ಮಂಡ್ಯದಲ್ಲಿ ಜೆಡಿಎಸ್ ಶಾಸಕರು, ಸಚಿವರು ನಾಪತ್ತೆ; ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ, ಜಿಲ್ಲೆಯ ತುಂಬೆಲ್ಲ ಎಂದು ಕಾಣುತ್ತಿರುವ ಫ್ಲೆಕ್ಸ್‌ಗಳು..

0
374

ಲೋಕಸಭೆಯ ನಂತರ ಮಂಡ್ಯದ ಮೇಲೆ ಜೆಡಿಎಸ್ ಶಾಸಕರ ಖಾಳಜಿ ಕಡಿಮೆಯಾಗಿದ್ದು, ಜನರ ನೋವು ನಲುವಿಗೆ ಸ್ಪಂದಿಸುತ್ತಿಲ್ಲ, ಎನ್ನುವ ಮಾತುಗಳು ಕೇಳಿಬರುತ್ತಿದ್ದು ಏನಾದರು ಕೇಳಲು ಹೋದರೆ ವೋಟ್ ಅವರಿಗೆ ಹಾಕಿ ನಮಗ್ಯಾಕೆ ಕೆಲಸ ಕೇಳಲು ಬರುತ್ತಿರಾ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲೆಲ್ಲ ರೈತರ ಪಕ್ಷ ಎನ್ನುತ್ತಾ ಮತ ಕೇಳುವ ಜೆಡಿಎಸ್ ಇದೀಗ ರೈತರು ನೀರು ಬಿಡುವಂತೆ ಏಳು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜೆಡಿಎಸ್ ನಿಂದ ಆಯ್ಕೆಯಾದ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕರು ಸ್ಥಳಕ್ಕೆ ಆಗಮಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ಜನರು ಮಂಡ್ಯ ಜಿಲ್ಲೆಯ ಏಳು ಜನ ಶಾಸಕರು ಕಾಣೆ ಆಗಿದ್ದಾರೆ, ಅವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎನ್ನುವ ಬ್ಯಾನರ್-ಗಳು ಕಾಣುತ್ತಿವೆ.

Also read: ಬಿಗ್ ಬ್ರೇಕಿಂಗ್ ಅಂಗವಿಕಲ ಮಾಸಾಶನ, ವೃದ್ದಾಪ್ಯ ವೇತನವನ್ನು ಎರಡರಷ್ಟು ಹೆಚ್ಚಿಸಿದ ಸಿಎಂ ಕುಮಾರಸ್ವಾಮಿ..

ಹೌದು ಮಂಡ್ಯದಲ್ಲಿ ಕೆಲವು ದಿನಗಳಿಂದಲೂ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಆಹೋರಾತ್ರಿ ಧರಣಿ ಮಾಡುತ್ತಿದ್ದಾರೆ, ಆದರೆ ಜಿಲ್ಲೆಯ ಯಾವೊಬ್ಬ ಶಾಸಕ ಅಥವಾ ಸಚಿವರೂ ಬಂದು ರೈತರ ಕಷ್ಟ ಕೇಳಿಲ್ಲ. ಜಿಲ್ಲೆಯಲ್ಲಿ 60 ಲಕ್ಷ ಟನ್ ಕಬ್ಬು ಒಣಗುತ್ತಿದ್ದು, ಈ ಕೂಡಲೇ ಕೆ.ಆರ್‌.ಎಸ್‌ನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ಕಳೆದ ಆರು ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಹಾಗಾಗಿ ಆಕ್ರೋಶಗೊಂಡಿರುವ ಪ್ರತಿಭಟನಾಕಾರರು, ಜಿಲ್ಲೆಯ ಎಲ್ಲ ಏಳು ಶಾಸಕರ ಚಿತ್ರವನ್ನು ಫ್ಲೆಕ್ಸ್‌ನಲ್ಲಿ ಮುದ್ರಿಸಿ, ಶಾಸಕರು ಕಳೆದು ಹೋಗಿದ್ದಾರೆ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಫ್ಲೆಕ್ಸ್‌ ಹಾಕಿದ್ದಾರೆ.

ಶಾಸಕರ, ಸಚಿವರ ನಿರ್ಲಕ್ಷ್ಯವೇಕೆ?

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಕೃಷ್ಣರಾಜಸಾಗರ ಮತ್ತು ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗೆ ನೀರೊದಗಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರು ಹರಿಸಬೇಕು ಎಂಬುದು ಪ್ರತಿಭಟನಾ ನಿರತರ ಕೂಗಾಗಿದೆ. ಒಂದು ವೇಳೆ ಪ್ರತಿಭಟನೆಗೆ ಮಣಿದು ನೀರು ಹರಿಸಿದ್ದೇ ಆದರೆ ಕ್ರೆಡಿಟ್ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಲ್ಲುತ್ತದೆ. ಇದು ಮುಂದಿನ ದಿನಗಳಲ್ಲಿ ಜೆಡಿಎಸ್ ಮೇಲೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವೂ ಇಲ್ಲದಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಣಯ ರೈತರ ಆತಂಕವನ್ನು ದೂರ ಮಾಡಿದ್ದರೂ ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆ ರಕ್ಷಣೆಗೆ ನಾಲೆಗಳಲ್ಲಿ ನೀರು ಹರಿಸುವ ಕುರಿತಂತೆ ಯಾವುದೇ ಆದೇಶ ನೀಡದೆ ರೈತರನ್ನು ಕತ್ತಲಲ್ಲಿ ಇಡಲಾಗಿದೆ ಎಂಬುದು ರೈತರ ಆರೋಪ.

ರೈತರಿಂದ ಆತ್ಮಹತ್ಯೆ ಎಚ್ಚರಿಕೆ;

Also read: ಗ್ರಾಮ ವಾಸ್ತವ್ಯದಲ್ಲಿ ಸಿಎಂ ದರ್ಪ; ಮೋದಿಗೆ ವೋಟ್‌ ಹಾಕಿ ನಮ್‌ ಹತ್ರ ಸಮಸ್ಯೆ ಹರಿಸಲು ಬರ್ತೀರಾ, ನಿಮಗೆಲ್ಲಾ ಲಾಠಿ ಚಾರ್ಜ್‌ ಮಾಡಿಸ್ಬೇಕಾ ಎಂದ ಕುಮಾರಸ್ವಾಮಿ..

ಇನ್ನು, 6 ದಿನಗಳಿಂದ ನೀರಿಗಾಗಿ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದರೂ ಸ್ಪಂದಿಸಿದ ಸರ್ಕಾರದ ವಿರುದ್ದ ರೈತರು ರೊಚ್ಚಿಗೆದ್ದಿದ್ದಾರೆ. ಜಿಲ್ಲೆಯ ಕಾವೇರಿ ನೀರಾವರಿ ನಿಗಮ ಕೇಂದ್ರ ಕಚೇರಿಯಲ್ಲಿ ಮಾಡುತ್ತಿದ್ದ ಪ್ರತಿಭಟನೆಯನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೂ ವಿಸ್ತರಣೆ ಮಾಡಿದ್ದಾರೆ. ಮದ್ದೂರು ಪಟ್ಟಣದ ತಹಶೀಲ್ದಾರ್ ಮತ್ತು ಕಾವೇರಿ ನೀರಾವರಿ ಕಚೇರಿಗೆ ಜಾನುವಾರುಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾದರೂ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದು, ನೀರು ಹರಿಸದಿದ್ರೆ ಕುಟುಂಬದೊಂದಿಗೆ ಸಾಮೂಹಿಕ ಆತ್ಮಹತ್ಯೆಯೊಂದೇ ದಾರಿ ಎಂದು ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.