ಸಲಿಂಗಕಾಮಕ್ಕೆ ಬಲಿಯಾಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ಮಂಡ್ಯದ ವಿದ್ಯಾರ್ಥಿ.!

0
297

ಕಳೆದ ತಿಂಗಳು ಮಂಡ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದು ಭಾರಿ ವೈರಲ್ ಆಗಿತ್ತು, ಅದೇನೆಂದರೆ ಸಲಿಂಗಕಾಮಕ್ಕಾಗಿ ವಿದ್ಯಾರ್ಥಿಯ ಮರ್ಮಾಂಗವನ್ನೇ ವ್ಯಕ್ತಿಯೊಬ್ಬ ಕಟ್ ಮಾಡಿದ್ದಾನೆ. ಟ್ವಿಸ್ಟ್ ಸಿಕಿದ್ದು, ಸಲಿಂಗ ಕಾಮಿಯ ಒಡನಾಟವೇ ಇದಕ್ಕೆ ಕಾರಣ ಎಂಬ ಸತ್ಯ ಬೆಳಕಿಗೆ ಬಂದಿದ್ದು, ಮರ್ಮಾಂಗ ಕೊಯ್ದುಕೊಂಡರೆ ಮನೆಯವರು ಮದುವೆ ಮಾಡುವುದಿಲ್ಲ ಎಂದು ವಿದ್ಯಾರ್ಥಿಗೆ ಪ್ರೇರೇಪಿಸಿದ್ದನು. ಆತನ ಮಾತಿನಂತೆ ವಿದ್ಯಾರ್ಥಿ ತಾನೇ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದ. ಅಷ್ಟೇ ಅಲ್ಲದೆ ಸುನಿಲ್ ಕುಮಾರ್ ಸಲಿಂಗಕಾಮಿಯಾಗಿದ್ದು ಪ್ರತಿ ಶುಕ್ರವಾರ 17 ವರ್ಷದ ಬಾಲಕ ದರ್ಶನ್​ ಜೊತೆ ದೇವಾಲಯಗಳಿಗೆ ತೆರಳುತ್ತಿದ್ದ ಎನ್ನಲಾಗಿದೆ.

ಹೌದು ಏನಿದು ಪ್ರಕರಣ?

ಹೌದು ಕೆಆರ್‌ಪೇಟೆ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ, ಕಾಲೇಜಿಗೆ ಹೋಗಲು ಪಾಂಡವಪುರ ತಾಲೂಕಿನ ಸೀತಾಪುರ ಗೇಟ್ ಬಳಿ ನಿಂತಿದ್ದನು. ಆಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಐದು ಕಿಲೋಮೀಟರ್ ದೂರ ಹೋಗಿದ್ದಾನೆ. ನಂತರ ವಿದ್ಯಾರ್ಥಿಯ ಮರ್ಮಾಂಗವನ್ನು ಕಾರಿನಲ್ಲೇ ದುಷ್ಕರ್ಮಿಗಳು ಕತ್ತರಿಸಿ ವಿದ್ಯಾರ್ಥಿಯನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ದೂರಿನಲ್ಲಿ ದಾಖಲಾಗಿತ್ತು. ನಂತರ ವಿದ್ಯಾರ್ಥಿ ನರಳಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಪಾಂಡವಪುರ ತಾಲ್ಲೂಕು, ಸೀತಾಪುರ ಗ್ರಾಮದ ಸುನಿಲ್ ಕುಮಾರ್ ಅಲಿಯಾಸ್ ಸುನೀ ಗುಡ್ಡಪ್ಪ ಎಂಬ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಲಿಂಗಕಾಮಕ್ಕೆ ಪ್ರಚೋದನೆ ನೀಡಿ, ಅಪ್ರಾಪ್ತ ಬಾಲಕ ತನ್ನ ಮರ್ಮಾಂಗವನ್ನು ಕತ್ತರಿಸಿಕೊಳ್ಳಲು ಪುಸಲಾಯಿಸಿದ್ದ ಎಂಬ ವಿಷಯ ಬಯಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಂದ ಪ್ರಕರಣದ ಆರೋಪಿ ಸುನಿಲ್​ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕ ದರ್ಶನ್​ ನೀಡಿದ ಹೇಳಿಕೆ ಆಧರಿಸಿ ಸುನಿಲ್​ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೂಡ ತಪ್ಪೊಪ್ಪಿಕೊಂಡಿದ್ದಾನೆ.

ತನ್ನ ಮೈಮೇಲೆ ದೇವರು ಬರುತ್ತದೆ ಎಂದು ದರ್ಶನ್​ನನ್ನು ನಂಬಿಸಿದ್ದ ಸುನಿಲ್ ಕುಮಾರ್, ಮುಂದೆ ಮದುವೆ ಮಾಡಿಕೊಳ್ಳದೇ ತನ್ನ ಜತೆಯಲ್ಲೇ ಇರಬೇಕು ಎಂದು ಹೆದರಿಸಿದ್ದ.
ಮರ್ಮಾಂಗ ಕತ್ತರಿಸಿಕೊಂಡರೆ ಬಾಲಕನಿಗೆ ಮನೆಯವರು ಮದುವೆ ಮಾಡುವುದಿಲ್ಲ. ಹೀಗಾಗಿ, ನಿನ್ನ ಮರ್ಮಾಂಗವನ್ನು ಕತ್ತರಿಸಿಕೋ ಎಂದು ಸುನಿಲ್ ಹೇಳಿದ್ದ. ಆತನ ಮಾತಿನಂತೆ ದರ್ಶನ್​ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದ. ಈ ಮೊದಲು ಮನೆಯಲ್ಲಿ ಹೊಡೆಯುತ್ತಾರೆಂದು ಹೆದರಿದ್ದ ದರ್ಶನ್​, ಒಂದು ಕತೆ ಕಟ್ಟಿ ಹೇಳಿದ್ದ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದೆ. ಆಗ ಕಾರಿನಲ್ಲಿ ಬಂದ ಯುವಕರ ಗುಂಪು ಕಾಲೇಜಿಗೆ ಡ್ರಾಪ್ ಕೊಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡರು. ನಂತರ ಮಾರ್ಗ ಮಧ್ಯೆಯೇ ನನ್ನ ಮೇಲೆ ಹಲ್ಲೆ ಮಾಡಿ ಮರ್ಮಾಂಗವನ್ನು ಕಟ್‌ ಮಾಡಿದರು. ನಾನು ಕೂಗಿಕೊಳ್ಳುತ್ತಿದ್ದಂತೆ ದಾರಿ ಮಧ್ಯೆಯೇ ಕಾರ್‌ನಿಂದ ಹೊರತಳ್ಳಿ ಪರಾರಿಯಾದರು ಎಂದು ಹೇಳಿಕೆ ನೀಡಿದ್ದ.

Also read: ಹೆಂಡತಿ ಗರ್ಭಿಣಿಯಾದರೆ ಸೌಂದರ್ಯ ಹಾಳಾಗುತ್ತೆಂದು ಗರ್ಭಿಣಿ ಆಗಲು ಬಿಡದೆ, 4 ಬಾರಿ ಗರ್ಭಪಾತ ಮಾಡಿಸಿದ ಬ್ರಿಲಿಯಂಟ್ ಗಂಡ.!