ಭಾರತದಲ್ಲಿ ಮಲ್ಯ ಹತ್ತಿರ ಇರೋದು ಬರಿ 16440 ಕ್ಯಾಶ್ ಅಂತೆ !

0
1072

ಮದ್ಯದ ದೊರೆ ವಿಜಯ್ ಮಲ್ಯ ಆಸ್ತಿ ಎಷ್ಟು ಇನ್ನೂ ಗೊತ್ತಾಗಿಲ್ಲ. ಆದರೆ ಭಾರತದಲ್ಲಿನ ಅವರ ಆಸ್ತಿ ಮಾತ್ರ ಬಹಿರಂಗವಾಗಿದೆ. ಸುಪ್ರೀಂಕೋರ್ಟ್‌ಗೆ ನೀಡಿದ ಆಸ್ತಿ ವಿವರದಲ್ಲಿ ಮಲ್ಯ, 2016ರ ಮಾರ್ಚ್ 31ರ ವೇಳೆಗೆ ಭಾರತದಲ್ಲಿ ತಮ್ಮ ಬಳಿ 16,440 ರೂ. ನಗದು ಇದ್ದು, ಬ್ಯಾಂಕ್ ಖಾತೆಯಲ್ಲಿ 12.6 ಕೋಟಿ ರೂ. ಇದೆ ಎಂದಿದ್ದಾರೆ.

ಭಾರತದಲ್ಲಿ ಇಷ್ಟು ಅಲ್ಪ ಮೊತ್ತ ಇದೆ ಎಂದು ಹೇಳಿಕೊಂಡಿರುವ ಮಲ್ಯ, ವಿದೇಶಗಳಲ್ಲಿ 5.2 ದಶಲಕ್ಷ ಡಾಲರ್‌ನಷ್ಟು ಮೊತ್ತವನ್ನು ವಿವಿಧೆಡೆ ಬಂಡವಾಳ ಹಾಗೂ ಷೇರುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಸಂಬಂಧ ಯಾವುದೇ ನಿರ್ದಿಷ್ಟ ದಾಖಲೆಗಳನ್ನು ಒದಗಿಸಿಲ್ಲ.

ಪ್ರಸ್ತುತ ಮಲ್ಯ, ಆಸ್ತಿ ವಿವರ ಘೋಷಿಸದೇ ನ್ಯಾಯಂಗ ನಿಂದನೆ ಆರೋಪ ಎದುರಿಸುತ್ತಿದ್ದು, ಅದರ ವಿಚಾರಣೆ ನಡೆಯುತ್ತಿದೆ.