ಮೂರು ವರ್ಷದಿಂದ ಒಬ್ಬ ವ್ಯಕ್ತಿ ಮರದ ಮೇಲೇನೆ ವಾಸ ಮಾಡ್ತಿದ್ದ, ಆತನನ್ನು ಕೆಳಗಿಳಿಸಲು ಏನು ಮಾಡಿದರು ಗೊತ್ತಾ??

0
737

ಮನುಷ್ಯ ಹೆದರಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.. ಭೂಮಿ ಮೇಲೆ ಜೀವನ ಮಾಡಲು ಆತನಿಗೆ ಹೆದರಿಕೆ ಆಗಿ ಆತ ಮಾಡಿದ ರೀತಿ ಎಲ್ಲರು ಹುಬ್ಬೇರುವಂತೆ ಮಾಡಿದೆ. ಎಸ್ ಈ ಘಟನೆ ಫಿಲಿಫೈನ್ಸ್‌ನಲ್ಲಿ ನಡೆದಿದೆ.

ಸುಮಾರು ಮೂರು ವರ್ಷಗಳಿಂದ ಗಿಲ್ ಬರ್ಟ್ ಶಾನ್ ಚೇಜ್ ಎಂಬ ವ್ಯಕ್ತಿ ತೆಂಗಿನ ಮರದಲ್ಲಿ ತನ್ನ ವಾಸ್ತವ್ಯವನ್ನು ಮಾಡಿಕೊಂಡಿರುತ್ತಾನೆ, ತಾಯಿ ಹಾಗೂ ಅಕ್ಕ ಪಕ್ಕದ ಜನ ಎಷ್ಟೇ ಭಾರಿ ಕೆಳಗೆ ಇಳಿಯುವಂತೆ ಹೇಳಿದ್ರು ಆತ. ಕೆಳಗೆ ಇಳಿಯುವುದಿಲ್ಲ. ಇತ್ತೀಚಿಗೆ ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಆತ ಗಿಡದಲ್ಲಿರುವ ದೃಶ್ಯವನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿತು. ವಿಡಿಯೋ ಸಕತ್ ವೈರಲ್ ಆಯಿತು. ನಂತರ ಮರದಲ್ಲಿರುವ ಮನಷ್ಯನನ್ನು ಕೆಳಗೆ ಇಳಿಸಲು ಹರಸಾಹಸ ಸಹ ಪಡಲಾಯಿತು.

ಗಿಲ್ ಬರ್ಟ್ ಶಾನ್ ಚೇಜ್ 36 ತಿಂಗಳಿಗಿಂತಲೂ ಹೆಚ್ಚಿನ ಸಮಯ, 60 ಅಡಿಗೂ ಹೆಚ್ಚಿನ ಎತ್ತರ ವಿರುವ ತೆಂಗಿನ ಮರದಲ್ಲಿ ವಾಸವಿರುತ್ತಾನೆ. ಈತ ಮರ ಹತ್ತುವಾಗ ಹಳೆಯ ಬಟ್ಟೆ ಹಾಗೂ ಮರದ ಒಂದು ತುಂಡನ್ನು ತೆಗೆದುಕೊಂಡು ಮೇಲೆ ಹತ್ತಿದ್ದಾನೆ. ಅಲ್ಲದೆ ಮರದಲ್ಲಿ ಒಂದು ಚಿಕ್ಕದಾದ ಮನೆಯನ್ನು ಮಾಡಿಕೊಂಡಿದ್ದಾನೆ. ತೆಂಗಿನ ಗಿಡದ ಮೇಲೆ ಚಿಕ್ಕದಾಗಿ ಮನೆಯನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಮನೆಗೆ ಗೋಡೆ ಇರದಿದ್ದರೂ, ಗರಿಗಳಿಂದ ರಕ್ಷಿಸಿ ಕೊಳ್ಳುತ್ತಿದ್ದನು.

ರಕ್ಷಣಾ ಸಿಬ್ಬಂದಿ ಎಷ್ಟ ಬೇಡಿಕೊಂಡ್ರು ಆತ ಕೆಳಗೆ ಇಳಿಯದೇ ಇದ್ದಾಗ, ಮರವನ್ನು ಕತ್ತರಿಸಿ ಆತನನ್ನು ಕೆಳಗೆ ಇಳಿಸಲಾಯಿತು.

ಊಟ ಹೇಗೆ: ಗಿಲ್ ಬರ್ಟ್ ಶಾನ್ ಚೇಜ್ ತಾಯಿ ದಿನಂಪ್ರತಿ ಆತನಿಗಾಗಿ ಊಟವನ್ನು ಮಾಡಿ ಗಿಡದ ಕೆಳಗೆ ಇಡುತ್ತಿದ್ದಳು. ಗಿಲ್ ಬರ್ಟ್ ಶಾನ್ ಚೇಜ್ ಮೇಲಿನಿಂದ ಹಗ್ಗ ಬಿಟ್ಟು ಆ ಊಟವನ್ನು ತೆಗೆದುಕೊಳ್ಳುತ್ತಿದ್ದ. ಇನ್ನೊಂದು ವಿಶೇಷ ಅಂದ್ರೆ ಆತನಿಗೆ ಸಿಗರೇಟ್ ಸಹ ಇಲ್ಲಿಂದಲೇ ಪೂರೈಕೆ ಆಗುತ್ತಿತ್ತು.

ಮೇಲೆ ವಾಸ ಏಕೆ: ಗಿಲ್ ಬರ್ಟ್ ಶಾನ್ ಚೇಜ್ 2014ರಲ್ಲಿ ತನ್ನ ಸಹೋದರಿಯ ಜೊತೆಗೆ ಜಗಳವಾಡುತ್ತಾನೆ. ಆಗ ಈತನ ತಲೆಗೆ ಪಿಸ್ತುಲಿನಿಂದ ಏಟು ಬೀಳುತ್ತದೆ ಆ ಕಾರಣದಿಂದ ಆತ ಮರ ಹತ್ತಿ ಕುಳಿತುಕೊಂಡಿದ್ದಾನೆ.