ಫೇಸ್‍ಬುಕ್ ಬಳಕೆದಾರರೇ ಎಚ್ಚರ; ಚಂದದ ಹುಡುಗಿಯರ ಫೋಟೋ ಬಳಸಿಕೊಂಡು ಹಣ ವಂಚನೆ ಮಾಡುತ್ತಿದ್ದಾರೆ ಎಚ್ಚರ.!

0
273

ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, whatsapp, ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಲವ್ ಸ್ಟೋರಿಗಳು ಶುರುವಾಗುತ್ತಿದ್ದು. ಇದಕ್ಕೆ ಯುವಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಲ್ಲಿ ಚಂದಾಗಿ ಕಾಣುವ ಯುವತಿರ ಒಂದಿಷ್ಟು ಫೋಟೋಗಳನ್ನು ಇಟ್ಟುಕೊಂಡು ಫೇಸ್ಬುಕ್ ಮಾಡಿ ಬಲಿಗೆ ಬಿಲಳಿಸಿಕೊಳ್ಳುವ ಟೀಮ್-ಗಳು ಲಕ್ಷಾಂತರ ಹಣ ವಸೂಲಿ ಮಾಡುತ್ತಾರೆ. ಇಂತಹ ಅನೇಕ ಪ್ರಕರಣಗಳು ಎಲ್ಲಡೆ ನಡೆಯುತ್ತಾನೆ ಇದ್ದು ರಾಜ್ಯದಲ್ಲಿ ಹೆಚ್ಚಾಗಿವೆ ಸದ್ಯ ಇಂತಹ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದ್ದು ಭಾರಿ ವೈರಲ್ ಆಗಿದೆ.

Also read: ವಿಶೇಷ ಚೇತನನೊಬ್ಬತಾನು ಗೆದ್ದ ಹಣವನ್ನು ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಿ ಕಾಲಿನಿಂದಲೇ ಸಿಎಂ ಜೊತೆ ತೆಗೆದುಕೊಂಡ ಸೆಲ್ಫಿ ವೈರಲ್.!

ಹೌದು ಫೇಸ್‍ಬುಕ್‍ನಲ್ಲಿ ಸುಂದರವಾದ ಫೋಟೋಗಳನ್ನು ಹುಡುಗಿಯರು ಹಾಕುವ ಮುನ್ನ ಒಂದು ಸಾರಿ ಯೋಚನೆ ಮಾಡುವುದು ಒಳ್ಳೆಯದು. ಏಕೆಂದರೆ ನೀವು ಪೋಸ್ಟ್ ಮಾಡೋ ಫೋಟೋ-ಗಳನ್ನು ಇಟ್ಟುಕೊಂಡು ದುರ್ಬಳಕೆ ಮಾಡಿ ನಿಮಗೆ ಗೊತ್ತಿಲ್ಲದೆ ಹಣ ವಸೂಲಿ ಮಾಡೋ ಖತರ್ನಾಕ್ ಟೀಮ್ ಹುಟ್ಟಿಕೊಂಡಿದ್ದು ಸುಂದರವಾದ ಹುಡುಗಿಯರ ಫೋಟೋ ಕಂಡು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋ ಗಂಡಸರೇ ಇವರ ಟಾರ್ಗೆಟ್ ಆಗಿದ್ದಾರೆ. ಇಂತಹ ಒಂದು ಘಟನೆ ಕಲಬುರಗಿ ಕಂಡು ಬಂದಿದ್ದು, ರಘುವೀರ್ ಎನ್ನುವ ಯುವಕ ಹುಡುಗಿಯರ ಫೋಟೋ ತೋರಿಸಿ ಹಣ ವಸೂಲಿ ಮಾಡುವ ಖತರ್ನಾಕ್ ವಂಚಕನಾಗಿದ್ದಾನೆ.

Also read: ಪೊಲೀಸರು ಮಹಿಳೆಯರನ್ನು ಬಂಧಿಸುವ ಸಯಮದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕು.!

ಎಂಜನಿಯರಿಂಗ್, ಎಂಬಿಎ ಮುಗಿಸಿಕೊಂಡಿರೋ ರಘುವೀರ್, ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರೋದು ಬಿಟ್ಟು ಸುಲಭವಾಗಿ ದುಡ್ಡು ಮಾಡೋಕೆ ಹೋಗಿ ಈಗ ಜೈಲು ಪಾಲಾಗಿದ್ದಾನೆ. ಗೂಗಲ್ ಮುಖಾಂತರ ಚಂದ ಚಂದದ ಹುಡುಗಿಯರ ಫೋಟೋ ತೆಗೆದುಕೊಂಡು ನಕಲಿ ಫೇಸ್‍ಬುಕ್ ಅಕೌಂಟ್ ಕ್ರಿಯೇಟ್ ಮಾಡುವ ಈತ ಬೇರೆಯವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಬಳಿಕ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಬಳಿಕ ಆನ್‍ಲೈನ್ ಜಾಬ್ ಲಿಂಕ್ ಕಳುಹಿಸಿ ಅದರ ಬಗ್ಗೆ ಪುಸಲಾಯಿಸಿ ಹಣವನ್ನ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ನಂತರ ಕೆಲಸ ಕೊಡಿಸದಿದ್ದಾಗ ಹಣ ವಾಪಸ್ ಕೊಡುವಂತೆ ಹಣ ನೀಡಿದವರು ಕೇಳಿದರೆ ಅವರನ್ನೇ ರಘುವೀರ್ ಹೆದರಿಸುತ್ತಿದ್ದ.

ಅಷ್ಟೇಅಲ್ಲದೇ ಮತ್ತೊಂದು ನಂಬರಿನಿಂದ ಅವರಿಗೆ ಕರೆ ಮಾಡಿ ತಾನು ಸೈಬರ್ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯ್ ಎಂದು ಹೇಳಿ ಪ ನಿಮ್ಮ ವಿರುದ್ಧ ದೂರು ಬಂದಿದೆ ಅಂತ ಹೇಳಿ ಮತ್ತೆ ಹಣ ವಸೂಲಿ ಮಾಡುತ್ತಿದ್ದನು. ಹೀಗೆ ಆನ್‍ಲೈನ್ ಜಾಬ್ ಕೊಡಿಸ್ತೀನಿ ಎಂದು ಪಂಗನಾಮ ಹಾಕಿ ರಘುವೀರ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. ಕೆಲದಿನಗಳ ಹಿಂದೆ ಕಲಬುರಗಿಯ ಕೆಎಸ್‌ಆರ್‌ಪಿ ಸಬ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಪ್ರಿಯಾ ಶೆಟ್ಟಿ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡು ಹಣ ವಸೂಲಿ ಮಾಡಿದ್ದು ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನ ಬಂಧಿಸಿ ಸುಮಾರು 3.5 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.

Also read: ಮೊಬೈಲ್ ಪ್ರಿಯರೆ ಎಚ್ಚರ, ಟಾಯ್ಲೆಟ್-ನಲ್ಲಿ ನೀವೇನಾದರು ಮೊಬೈಲ್ ಬಳಕೆ ಮಾಡಿದ್ದೇ ಆದಲ್ಲಿ, ಮೂಲವ್ಯಾಧಿ ಸೇರಿದಂತೆ ಅನೇಕ ಖಾಯಿಲೆಗಳು ಬರುತ್ತವೆಯಂತೆ!!

ಇದರಲ್ಲಿ ಬರಿ ಹುಡುಗರೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಕೆಲವು ಮಹಿಳೆಯರು ಕೂಡ ಇದೇ ಮಾರ್ಗದಲ್ಲಿ ಯುವಕರಿಗೆ ಮೋಸ ಮಾಡಿ ಹಣ ವಂಚನೆ ಮಾಡುತ್ತಿದ್ದಾರೆ. ಈ ಮೋಸದಲ್ಲಿ ಈಜಿ ಆಗಿ ಬಲೆಗೆ ಬಿಳ್ಳುವುದು ಏಕೆಂದರೆ ಪ್ರತಿಯೊಬ್ಬರ ಬಳಿಯಲ್ಲಿವೂ ಮೊಬೈಲ್ ಇರುವುದರಿಂದ ಖದಿಮರಿಗೆ ಸರಳವಾಗಿ ವಂಚನೆ ಮಾಡಲು ಇನ್ನಷ್ಟು ಸರಳವಾಗಿದೆ. ಅದಕ್ಕಾಗಿ ಯಾವುದೇ ಫೇಸ್ಬುಕ್-ನಿಂದ ರಿಕ್ವೆಸ್ಟ್ ಬಂದರು ಸರಿಯಾಗಿ ನೋಡಿ ಅಕ್ಸೆಪ್ಟ್ ಮಾಡಿಕೊಳ್ಳುವುದು ಒಳ್ಳೆಯದು ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳಬೇಕಾಗುತ್ತೆ.