!!