ಗಂಡು ಮಗು ಬೇಕು ಅಂತ ಹೆಣ್ಣು ಮಗು ದ್ವೇಷಿಸುವ ಸಮಾಜಕ್ಕೆ ಮಾದರಿಯಾದ ಕತೆ; ಹೆಣ್ಮಗು ಆಯ್ತು ಅಂತಾ ಕೋಟಿ ವೆಚ್ಚದ ಗುಡಿ ಕಟ್ಟಿದ ತಂದೆ..

0
520

ಮನೆಗೆ ಮಕ್ಕಳಿದ್ದರೆ ಚಂದ, ಮಕ್ಕಳಿಲ್ಲದ ಮನೆ ಅಂದ ಯಾವುದು ಇಲ್ಲ ಅನೋ ಹಾಗೆ ದಂಪತಿಗೆ ಒಂದು ಮಗು ವಿದ್ದರೆ ಅವರ ಜೀವನಕ್ಕೆ ಒಂದು ಅರ್ಥ ವಿರುತ್ತದೆ. ಒಂದು ವೇಳೆ ಮಕ್ಕಳ ಆಗದಿದ್ದರೆ ದಂಪತಿಗಳು ಪಡುವ ಕಷ್ಟಗಳು ಅಷ್ಟಿಷ್ಟು ಅಲ್ಲ, ಅವರು ಹೋಗದ ಆಸ್ಪತ್ರೆ, ದೇವಾಲಯಗಳು ಮಾಡದ ಹರಕೆ ಪೂಜೆಗಳು ಯಾವುದು ಇಲ್ಲ. ಇನ್ನೂ ಗಂಡು ಮಕ್ಕಳ ವ್ಯಾಮೋಹ ವಿರುವರು ಅಂತು ಮುಗಿತು ಗಂಡು ಹುಟ್ಟುವ ವರೆಗೆ ಎಷ್ಟೇ ತೊಂದರೆಗಳು ಆದರು ಬಿಡುವುದಿಲ್ಲ ಗಂಡು ಬೇಕೇ ಎಂದು ಪಣ ತೊಟ್ಟಿರುತ್ತಾರೆ. ಇದು ಒಂದು ಕಡೆ ಆದರೆ ಈ ಕಾಲದಲ್ಲಿ ಹೆಣ್ಣು ಮಕ್ಕಳು ಆದರೆ ಬೇಸರದಿಂದ ಹೆತ್ತ ತಾಯಿಗೆ ಹಿಂಸೆ ನೀಡಿದ ಘಟನೆಗಳಿವೆ ಮತ್ತು ಹೆಣ್ಣು ಮಗುವನ್ನೇ ಕೊಂದು ಹಾಕಿದ ಹಲವು ವಿಚಿತ್ರ ಸಂಗತಿಗಳಿವೆ. ಇಂತಹ ಕಾಲದಲ್ಲಿ ಹೆಣ್ಣು ಹುಟ್ಟಿದ ಕುಷಿಯಲ್ಲಿ ತಂದೆ ಯಾದವನು ಮಾಡಿದ ಕೆಲಸ ಕೇಳಿದರೆ ಹೆಮ್ಮೆಅನಿಸುತ್ತೆ.

ಹೌದು ಹೆಣ್ಣು ಮಗು ಹುಟ್ಟಿದ ಸಂತೋಷದಲ್ಲಿ ಇಲ್ಲೊಬ್ಬ ತಂದೆ 1 ಕೋಟಿ ರೂ. ವೆಚ್ಚಮಾಡಿ ದೇವಾಲಯ ಕಟ್ಟಿಸಿದ್ದಾರೆ ಸುತ್ತಮುತ್ತಲು ಜನರಿಗೆ ಮತ್ತು ಹೆಣ್ಣು ದ್ವೇಷಿಸುವ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಸುರೇಶ ರಾಜಾರಾಮ್ ಜೋರಾಪೂರ ಎಂಬುವವರು ಕಳೆದ 22 ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ ಸುರೇಶ ರಾಜಾರಾಮ್ ದಂಪತಿಗೆ ಮಕ್ಕಳಾಗಿರಲಿಲ್ಲ. ಆಗ ಸುರೇಶ ತಮ್ಮ ಮನೆಯ ಆರಾದ್ಯ ದೆವರಾದ ಸೂರ್ಯ ನಾರಾಯಣ ದೇವರಲ್ಲಿ ತಮಗೆ ಮಗುವಾದರೆ ಸೂರ್ಯನಾರಾಯಣ ದೇವಸ್ಥಾನ ನಿರ್ಮಾಣ ಮಾಡುವುದಾಗಿ ಹರಕೆ ಹೊತ್ತಿದ್ದರು. ಆದಾದ ನಂತರ ಒಂದು ಹೆಣ್ಣು ಮಗು ಜನಿಸಿ ಅವರ ಭಾಗ್ಯದ ಬಾಗಿಲು ತೆರೆದಿದೆ.


ಅವರು ವಿವಾಹವಾದ 22 ವರ್ಷಗಳಿಂದ ಹಲವು ಆಸ್ಪತ್ರೆಗಳಿಗೆ ಬೇಟಿ ನೀಡಿದರು ಅಲ್ಲಿ ವ್ಯದ್ಯರು ಮಗು ಆಗುವುದು ಬಹುತೇಕ ಅನುಮಾನವಿದೆ ಎಂದು ಹೇಳಿದರು. ಇನ್ನೂ ಕೆಲವೊಂದು ವೈದ್ಯರು ಹೇಳಿದ ರೀತಿಯಲ್ಲಿ ಲಕ್ಷಾಂತರ ಹಣವನ್ನು ಕರ್ಚುಮಾಡಿ ಚಿಕಿತ್ಸೆ ಪಡೆದರು ಯಾವುದೇ ಪ್ರಯೋಜನಗಳು ಆಗಲ್ಲಿಲ್ಲ, ಹಾಗೆಯೇ ಮಕ್ಕಳ್ಳಾಗುವುದಕ್ಕೆ ಕೊಡುವ ಹಲವು ನಾಟಿ ಔಷಧಿಗಳಿಗೆ ಮೊರೆ ಹೋಗಿ ಅಲ್ಲಿ ಬಹಳಷ್ಟು ಹಣ ವ್ಯಯಸಿ ನಂತರ ಮನೆಯ ದೇವರಿಗೆ ಮೊರೆ ಹೋಗಿದ್ದಾರೆ. ದೇವರಲ್ಲಿ ಬೇಡಿಕೊಂಡಿದ್ದಾರೆ ಅದರಂತೆ ಅವರಿಗೆ ಮಗುವಾಗಿದೆ ಇದು ದೇವರ ಪವಾಡವೇ ಎಂದು ಆಶ್ಚರ್ಯ ಮೊಡಿದೆ.

ಕೋಟಿ ವೆಚ್ಚದಲ್ಲಿ ಸೂರ್ಯ ನಾರಾಯಣ ದೇವಾಲಯ:

ಮುದ್ದಾದ ಹೆಣ್ಣು ಮಗುವೊಂದು ಜನಿಸಿದ ಕುಷಿಯಲ್ಲಿ ದಂಪತಿಗಳು ಕೋಟಿ ರೂ.ಗೂ ಅಧಿಕ ವೆಚ್ಚದ ದೇವಸ್ತಾನ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯವು ಐತಿಹಾಸಿಕ ಚನ್ನಮ್ಮನ ಕಿತ್ತೂರು ಸಮೀಪದ ಹೊಸ ಚನ್ನಾಪೂರ ಗ್ರಾಮದ (ಕರೆಮ್ಮದೇವಿ ದೇವಸ್ಥಾನದ) ಹತ್ತಿರ ಕಟ್ಟಲಾಗಿದೆ ಈ ದೇವಾಲಯ ಉತ್ತರ ಕರ್ನಾಟಕದಲ್ಲಿಯೇ ಬೃಹತ್ ಸೂರ್ಯದೇವ ದೇವಸ್ಥಾನ ನಿರ್ಮಾಣ ವಾಗಿದೆ. ಓರಿಸ್ಸಾ ರಾಜ್ಯದ ಕೊಣಾರ್ಕದಲ್ಲಿ ಸೂರ್ಯದೇವ ದೇವಸ್ಥಾನವಿದೆ. ಈಗ ಅದನ್ನು ಬಿಟ್ಟರೆ ನಮ್ಮ ರಾಜ್ಯದಲ್ಲಿ ಆ ಆಕಾರದ ದೇವಸ್ಥಾನ ಇರುವುದು ಕಿತ್ತೂರಿನ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿರುವ ಹೊಸ ಚನ್ನಾಪೂರ ಗ್ರಾಮದಲ್ಲಿ ಮಾತ್ರ.

ಒಟ್ಟಿನಲ್ಲಿ ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದ ಜೋರಾಪೂರ ದಂಪತಿಗಳಿಗೆ ಹೆಣ್ಣು ಮಗು ಹುಟ್ಟಿದ ಮೇಲೆ ಹರಕೆ ಹೊತ್ತಂತೆ ಸ್ವಂತ ಖರ್ಚಿನಲ್ಲಿ ದೇವಸ್ಥಾನ ಕಟ್ಟಿಸಿ ಇತಿಹಾಸ ಬರೆದಿದ್ದಾರೆ ನಿಜಕ್ಕೂ ಇದು ಹೆಣ್ಣು ದ್ವೇಷಿಸುವ ಸಾಮಾಜಕ್ಕೆ ಮಾದರಿಯಾಗಿದೆ.

Also read: ಪ್ರೇಮಿಗಳು ಓದಲೇ ಬೇಕಾದ ಸ್ಟೋರಿ; ಲವ್ ಮಾಡಿ ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿಗೆ ಕ್ಯಾನ್ಸರ್ ಆದರೆ ಈ ವೇಳೆ ಪ್ರಿಯತಮ ತೋರಿಸುವ ಪ್ರೀತಿ ಹೇಗಿದೆ ನೋಡಿ..