ಮಮತಾ ಬ್ಯಾನರ್ಜಿ ದರ್ಪ; ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಪ್ರತ್ಯೇಕ ಊಟದ ಕೋಣೆ..

0
224

ದೇಶದಲ್ಲಿ ಜಾತಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಕಿತ್ತಾಟವನ್ನು ನಿಲ್ಲಿಸಲು ಹಲವು ರೀತಿಯ ಪ್ರಯತ್ನಗಳು, ನಡೆಯುತ್ತಾನೆ ಇವೆ ಅದರಲ್ಲಿ ಹಿಂದೂ ಮುಸ್ಲಿಂ ಧರ್ಮದಲ್ಲಿ ನೂರಾರು ವರ್ಷಗಳಿಂದ ಘರ್ಷಣೆಗಳು ನಡೆಯುತ್ತಿದ್ದು. ದೇಶಕ್ಕೆ ದೊಡ್ಡ ತಲೆನೋವಾಗಿದೆ. ಈ ಎಲ್ಲವನ್ನು ಅರಿತ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ಊಟದ ರೂಮ್ ನಿರ್ಮಿಸಲು ಸುತ್ತೋಲೆಯನ್ನು ಹೊರಡಿಸಿ ವಿವಾದಕ್ಕೆ ಕಾರಣವಾಗಿದೆ.

Also read: ಒನ್ ನೇಷನ್ ಒನ್ ಎಲೆಕ್ಷನ್, `ಒನ್ ನೇಷನ್ ಒನ್ ರೇಷನ್’ ಯೋಚನೆಯಲ್ಲಿರುವ ನರೇಂದ್ರ ಮೋದಿ 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿ?

ಹೌದು ಕೂಚ್‍ಬಿಹಾರ್ ಜಿಲ್ಲೆಯ ಶಾಲೆಗಳಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಮುಸ್ಲಿಂ ಮಕ್ಕಳೇ ಇದ್ದಾರೆ. ಇಲ್ಲಿ ಮಧ್ಯಾಹ್ನದ ಊಟಕ್ಕೆ ಪ್ರತ್ಯೇಕ ಊಟದ ಹಾಲ್‍ಗಳನ್ನು ನಿರ್ಮಿಸಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಇದು ದೇಶದಲ್ಲೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಶೇ.70 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಮುಸ್ಲಿಂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಬಡಿಸಲು ಪ್ರತ್ಯೇಕವಾದ ಭೋಜನಾಲಯ ನಿರ್ಮಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ?

Also read: ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

ಕೂಚ್‍ಬಿಹಾರ್ ಜಿಲ್ಲಾಧಿಕಾರಿ ಕಚೇರಿಯ ಅಲ್ಪಸಂಖ್ಯಾತರ ವಿಭಾಗದಿಂದ ಕಳುಹಿಸಲಾಗಿರುವ ಸುತ್ತೋಲೆಯಲ್ಲಿ ಜಿಲ್ಲೆಯಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಮುಸ್ಲಿಂ ಮಕ್ಕಳಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಎಷ್ಟಿವೆ ಎನ್ನುವ ಮಾಹಿತಿಯನ್ನು ತಕ್ಷಣ ನೀಡಿ. ಈ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಸೇವನೆಗೆ ಪ್ರತ್ಯೇಕ ಊಟದ ಹಾಲ್ ನಿರ್ಮಿಸುವ ಪ್ರಸ್ತಾವನೆ ಕಳುಹಿಸಬೇಕಾಗಿದೆ ಎಂದು ತಿಳಿಸಲಾಗಿದೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಜಾರಿ ಆಗಿರುವ ಸುತ್ತೋಲೆಯ ಬಗ್ಗೆ ಗೊತ್ತಿಲ್ಲ. ಈ ಸಂಬಂಧ ತನಿಖೆ ಮಾಡಿಸಲಾಗುತ್ತಿದ್ದು, ಆದೇಶವನ್ನು ಹಿಂಪಡೆಯಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿರುವ ಕಡೆಗಳಲ್ಲಿ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲು ತಾಂತ್ರಿಕವಾಗಿ ಈ ರೀತಿಯ ಮಾಹಿತಿಯನ್ನು ಕೇಳಿರಬಹುದು. ನಾನಾ ಇಲಾಖೆಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಹಿತಿ ಕೇಳಲಾಗುತ್ತದೆ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಇದರಲ್ಲಿ ಮಕ್ಕಳ ನಡುವೆ ಬೇಧ ಕಲ್ಪಿಸುವ ಯಾವುದೇ ಸಂಚು ಇರುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಎಲ್ಲಾ ಕಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ವಿದ್ಯಾರ್ಥಿಗಳ ನಡುವೆ ಪ್ರತ್ಯೇಕತೆ ಉಂಟು ಮಾಡುವ ಈ ಸುತ್ತೋಲೆ ಸರಿಯಲ್ಲ ಎಂದು ಹೇಳಿದ್ದಾರೆ. ಟ್ವಿಟರ್‍ನಲ್ಲಿ ಸುತ್ತೋಲೆಯನ್ನು ಪೋಸ್ಟ್ ಮಾಡಿರುವ ಅವರು, ಇದರ ಹಿಂದಿನ ದುರುದ್ದೇಶವೇನು ಎಂದು ಕಟುವಾಗಿ ಪ್ರಶ್ನಿಸಿದ್ದಾರೆ, ಧರ್ಮದ ಆಧಾರದ ಮೇಲೆ ಏಕೆ ವಿದ್ಯಾರ್ಥಿಗಳ ಮಧ್ಯೆ ಏಕೆ ತಾರತಮ್ಯ ಮಾಡುತ್ತಿದ್ದಿರಿ. ಈ ಯೋಜನೆ ದುರುದ್ದೇಶದಿಂದ ಕೂಡಿರುವಂತಹದ್ದು, ಹೆಚ್ಚು ಮತಬ್ಯಾಂಕ್​ ಇರುವ ಅಲ್ಪಸಂಖ್ಯಾತ ಅಭಿವೃದ್ಧಿ ಮೇಲಷ್ಟೇ ಸರ್ಕಾರಕ್ಕೆ ಆಸಕ್ತಿ. ಹಿಂದೂ ವಿದ್ಯಾರ್ಥಿಗಳು ಯಾವ ತಪ್ಪು ಮಾಡಿದರು ಎಂಬ ಕಾರಣಕ್ಕೆ ಅವರಿಗೆ ಊಟದ ಕೋಣೆ ಇಲ್ಲ ಎಂದು ಘೋಷ್ ಸರ್ಕಾರವನ್ನು ಟೀಕಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಮತಾ ಬ್ಯಾನರ್ಜಿ, ಇದೊಂದು ಹಳೆಯ ಸುತ್ತೋಲೆಯಾಗಿದ್ದು, ಇದನ್ನು ಸರ್ಕಾರ ಈಗಾಗಲೇ ಹಿಂಪಡೆದಿದೆ. ಕೆಟ್ಟು ಅಧಿಕಾರಿಯಿಂದಾಗಿ ಇದು ಸರ್ಕಾರದ ಅರಿವಿಗೆ ಬಾರದೆ ಈ ಸುತ್ತೋಲೆ ಬಿಡುಗಡೆಯಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯನ್ನು ನಾವು ಪಾಲಿಸುತ್ತಿದ್ದೇವೆ. ಇದೊಂದು ತಾಂತ್ರಿಕ ವಿಚಾರವಷ್ಟೇ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಪ್ರತ್ಯೇಕ ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಯಾವ ಶಾಲೆಯಲ್ಲಿ ಊಟದ ಕೋಣೆ ಇಲ್ಲವೋ ಅಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿಯೇ ಒಟ್ಟಾಗಿ ಊಟ ಮಾಡುತ್ತಾರೆ ಎಂದಿದ್ದಾರೆ.