ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಂಡ್ಯದ ರೈತ ಸಿಎಂ ಕುಮಾರಸ್ವಾಮಿಯವರಿಗೆ ಬರೆದ ಡೆತ್‌ನೋಟ್ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ..

0
638

ರೈತನೆ ದೇಶದ ಬೆನ್ನೆಲಬು ಅನ್ನ ನೀಡುವ ದೇವ ರೈತನ ಬಾಳು ಇಷ್ಟೊಂದು ಕೇಳಮಟ್ಟದಲ್ಲಿದೆ ಎಂದರೆ ಯಾರಿಗೆ ತಾನೇ ಹೃದಯ ಮಿಡಿಯುವುದಿಲ್ಲ? ಅದು ಯಾಕೋ ಏನೋ ರೈತನು ಅತ್ಮಹತೆಯಂತ ಸಾವಿಗೆ ಶರಣಾಗುತ್ತಿರುವುದು ಹೆಚ್ಚಾಗಿದೆ. ಈ ಹಿಂದೆ ಯಾವುದೇ ಕಾರಣಕ್ಕೆ ರೈತರು ಸತ್ತರು ಕೂಡ ಸಾಲಕ್ಕೆ ಸತ್ತಿದು ಅಂತ ಅನುಮಾನ ಕಂಡುಬರುತ್ತಿತು, ಆದರೆ ಈಗ ನೇರಾನೇರವಾಗಿ ಮುಖ್ಯಮಂತ್ರಿಯವರಿಗೆ ಡೆತ್‌ನೋಟ್ ಬರೆದಿಟ್ಟು ಸಾಯಿತ್ತಿದ್ದಾರೆ. ಇಂತಹ ಹಲವಾರು ಘಟನೆಗಳು ಇದೆ ವರ್ಷದಲ್ಲಿ ಕೇಳಿಬರುತ್ತಿದ್ದು ದೇಶದಲ್ಲಿ ಉಳಿಮೆಮಾಡುವ ರೈತರಿಗೆ ಭಯ ಹುಟ್ಟಿಸಿದೆ. ಇದಕ್ಕೆ ನಿದರ್ಶನವಾಗಿ ಮಂಡ್ಯದಲ್ಲಿ ರೈತನು ಬರೆದಿಟ್ಟ ಡೆತ್ ನೋಟ್. ಹೌದು ಸಿಎಂ ಕುಮಾರಸ್ವಾಮಿ ಹೆಸರಲ್ಲಿ ಹೃದಯ ಹಿಂಡುವ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟಿದ್ದಾನೆ. ಮಂಡ್ಯ ತಾಲ್ಲೂಕಿನ, ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದ 43 ವರ್ಷದ ಜಯಕುಮಾರ್ ಆತನ ಕುಟುಂಬದ ಸ್ಥಿತಿಯನ್ನು ಸವಿವರವಾಗಿ ಪತ್ರದಲ್ಲಿ ಬರೆದು ಆತ ನೇಣುಬಿಗಿದುಕೊಂಡಿದ್ದಾನೆ.

@kannada.oneindia.com

Also read: ಮೋದಿ ನೀಡಿರುವ ಭರವಸೆಗಳಲ್ಲೇ ಸುಳ್ಳು, ಯುವಕರಿಗೆ ಹಾಗೂ ರೈತರಿಗೆ ಮೋದಿಯಿಂದ ಭಾರಿ ಮೊಸವಾಗಿದೆ : ಮನಮೋಹನ್ ಸಿಂಗ್

ರೈತನು ಬರೆದ ಡೆತ್‌ನೋಟ್-ನಲ್ಲಿ ಅಂತಹದು ಏನಿದೆ?

ಜಯಕುಮಾರ್ ಕುಮಾರಸ್ವಾಮಿಯವರಿಗೆ ಬರೆದಿರುವ ಪತ್ರ ಓದಿದರೆ ರೈತನ ಬದುಕು ಎಂತಹದ್ದು ಎಂಬುದು ಅರ್ಥವಾಗುತ್ತೆ; ನಾನು ಮಂಡ್ಯಜಿಲ್ಲೆಯ ಕನ್ನಹಟ್ಟಿ ಗ್ರಾಮದ ರೈತ ನಂಗೆ ಇರುವ ಆಸ್ತಿ 28 ಗುಂಟೆ, ಒಂದು ಕೈ ಹಂಚ್ಚಿನ 80 ವರ್ಷದ ಹಳೆಯ ಮೆನೆಯಿದೆ. ನನಗೆ ಇಬ್ಬರು ಅಣ್ಣ- ತಮ್ಮಂದಿರು ಅವರಿಗೂ ಕೂಡ ಇಷ್ಟೇ ಆಸ್ತಿ ಇದೆ. ನಾವ್ಯಾರು ಆರ್ಥಿಕವಾಗಿ ಸಬಲರಲ್ಲ ಹೊತ್ತಿನ ಊಟಕ್ಕೂ ಚಿಂತಿಸಬೇಕು. ಇಂತಹ ಪರಿಸ್ಥಿಯಲ್ಲಿ ನನ್ನ ತಾಯಿಗೆ ಸಕ್ಕರೆ ಖಾಯಿಲೆ, ರಕ್ತದೊತ್ತಡ ಹೀಗೆ ಅನೇಕ ಆರೋಗ್ಯ ತೊಂದರೆಗಳಾಗಿ ಸಾವಿರಾರು ರೂಪಾಯಿಗಳನ್ನು ಕರ್ಚು ಮಾಡಿದೆನ್ನೆ ಇನ್ನು ಅವಳ ಆಸ್ಪತ್ರೆಗೆ ಹಣದ ಅವಶ್ಯಕತೆ ಇತ್ತು ಅದಕ್ಕಾಗಿ ನಾವು ಸಾಲ ಮಾಡಲು ಪರದಾಡುತ್ತಿರುವುದನ್ನು ನೋಡಿ ನನ್ನ ಅಮ್ಮ ಮನನೊಂದು ಆತ್ಮಹತೆ ಮಾಡಿಕೊಂಡರು.

@kannada.oneindia.com

Also read: ಭ್ರಷ್ಟಾಚಾರ ಮುಚ್ಚಿದೊಡಕ್ಕೆ ಏನೇನ್ ಮಾಡ್ತಾರೆ ನೋಡಿ; ಈ ಮುಖ್ಯಮಂತ್ರಿಯ 3 ವರ್ಷದ ಮೊಮ್ಮಗನ ಬಳಿ ಇದೆ ಕೋಟ್ಯಂತರ ರೂಪಾಯಿ ಆಸ್ತಿ!!

ಇಷ್ಟೇ ಅಲ್ಲದೆ ನನ್ನ ತಂದೆಗೆ ಲಿವರ್‌ ಸಮಸ್ಯೆಯಿದೆ ಅವರಿಗೆ 2.5 ಲಕ್ಷ ಸಾಲ ಮಾಡಿ ಆಸ್ಪತ್ರೆಗೆ ತೋರಿಸಿದೆ ಅಪ್ಪ ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಆದರೂ ವಿಧಿ ನನ್ನನು ಬಡತನ ನೋವಿನಿಂದ ದೂರಮಾಡದೆ ಮತ್ತೊಂದು ತೊಂದರೆ ಎದುರಾಗಿದೆ. ಗಂಟಲು ನೋವೆಂದು ಆಸ್ಪತ್ರೆಗೆ ಹೋದೆ ಅಲ್ಲಿ ಪರೀಕ್ಷಿಸಿ ನೋಡಿದ ವೈದ್ಯರು “ಗಂಟಲು ಕ್ಯಾನ್ಸರ್‌” ಆಗಿದೆ ಇದರ ಚಿಕ್ಸಿತೆಗೆ ಮೂರು ಲಕ್ಷ ಆಗುವುದೆಂದು ಹೇಳಿದ್ದಾರೆ. ಈ ಮೊದಲೇ ಅಪ್ಪನ- ಅಮ್ಮನ ಖಾಯಿಲೆಗೆ ಸುಮಾರು ಮೂರು ನಾಲ್ಕು ಲಕ್ಷ ಸಾಲ ಮಾಡಿದ ನಾನು ನನ್ನ ಚಿಕ್ಸಿತೆಗೆ ಹಣ ತರುವುದು ಸಾಧ್ಯವಾಗದ ಮಾತು. ಅದರಲ್ಲಿ ನನ್ನ ಚಿಕ್ಕ ಮಕ್ಕಳ ಭವಿಷ್ಯಕ್ಕೆ ಕೂಡ ತೊಂದರೆ ಯಾಗುತ್ತಿದೆ. ದಿನ ದಿನ ಸಾಲಗಾರರ ಕಾಟ ಹೆಚ್ಚಾಗುತ್ತಿದು ರೋಗದ ಜೊತೆಗೆ ಮಾನವು ಹೋಗುತ್ತಿದೆ.

ಒಂದು ವೇಳೆ ನಾನು ಬದುಕುವ ಯೋಚನೆ ಮಾಡಿದರೆ ನನ್ನ ಮನೆಯವರಿಗೆ ತೊಂದರೆಯಾಗುತ್ತೆ, ಆದಕಾರಣ ನಾನು ಆತ್ಮಹತೆ ಮಾಡಿಕೊಳ್ಳುತ್ತಿದ್ದೇನೆ ಅಂತ ಪತ್ರದಲ್ಲಿ ಬರೆದಿಟ್ಟು ಆತ್ಮಹತೆ ಮಾಡಿಕೊಡಿದ್ದಾರೆ. ಈ ರೈತನ ಅಳುವಿನ ಪತ್ರದಲ್ಲಿ ಏನಿದೆ ಮತ್ತು ಅವನ ಕುಟುಂಬಕ್ಕೆ ಸಾತ್ವಾನ ಹೇಳಲು ಇಂದು ಕುಮಾರಸ್ವಾಮಿ ಮಂಡ್ಯಕ್ಕೆ ಬೇಟಿ ನೀಡಿದ್ದಾರೆ. ಏನೋ ಆಗಲಿ ಒಂದು ಸಣ್ಣ ಖಾಯಿಲೆಯ ಚಿಕ್ಸಿತೆಗೆ ಹಣ ಕರ್ಚು ಮಾಡುವಷ್ಟು ಶಕ್ತಿ ದೇಶಕ್ಕೆ ಅನ್ನ ಹಾಕುವ ರೈತನಿಗೆ ಇಲ್ಲವಲ್ಲಾ?