ಸುಮಲತಾ ವಿರುದ್ದ ಮಂಡ್ಯದ ಚುನಾವಣಾಧಿಕಾರಿಯಿಂದ ನೋಟೀಸ್? ನಾಳೆಯೊಳಗೆ ಡಿಸಿ ನೋಟೀಸ್ ಗೆ ಉತ್ತರಿಸದೆ ಹೋದಲ್ಲಿ ಕಾನೂನು ಕ್ರಮ..

0
584

ಲೋಕಸಭಾ ಚುನಾವಣೆ ರಂಗೆರುತ್ತಿದ್ದು ದಿನದಿಂದ ದಿನಕ್ಕೆ ಮಂಡ್ಯ ಕ್ಷೆತ್ರದಲ್ಲಿ ಹಲವು ಬೆಳವಣಿಗೆಗಳು ಕಂಡು ಬರುತ್ತಿವೆ. ಮೊನ್ನೆತಾನೆ ಕುಮಾರಸ್ವಾಮಿ ಅಧಿಕಾರದ ವಿರುದ್ದ ದೂರು ಸಲ್ಲಿಸಿದ ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿಯವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಅಧಿಕಾರಿಗಳು ಸಾತ್ ನೀಡುತ್ತಿದ್ದಾರೆ. ಎಂದು ದೂರು ನೀಡಿದ್ದರು. ಅದರಂತೆ ಮುಖ್ಯಮಂತ್ರಿಯಿಂದ ಮಂಡ್ಯ ಜಿಲ್ಲಾಡಳಿತ ದುರ್ಬಳಕೆಯಾಗುತ್ತಿದೆ, ಎಂದು ಮಾಧ್ಯಮಯೊಂದರಲ್ಲಿ ಸುಮಲತಾ ಆರೋಪಿದರು ಈ ವಿಷಯವಾಗಿ ಮಂಡ್ಯ ಡಿಸಿ ಮಂಜುಶ್ರೀ ಅವರು, ಸುಮಲತಾ ಅಂಬರೀಶ್ ಗೆ ನೋಟಿಸ್ ಜಾರಿಮಾಡಿದ್ದಾರೆ. ಎನ್ನುವ ವಿಷಯ ತಿಳಿದು ಬಂದಿದೆ.

Also read: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಮಾಜಿ ಸಂಸದೆ ರಮ್ಯಾ..

ಹೌದು ಇತ್ತೀಚೆಗೆ ಖಾಸಗಿ ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ಸುಮಲತಾ ಅಂಬರೀಷ್ ಅವರು ಮಂಡ್ಯ ಜಿಲ್ಲಾಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹಿತಾಸಕ್ತಿ ಪ್ರಕಾರ ಜಿಲ್ಲಾ ಚುನಾವಣಾಧಿಕಾರಿ ವರ್ತಿಸುತ್ತಿದ್ಧಾರೆಂದು ಹೇಳಿದ್ದರು. ಈ ಹೇಳಿಕೆಯನ್ನು ಆಕ್ಷೇಪಿಸಿ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರು ಸುಮಲತಾಗೆ ನೋಟೀಸ್ ನೀಡಿ ಉತ್ತರ ನೀಡಲು ಒಂದು ದಿನದ ಕಾಲಾವಕಾಶ ಕೊಟ್ಟಿದ್ದಾರೆ. ಐಪಿಸಿ ಸೆಕ್ಷನ್ 189ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ನ್ಯಾಮಿನೇಷನ್ ಪೇಪರ್ ನಲ್ಲಿ ಎರರ್ ಇದೆ, ಆ ತಪ್ಪನ್ನು ಮುಚ್ಚಿಡೋಕೆ ಆಫೀಯಲ್ ಮೆಷಿನರಿ ವರ್ಕ್ ಮಾಡ್ತಿದೆ. ಸಿಎಂ ರವರು ಡಿಸಿ ರವರು ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿದೆ. ಇಟ್ ಇಸ್ ಟೋಟಲ್ ಬ್ರೇಕಿಂಗ್ ಆಫ್ ಲಾ, ಇದು ಎಲ್ಲು ನಡೆಯಲ್ಲ’ ಎಂಬ ಸುಮಲತಾ ಹೇಳಿಕೆ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ಈ ವಿಷಯಕ್ಕೆ ಕುರಿತಂತೆ ಈ ವಿಡಿಯೋದಲ್ಲಿನ ಮಾತುಗಳನ್ನ ಉಲ್ಲೇಖಿಸುತ್ತಾ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರು ಸುಮಲತಾ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಸುಮಲತಾ ವಿರುದ್ದ ಡಿಸಿ ಗರಂ?

Also read: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ; ದೇಶದಲ್ಲೆ ಕರ್ನಾಟಕದಿಂದ ಚುನಾವಣಾ ಆಯೋಗಕ್ಕೆ ಹೆಚ್ಚು ದೂರು..

ಮಂಡ್ಯದ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯಾದ ತನ್ನ ವ್ಯಕ್ತಿತ್ವವನ್ನು ಘಾಸಿಗೊಳಿಸುವ ಏಕೈಕ ಉದ್ದೇಶದಿಂದ ಆರೋಪ ಮಾಡಿದಂತಿದೆ. ಇಡೀ ವೃತ್ತಿ ಜೀವನದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಆಡಳಿತ ನಡೆಸಿರುವ ತನ್ನ ವ್ಯಕ್ತಿತ್ವಕ್ಕೆ ಸಾಮಾಜಿಕವಾಗಿ ಧಕ್ಕೆ ತರುತ್ತಿದೆ. ಮುಖ್ಯಮಂತ್ರಿಗಳು ಜಿಲ್ಲೆಯ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಾರೆಂದು ಹೇಳುವ ಮೂಲಕ ಇಡೀ ಜಿಲ್ಲೆಯ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವಂತೆ ಮಾಡಿದೆ. ಜಿಲ್ಲೆಯ ಅಧಿಕಾರಿಗಳು ತಮ್ಮ ಕೆಲಸವನ್ನು ಸಮರ್ಥವಾಗಿ ನಡೆಸುವುದನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ಏಕೆ ಕ್ರಮಗೊಳ್ಳಬಾರದು ಎಂದು ಒಂದು ದಿನದೊಳಗಾಗಿ ಉತ್ತರ ಕೊಡಿ ಎಂದು ಮಂಜುಶ್ರೀ ಅವರು ಸುಮಲತಾಗೆ ನೋಟೀಸ್ ನೀಡಿದ್ದಾರೆ. ನೋಟೀಸ್ ಜಾರಿಯಂತೆ ಒಂದು ವೇಳೆ, ನಾಳೆಯೊಳಗೆ ಸುಮಲತಾ ಅವರು ಉತ್ತರಿಸದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಮಂಡ್ಯ ಚುನಾವಣಾಧಿಕಾರಿಗಳು ಎಚ್ಚರಿಸಿದ್ದಾರೆ.

ನೋಟಿಸ್ ಗೆ ಸುಮಲತಾ ಪ್ರತಿಕ್ರಿಯೆ

Also read: ಸುಮಲತಾ ಹೆಸರಲ್ಲಿ 3 ಜನ ನಾಮಪತ್ರ ಸಲ್ಲಿಕೆ; ಜೆಡಿಎಸ್ ಕುತಂತ್ರಕ್ಕೆ ಪಕ್ಷದ ಚಿಹ್ನೆ ಆಯ್ಕೆಯ ಮೂಲಕ ಉತ್ತರ ನೀಡಿದ ಸಮಲತಾ ಅಂಬರೀಶ್..

ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ಚುನಾವಣಾಧಿಕಾರಿ ಎನ್ . ಮಂಜುಶ್ರೀ ನೋಟಿಸ್ ನೀಡಿದ ವಿಚಾರಕ್ಕೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ನೋಟಿಸ್ ಕೊಡಲು ಹೇಗೆ ಸಾಧ್ಯ. ಮುಖ್ಯ ಚುನಾವಣಾಧಿಕಾರಿಗಳೇ ನಮಗೆ ಹೇಳಿದ್ದಾರೆ. ಏನೇ ಆಕ್ಷೇಪಣೆಗಳಿದ್ದರೂ ದೂರು ಕೊಡಿ ಎಂದು. ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸುಮಲತಾ ಅವರು ಸ್ಪಷ್ಡನೆ ನೀಡಿದ್ದಾರೆ. ಇನ್ನೂ ಚಿಹ್ನೆ ಸಂಬಂಧ ಅಧಿಕೃತವಾಗಿ ನನಗೆ ಏನೂ ಬಂದಿಲ್ಲ. ಎಲ್ಲ ಗೊಂದಲಮಯವಾಗಿದೆ ಎಂದು ಸುಮಲತಾ ಹೇಳಿದ್ದಾರೆ.