ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಸಿಟ್ಟಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ ಭೂಪ; ಕೊನೆಗೆ ಏನಾಯಿತು ನೋಡಿ.!

0
292

ದೇಶದಲ್ಲಿ ಗಂಡ ಹೆಂಡತಿಯರ ನಡುವೆ ಎಂತಂತಹ ಘಟನೆಗಳು ನಡೆಯುತ್ತಿವೆ ಎಂದರೆ ಯಾರು ಊಹೇ ಮಾಡಿಕೊಳ್ಳಲು ಸಾಧ್ಯವಾಗದಂತ ಘಟನೆಗಳು ನಡೆಯುತ್ತಿವೆ. ಅದರಲ್ಲಿ ಅರ್ಧದಷ್ಟು ಘಟನೆಗಳು ಹೆಂಡತಿ ಮಾಡಿದ ಊಟದಿಂದಲೇ ಶುರುವಾಗುತ್ತೇವೆ. ಆದರೆ ಕಷ್ಟ ಪಟ್ಟು ಊಟ ತಯಾರಿಸಿದ ಹೆಂಡತಿಗೆ ಬಹುಮಾನವಾಗಿ ಬೈಗುಳ ಬಿಟ್ಟರೆ ಏನು ಸಿಗುದಿಲ್ಲ ಎನ್ನುವುದು ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ತಿಳಿದಿದೆ ಅನಿಸುತ್ತೆ. ಇಂತಹದೆ ಒಂದು ಘಟನೆ ನಡೆದಿದ್ದು, ಊಟದಲ್ಲಿ ಕೂದಲು ಬಿದಿದ್ದಕ್ಕೆ ಹೆಂಡತಿಯ ತಲೆ ಬೋಳಿಸಿದ ಘಟನೆ ನಡೆದಿದ್ದು ಭಾರಿ ವೈರಲ್ ಆಗಿದೆ.

Also read: ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಮದುವೆಯಾದ ಒಂದೇ ದಿನದಲ್ಲಿ ಪತಿಯನ್ನು ಬಿಟ್ಟು ಹೋದ ನವ ವಿವಾಹಿತೆ; ಮೋದಿ ಅವರ ಯೋಜನೆಗೆ ಸ್ಪೂರ್ತಿಯಾದ ಯುವತಿ.!

ಹೌದು ಕೆಲವೊಮ್ಮೆ ಆಕಸ್ಮಿಕವಾಗಿ ಊಟದಲ್ಲಿ ಕೂದಲು ಸಿಕ್ಕಿಬಿಡುತ್ತದೆ. ಗಂಡಸರಿಗೆ ಊಟ ಬಡಿಸುವಾಗ ಕೂದಲು ಸಿಕ್ಕರೆ ಅಡುಗೆ ಮಾಡಿದವರಿಗೆ ಬೈಗುಳ ತಪ್ಪಿದ್ದಲ್ಲ. ಬೈದುಕೊಂಡು ಸುಮ್ಮನಾದರೆ ಸರಿ. ಆದರೆ ಅವರ ಕೋಪ ನೆತ್ತಿಗೇರಿ ಮತ್ಯಾವುದಕ್ಕೋ ತಿರುಗಿದರೆ ಕಷ್ಟ. ಯಾಕೆಂದರೆ ಊಟದಲ್ಲಿ ಕೂದಲು ಸಿಕ್ಕಿತೆಂದು ಕೋಪಗೊಂಡ ಗಂಡ ಹೆಂಡತಿಯ ತಲೆಯನ್ನೇ ಬೋಳಿಸಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದ್ದು ಆರೋಪಿ ಬಾಬ್ಲು ಮೊಂಡಲ್​ (35) ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಹೆಂಡತಿ ತಿಂಡಿ ಸಿದ್ದ ಮಾಡುವಾಗ ಅಪ್ಪಿತಪ್ಪಿ ಕೂದಲು ಸೇರಿಕೊಂಡಿದೆ. ಮೊಂಡಲ್​ ತಿಂಡಿ ಮಾಡುವಾಗ ಅನ್ನದಲ್ಲಿ ಕೂದಲು ಇರುವುದನ್ನು ಕಂಡು ಕೋಪಗೊಂಡಿದ್ದಾನೆ. ಹೆಂಡತಿಯ ಮೇಲೆ ಕೂಗಾಡಿ, ಬಲವಂತವಾಗಿ ಆಕೆಯ ತಲೆ ಕೂದಲನ್ನು ಬ್ಲೇಡ್​ನಿಂದ ಬೋಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Also read: ಮೃತಪಟ್ಟ ಗಂಡನ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ; ಯಾರಿಗೂ ತಿಳಿಯದಂತೆ 7 ಜನರನ್ನು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡ.!

ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ ಎಂದು ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಾಂಗ್ಲಾದೇಶದ ಜಾಯ್‍ಪುರ್‍ನ ವಾಯವ್ಯ ಜಿಲ್ಲೆಯ ಹಳ್ಳಿಯಾಗಿದ್ದು ಘಟನೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಾಬ್ಲು ಮೊಂಡಾಲ್‍ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಪತ್ನಿ ಸಿದ್ಧಪಡಿಸಿದ ಅಕ್ಕಿ ಹಾಗೂ ಹಾಲಿನ ಉಪಹಾರವನ್ನು ಸೇವಿಸುತ್ತಿರುವಾಗ ತಟ್ಟೆಯಲ್ಲಿ ಕೂದಲು ಪತ್ತೆಯಾಗಿದೆ. ಕೂದಲನ್ನು ನೋಡುತ್ತಲೇ ಬಾಬ್ಲು ಕೋಪಗೊಂಡು ಹೆಂಡತಿಯನ್ನು ದೂಷಿಸಿದ್ದಾನೆ. ನಂತರ ಬ್ಲೇಡ್ ತೆಗೆದುಕೊಂಡು ಬಲವಂತವಾಗಿ ಹೆಂಡತಿಯ ತಲೆಯನ್ನು ಬೋಳಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Also read: ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಅತಿಯಾಗಿ ಪ್ರೀತಿಸುವ ಗಂಡನಿಂದ ಡೈವರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ..

ಬಬ್ಲು ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಇದರಿಂದ ಆತನ ಹೆಂಡತಿಗೆ ಘೋರ ನೋವುಂಟಾಗಿದ್ದು, ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಅಪರಾಧವಾಗಿದೆ. ಅಲ್ಲದೆ ತನ್ನ 23 ವರ್ಷದ ಹೆಂಡತಿಯ ವಿಧೇಯತೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ. ಸರ್ಕಾರೇತರ ಸಂಸ್ಥೆಯೊಂದರ ಪ್ರಕಾರ, ವರ್ಷದ ಮೊದಲ ಆರು ತಿಂಗಳಲ್ಲಿ ದಿನಕ್ಕೆ ಸರಾಸರಿ ಮೂರು ಅತ್ಯಾಚಾರಗಳು ಬಾಂಗ್ಲಾದೇಶದಲ್ಲಿ ನಡೆದಿವೆ. ಜನವರಿ-ಜೂನ್ ನಡುವೆ ಒಟ್ಟು 630 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ಹಲ್ಲೆಯಿಂದಾಗಿ 37 ಮಂದಿ ಸಾವನ್ನಪ್ಪಿದ್ದರೆ, 7 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.