ಕಪ್ಪು ಹಣ ತಡೆಯಲು ಮೋದಿ ಸರ್ಕಾರದಿಂದ ಮತ್ತೊಂದು ಪ್ರಯತ್ನ?? ಕಪ್ಪು ಹಣ, ಬೇನಾಮಿ ಆಸ್ತಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್??

0
210

ದೇಶದಲ್ಲಿ ಕಪ್ಪು ಹಣಕ್ಕೆ ಬೇಲಿ ಹಾಕಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೆ ಅಕ್ರಮ ಆಸ್ತಿಗಳಿಗೆ ಬೇಲಿ ಹಾಕಲು ಮುಂದಾಗಿದ್ದು, ಹೆಚ್ಚಿನ ಆಸ್ತಿ ಹೊಂದಿರುವವರಿಗೆ ನಡುಕ ಹುಟ್ಟಿದೆ. ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಭ್ರಷ್ಟಾಚಾರ ನಡೆಸಲು ಯಾರನ್ನೂ ಬಿಡುವುದಿಲ್ಲ ಎಂದು ಹೇಳುತ್ತಿರುವ ಮೋದಿಯವರು ಈಗ ಆಸ್ತಿಗಳಿಗೂ ‘ಆಧಾರ್ ಲಿಂಕ್ ಎಂಬ ಮತ್ತೊಂದು ದೈತ್ಯ ಆಯುಧ ಪ್ರಯೋಗಿಸಲು ಮುಂದಾಗಿದ್ದಾರೆ. ಅಂದರೆ, ಎಲ್ಲಾ ಸ್ವತ್ತುಗಳನ್ನು ಆಧಾರ್ ನೊಂದಿಗೆ ಜೋಡಿಸುವುದು ಕಡ್ಡಾಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Also read: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ; ಮೋದಿಗೆ ಹೋಲಿಕೆ ಮಾಡಿ ನಿಖಿಲ್ ಮುಖ್ಯಮಂತ್ರಿ ಆಗುತ್ತಾರಂತೆ, ಇದು ಸಾಧ್ಯವಾಗುತ್ತಾ??

ಹೌದು ಕಳೆದ ಎರಡು- ಮೂರು ವರ್ಷದಿಂದ ಈ ಸುದ್ದಿ ಹರಿದಾಡುತ್ತಲೇ ಇದ್ದು, ಈಗ ಈ ಬಾರಿ ಜೋರಾಗಿ ಕೇಳಿಬರುತ್ತಿದೆ. ಕಪ್ಪು ಹಣ ತಡೆಗೆ ಪ್ರಮುಖ ಕ್ರಮ ಎಂದುಕೊಂಡಿರುವ ಈ ಆಸ್ತಿ- ಆಧಾರ್ ಜೋಡಣೆಯು ಸದ್ಯದಲ್ಲೇ ಜಾರಿಗೆ ಬರಲಿದೆ ಎಂಬ ಮಾತು ಸತ್ಯವಾಗಿದೆ. ಅಡಗಿಸಿಟ್ಟಿರುವ ಕಪ್ಪುಹಣ ಹೊರಗೆ ತರಲು ಸಾಧ್ಯವಾಗುವಂತೆ ತಮ್ಮ ಅಧಿಕಾರಾವಧಿಯ ಮೊದಲ ಐದು ವರ್ಷಗಳಲ್ಲಿ ಹಲವು ಪ್ರಮುಖ ಕಾನೂನು ಜಾರಿಗೊಳಿಸಿದ ಅವರು, ಈಗ ಆಸ್ತಿಗಳಿಗೂ ‘ಆಧಾರ್ ಲಿಂಕ್ ಮಾಡಲು ಮುಂದಾಗಿದ್ದಾರೆ.

Also read: ನಿಮ್ಮ ಆಧಾರ್ ಕಾರ್ಡ್-ನಲ್ಲಿ ಈ 6 ತಿದ್ದುಪಡಿಗೆ ಯಾವುದೇ ದಾಖಲೆ ಬೇಕಿಲ್ಲ; ಹಾಗಾದ್ರೆ ಯಾವವು 6 ಬದಲಾವಣೆ ಇಲ್ಲಿದೆ ಮಾಹಿತಿ.!

ಅದರಂತೆ ಎಲ್ಲಾ ಸ್ವತ್ತುಗಳನ್ನು ಆಧಾರ್ ನೊಂದಿಗೆ ಜೋಡಿಸುವುದು..! ವಿಶ್ವಾಸಾರ್ಹ ಮೂಲಗಳ ಪ್ರಕಾರ, ಈ ಸಂಬಂಧ ಕೇಂದ್ರ ಸರ್ಕಾರ ರೂಪಿಸುತ್ತಿರುವ ವಿಧೇಯಕ ಅಂತಿಮ ಹಂತದಲ್ಲಿದೆ. ಕಪ್ಪು ಹಣ ನಗದು ರೂಪದಲ್ಲಿರದೆ. ಹೂಡಿಕೆಯಾಗಿ ಬದಲಾಗುತ್ತಾ ರಿಯಲ್ಎಸ್ಟೇಟ್ ಕ್ಷೇತ್ರಕ್ಕೆ ಪ್ರವಹಿಸುತ್ತಿದೆ. ಸಧ್ಯ ದೇಶಾದ್ಯಂತ ಇದೇ ರೀತಿಯ ಪರಿಸ್ಥಿತಿಯಿದ್ದು, ಇದರಿಂದ ನಿವೇಶನ, ಮನೆಗಳ ಬೆಲೆಗಳ ಗಗನಕ್ಕೇರುತ್ತಿವೆ. ಇದರಿಂದ ಬಡವರು,ಮಧ್ಯಮ ವರ್ಗದವವರು ನಿವೇಶನ ಮನೆ ಖರೀದಿಸಲು ಸಾಧ್ಯವಾಗತಂತಹ ಪರಿಸ್ಥಿತಿ ಕಾರಣವಾಗುತ್ತಿದೆ. ಮೂರು ವರ್ಷದ ಹಿಂದೆ ಅಪನಗದೀಕರಣ ನಿರ್ಧಾರ ಘೋಷಣೆಯಾದ ಮೇಲೆ ಚಾಲ್ತಿಗೆ ಬಂದ ಆಧಾರ್ ಜೋಡಣೆ ಪ್ರಸ್ತಾಪವು ಅಕ್ರಮ ಹಣ ವರ್ಗಾವಣೆ ತಡೆಯುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ, ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತದೆ ಎಂಬುದು ಯೋಜನೆಯ ಹಿಂದಿನ ಲೆಕ್ಕಾಚಾರವಾಗಿದೆ.

Also read: ಪ್ರಯಾಣಿಕರಿಗೆ ಶಾಕ್ ನೀಡಿದ ರೈಲ್ವೆ ಮಂಡಳಿ; ರೈಲುಗಳಲ್ಲಿ ಊಟ-ತಿಂಡಿ ಬೆಲೆ ಏರಿಕೆ, ಯಾವುದಕ್ಕೆ ಎಷ್ಟು ಏರಿಕೆ??

ಕೆಲ ರಾಜ್ಯಗಳಲ್ಲಿ ನಿರ್ದಿಷ್ಟ ಮೌಲ್ಯದ ಆಸ್ತಿ ನೋಂದಣಿಗೆ ಪ್ಯಾನ್‌ ವಿವರ ಕಡ್ಡಾಯ ಮಾಡಲಾಗಿದೆ. ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ದಂಧೆ ಮೇಲೆ ಕಡಿವಾಣ ಹಾಕಲು ರೇರಾ ಕಾಯ್ದೆ ಜಾರಿಯಲ್ಲಿದೆ. ರೇರಾ ಮಾದರಿ ಕಾಯ್ದೆ ಇನ್ನೂ ಕೆಲ ರಾಜ್ಯಗಳಲ್ಲಿ ಬಲವಾಗಿದೆ. ನೋಂದಣಿ ಈಗ ಆನ್ ಲೈನ್ ಆಗಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಆಸ್ತಿ ವ್ಯವಹಾರಗಳ ಜತೆ ಆಧಾರ್ ಲಿಂಕ್ ಘೋಷಣೆಯಿಂದ ಹಿಂದೆ ಸರಿಯುತ್ತಿದೆ. 1908ರ ಆಸ್ತಿ ನೋಂದಣಿ ಕಾಯ್ದೆ ಬಳಸಿಕೊಂಡು ಬಂದು ಬೇನಾಮಿ ಆಸ್ತಿಗಳ ಮೇಲೆ ಸರ್ಕಾರ ಕಣ್ಣಿಡಲಿದೆ ಎಂಬ ನಿರೀಕ್ಷೆ ಇನ್ನೂ ಸಾರ್ವಜನಿಕರಲ್ಲಿದೆ. ಈ ಹಿಂದೆ ಕೇಂದ್ರ ಸಚಿವರಾದ ಹರ್ದೀಪ್ ಪುರಿ ಹೇಳಿದ ಪ್ರಕಾರ ಆಸ್ತಿ ವ್ಯವಹಾರಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿದರೆ ಈ ರೀತಿ ಆಧಾರ್ ಜೋಡಣೆ ಮಾಡುವುದರಿಂದ ಬೇನಾಮಿ ಆಸ್ತಿ ಗುರುತಿಸುವುದು ಸರಳವಾಗುತ್ತದೆ ಎಂದು ಹೇಳಿದ್ದಾರೆ.