ಉಪಯುಕ್ತ ಇಲ್ಲದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿ 1 ಲೀಟರ್ ಗೆ 40 ರೂ. ನಂತೆ ಮಾರಾಟ ಮಾಡುತ್ತಿರುವ ಎಂಜಿನಿಯರ್..

0
775

ದೇಶದಲ್ಲಿ ಪೆಟ್ರೋಲ್ -ಡೀಸೆಲ್ ಕೊರೆತೆಯಿಂದ ಕೃತಕ ಡೀಸೆಲ್ ತಯಾರಿಸಲು ಸಂಶೋಧನೆಗಳು ನಡೆಯುತ್ತಾನೆ ಇವೆ. ಕಸದಿಂದ ರಸ ತೆಗೆಯುವ ಪ್ರಯತ್ನದಲ್ಲಿ ಹಲವು ಸಂಶೋಧನೆಗಳು ನಡೆಯುತ್ತಾನೆ ಇವೆ. ಆದರೆ ಇದ್ಯಾವುದು ಯಶಸ್ವಿ ಹಂತಕ್ಕೆ ತಲುಪಿಲ್ಲ, ಈಗ ಮತ್ತೊಂದು ಶೋಧ ನಡೆದಿದ್ದು ಬಳಕೆಗೆ ಬಾರದ ಪ್ಲಾಸ್ಟಿಕ್ ಬಳಸಿ ಇಲ್ಲೊಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತಯಾರಿಸುವ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಟ್ಟಿದ್ದಾರೆ. ಇದರಿಂದ ತಯಾರಿಸಿದ ಇಂಧನವನ್ನು 40 ರೂ. ಗೆ ಮಾರಾಟ ಮಾಡುತ್ತಿದ್ದಾರೆ.

Also read: ಕೊಳಗೇರಿಯಲ್ಲಿ ಸ್ವಂತ ಮನೆ ಕಟ್ಟುವ ಕನಸು ಕಟ್ಟಿಕೊಂಡಿದ ಬಡ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಮಗ, ಮಿಲಿಯನ್ ವಹಿವಾಟು ಸಂಸ್ಥೆಯ ಒಡೆಯನಾದ..

ಹೌದು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್- ಡೀಸೆಲ್ ಬೆಲೆ ವಾಹನ ಸವಾರರಿಗೆ ಹೊರೆಯಾಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70 ರೂಪಾಯಿಗೂ ಅಧಿಕವಿದೆ. ಈ ಮಧ್ಯೆ ಹೈದರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಉಪಯೋಗಿಸಿ ಪೆಟ್ರೋಲ್ ತಯಾರಿಸಿ ಹುಬ್ಬೇರುವಂತೆ ಮಾಡಿದ್ದಾರೆ. ಪ್ಲಾಸ್ಟಿಕ್‌ನ್ನು ಇಂಧನವನ್ನಾಗಿ ಪರಿವರ್ತಿಸಲು ಮೂರು ಹಂತಗಳ ‘ಪ್ಲಾಸ್ಟಿಕ್ ಪೈರೊಲಿಸಿಸ್’ ವಿಧಾನವನ್ನು ಬಳಸುತ್ತಿದ್ದೇವೆ ಎಂದು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಲ್ಲಿ ನೋಂದಣಿ ಹೊಂದಿರುವ ಕಂಪನಿಯನ್ನು ಸ್ಥಾಪಿಸಿದ್ದೇವೆ ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್-ನಿಂದ ಪೆಟ್ರೋಲ್?

Also read: ಬರಿಗೈಯಲ್ಲಿ ಪ್ರಾರಂಭ ಮಾಡಿದ ಮೈಸೂರು cycle ಬ್ರ್ಯಾಂಡ್ ಅಗರಬತ್ತಿ ವ್ಯಾಪಾರವನ್ನು ಸಾವಿರಾರು ಕೋಟಿಯ ಕಂಪನಿಯಾಗಿ ಮಾಡಿದ ಕನ್ನಡಿಗನ ಸಾಧನೆ, ನಿಮಗೂ ಸ್ಪೂರ್ತಿಯಾಗುತ್ತೆ../a>

ಹೈದರಾಬಾದ್ ಮೂಲಕ ಪ್ರೊ.ಸತೀಶ್ ಕುಮಾರ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತಯಾರಿಸಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಟ್ಟಿದ್ದಾರೆ. ಸತೀಶ್ ಕುಮಾರ್ ಹಲವು ವರ್ಷಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಂಪನಿಯನ್ನು ನಡೆಸುತ್ತಿದ್ದಾರೆ. ಇಲ್ಲಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಮೂರು ಹಂತಗಳ ಪ್ರಕ್ರಿಯೆಸಿ ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನು ಪೆಟ್ರೋಲ್ ಪ್ಯಾರೊಲಿಸಿಸ್ ಎಂದು ಕರೆಯಲಾಗುತ್ತದೆ.

1 kg ಪ್ಲಾಸ್ಟಿಕ್ ಗೆ 1 ಲೀಟರ್ ಪೆಟ್ರೋಲ್?

Also read: ಬಾಲ್ಯದಲ್ಲೇ ದೇಶವೇ ಮೆಚ್ಚುವಂತಹ ಸಾಧನೆ; ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವ ಆಪ್‌ವೊಂದನ್ನು ಅಭಿವೃದ್ದಿ ಪಡಿಸಿದ ಬೆಂಗಳೂರಿನ ಬಾಲಕ..

ಈ ವಿಧಾನದಲ್ಲಿ ಪ್ಲಾಸ್ಟಿಕ್ ಅನ್ನು ತೈಲ, ಡೀಸೆಲ್, ಪೆಟ್ರೋಲ್ ಆಗಿ ಪರಿವರ್ತಿಸಿ ಬಳಕೆ ಮಾಡಲು ಉಪಯುಕ್ತವಾಗಿದೆ. ಸುಮಾರು 500 ಕೆ.ಜಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‍ನಿಂದ 400 ಲೀಟರ್ ಪೆಟ್ರೋಲ್ ಉತ್ಪಾದಿಸಬಹುದು. ಇದು ಸರಳ ವಿಧಾನವಾಗಿದ್ದು ಇದನ್ನು ತಯಾರಿಸಲು ನೀರಿನ ಅವಶ್ಯಕತೆ ಬೀಳುವುದಿಲ್ಲ. ಅಲ್ಲದೆ ಕೊಳಚೆ ನೀರನ್ನು ಕೂಡ ಇದು ಬಿಡುಗಡೆ ಮಾಡುವುದಿಲ್ಲ. ಇದರಿಂದ ವಾಯು ಮಾಲಿನ್ಯವೂ ಆಗುವುದಿಲ್ಲ ಎಂದು ಸತೀಶ್ ತಿಳಿಸಿದ್ದಾರೆ. 2016 ರಿಂದ ಸತೀಶ್ ಅವರು ಮರುಬಳಕೆ ಮಾಡಲಾಗದ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿದ್ದಾರೆ.

40 ರೂ. ಗೆ 1 ಲೀಟರ್ ಪೆಟ್ರೋಲ್?

Also read: ಹಳ್ಳಿಯಿಂದ ಬಂದು ಕಂಪನಿ ಸ್ಥಾಪಿಸಿ; ದೇಶದ ಮೊದಲ ಕನ್ನಡದ ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್..

ಕುಮಾರ್ ಅವರು 2016ರಿಂದ ಪುನರ್ಬಳಕೆಗೆ ಅರ್ಹವಲ್ಲದಿದ್ದ 50 ಟನ್ ಪ್ಲಾಸ್ಟಿಕ್‌ನ್ನು ಇಂಧನವನ್ನಾಗಿ ಪರಿವರ್ತಿಸಿದ್ದಾರೆ. ಸದ್ಯ ಅವರ ಕಂಪನಿಯು ಪ್ರತಿದಿನ 200 ಕೆ.ಜಿ.ಪ್ಲಾಸ್ಟಿಕ್‌ಗಳಿಂದ 200 ಲೀ.ಪೆಟ್ರೋಲ್‌ನ್ನು ತಯಾರಿಸುತ್ತಿದೆ ಮತ್ತು ಅದನ್ನು ಸ್ಥಳೀಯ ಕೈಗಾರಿಕೆಗಳಿಗೆ ಪ್ರತಿ ಲೀಟರ್‌ಗೆ 40/50 ರೂ.ಗೆ ಮಾರಾಟ ಮಾಡುತ್ತಿದೆ. ಆದರೆ ವಾಹನಗಳಲ್ಲಿ ಈ ಇಂಧನ ಬಳಕೆ ಯೋಗ್ಯವೇ ಎನ್ನುವುದನ್ನು ಇನ್ನಷ್ಟೇ ಪರೀಕ್ಷಿಸಬೇಕಿದೆ. ವಿಂಗಡಣೆಯ ಅಗತ್ಯವಿಲ್ಲದೆ ಎಲ್ಲ ವಿಧಗಳ ಪ್ಲಾಸ್ಟಿಕ್‌ಗಳನ್ನು ಇದಕ್ಕೆ ಬಳಸಬಹುದಾಗಿದೆ.