ಅನುದಾನದ ಕಾಮಗಾರಿಯೋ ..? ವಿಧಿಯಿಲ್ಲದ ಕಾಮಗಾರಿಯೋ …?

0
512

ಉದ್ಘಾಟನೆಗೂ ಮುನ್ನ ಆಸ್ಪತ್ರೆ ಸೇರಿದ ಮಾಲೂರು ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರ…!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನುಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳುತ್ತಿರುವುದು ಮಾಲೂರು ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರ ಒಂದು ಉದಾಹರಣೆ.

ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿರುವುದು ಬಯಲಾದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿರುವುದು ನಾಚಿಕೆಗೇಡು . ಇದಲ್ಲದೆ ಮಾಲೂರು ತಾಲ್ಲೂಕಿನ ಆರೊಗ್ಯ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲದಂತೆ ಕೂಡಿದೆ ಆರೊಗ್ಯ ಸಚಿವರ ಜಿಲ್ಲೆಯ ಲ್ಲಿ ಈ ಕರ್ಮ ಕಂಡ ಒಮ್ಮೆ ನೋಡಿ.

ತಾಲ್ಲೂಕಿನ ಆರೊಗ್ಯ ಕೇಂದ್ರ ದಲ್ಲಿ ಡ್ರಿಪ್ ಗಳು ಸಹ ಇಲ್ಲದೆ ಹೊರಗಡೆ ಹಣ ನೀಡಿ ತರುವಂತಹ ಸಮಸ್ಯೆ ಇದ್ದರೂ ಕ್ಯಾರೆ ಎನ್ನದ ಅಧಿಕಾರಿಗಳು.
ಇತ್ತಿಚ್ಚಿಗೆ ಹೊಸ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡಿದ್ದು ಇನ್ನು ಉದ್ಘಾಟನೆ ಮಾಡುವ ಮೊದಲೇ ಕೊಠಡಿ ಗಳು ಬಿರುಕು ಬಿಟ್ಟಿದೆ .

ಕಳಪೆ ಮಟ್ಟದ ಕಾಮಗಾರಿಗಳು ಮಾಡುವ ಗುತ್ತಿಗೆದಾರರನ್ನು ಹಾಗೂ ಕಳಪೆ ಕಾಮಗಾರಿ ಮಾಡಿಸುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರಗಿಸಬೇಕು.

ಗುತ್ತಿಗೆದಾರ ಮಾಡಿರುವ ಕಾಮಗಾರಿಯನ್ನು ನೋಡಿದ ಸ್ಥಳಿಯರು ಅಕ್ರಮವನ್ನು ತಡೆದು ಸರ್ಕಾರದ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದೂರುತ್ತಿದ್ದಾರೆ.

ಶಾಸಕರು ದಯವಿಟ್ಟು ಒಮ್ಮೆ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.