ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸುಮಲತಾ-ಎಸ್‌ಎಂ ಕೃಷ್ಣ ಭೇಟಿ; ಬಿಜೆಪಿಯಿಂದ ಸಿಗಲಿದೆಯಾ ಬೆಂಬಲ?

0
601

ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ವಿಭಿನ್ನವಾಗಿದ್ದು. ಮಂಡ್ಯ ಕ್ಷೆತ್ರದಲ್ಲಿ ಸುಮಲತಾ ಮತ್ತು ನಿಖಿಲ್ ನಡುವೆ ಸ್ಪರ್ಧೆ ಜೋರಾಗಿ ನಡೆಯುತ್ತಿದೆ. ಜೆಡಿಎಸ್ ನಿಂದ ನಿಖಿಲ್-ಗೆ ಟಿಕೆಟ್ ನೀಡಲಾಗಿದ್ದು, ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಎನ್ನುವ ಮಾತುಗಳು ಕೇಳಿಬರುತ್ತಿದವು. ಆದರೆ ಹೊಸ ಬೆಳೆವಣಿಗೆಯೊಂದು ಕೇಳಿ ಬರುತ್ತಿದ್ದು. ಮಂಡ್ಯ ಕ್ಷೇತ್ರ ಚುನಾವಣೆಯಲ್ಲಿ ಅಲೆ ಎಬ್ಬಿಸಿರುವ ಸುಮಲತಾ ಅವರು ಇಂದು ಬಿಜೆಪಿಯ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರಿಂದ ಸುಮಲತಾ ಅವರಿಗೆ ಬೆಜೆಪಿ ಬೆಂಬಲ ನೀಡುತ್ತಿದೆ ಎಂದು ಮಾತುಗಳು ಕೇಳಿಬರುತ್ತಿವೆ.

Also read: ಕಾಂಗ್ರೆಸ್ ಪಕ್ಷ ಸೇನೆಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಸೋನಿಯಾ ಆಪ್ತ ಟಾಮ್ ವಡಕ್ಕನ್ ಬಿ.ಜೆ.ಪಿ. ಸೇರಿದ್ದಾರೆ; ಇವರ ಈ ನಡೆಯನ್ನು ಒಪ್ಪುತ್ತೀರಾ??

ಸುಮಲತಾ ಬಿಜೆಪಿಗೆ?

ರಾಜ್ಯದ ರಾಜಕೀಯದಲ್ಲಿ ಹಲವು ಬೆಳವಣಿಗಳು ಕಂಡು ಬರುತ್ತಿದು, ಈ ಬೆಳವಣಿಗೆ ನಡುವೆ ಸುಮಲತಾ ಅವರು ಕೃಷ್ಣ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಬಿಜೆಪಿಯು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದೆಯೇ ಎಂಬ ಕುತೂಹಲ ಗರಿಗೆದರಿದೆ. ಸದಾಶಿವನಗರದ ನಿವಾಸದಲ್ಲಿ ಭೇಟಿಯಾದ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಎಸ್​ಎಂಕೆ, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಸುಮಾರು 2.5 ಲಕ್ಷ ಮತವನ್ನು ಪಡೆದುಕೊಂಡಿದೆ. ಆ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಪಡೆದಿದ್ದಾರೆ.

ಈಗ ಸುಮಲತಾ ಅವರು ಆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇದೇ ವಿಚಾರವಾಗಿ ನಾನು ಪಕ್ಷದ ವರಿಷ್ಠರೊಂದಿಗೆ ಮಾತನಾಡುತ್ತೇನೆ. ಬಿಜೆಪಿಯಿಂದ ಅಭ್ಯರ್ಥಿಯನ್ನು ನಿಲ್ಲಿಸುತ್ತಾರೋ ಅಥವಾ ಸುಮಲತಾ ಅವರಿಗೆ ಬೆಂಬಲ ನೀಡುತ್ತಾರೋ ಎಂಬುದನ್ನು 18 ತಾರೀಖು ನಡೆಯುವ ವರಿಷ್ಠರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಎಸ್ ಎಂ ಕೃಷ್ಣ ಹೇಳಿದರು.

Also read: ಮಂಡ್ಯದ ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ : ಎಚ್.ಡಿ.ಕೆ.; ಇಂತಹ ಸಿನಿಮೀಯ ಮಾತುಗಳಿಂದ ಮಂಡ್ಯದಲ್ಲಿ ಎಚ್.ಡಿ.ಕೆ. ಮಗ ನಿಖಿಲ್ ಗೆಲ್ಲುವುದು ಸಾಧ್ಯಾನಾ??

ಬಿಜೆಪಿ ವರಿಷ್ಠರ ಬಳಿ ಮಾತನಾಡುತ್ತೇನೆ’

ಎಸ್.ಎಂ.ಕೃಷ್ಣ ಅವರು ಮಾತನಾಡಿ, ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆ ಬಿಜೆಪಿಯ ವರಿಷ್ಠರ ಬಳಿ ಮಾತನಾಡುತ್ತೇನೆ. ಕಳೆದ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಡಾ.ಸಿದ್ದರಾಮಯ್ಯ ಅವರು 2.5ಲಕ್ಷ ಮತಗಳಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇದೆ ಎಂದು ತೋರಿಸಿದ್ದಾರೆ. ಹಾಗಾಗಿ ನಮ್ಮ ಬೆಂಬಲ ಮುಖ್ಯವೇ ಆಗುತ್ತದೆ ಎಂದರು. ನಾವು 18 ನೇ ತಾರೀಖು ನಮ್ಮ ನಿಲುವು ತಿಳಿಸುತ್ತೇವೆ ಎಂದು ಹೇಳಿದರು.

ಸುಮಲತಾ ಅಂಬರೀಷ್​;

ಸುಮಲತಾ ಅಂಬರೀಷ್​ ಮಾತನಾಡಿ, ಎಸ್.ಎಂ.ಕೆ ನಮ್ಮ ಹಿರಿಯ ನಾಯಕರು. ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಅವರು ಮಂಡ್ಯದವರಾಗಿ ಸಿಎಂ ಆದ ದೊಡ್ಡ ನಾಯಕರು. ಅವರ ಕುಟುಂಬದ ಜೊತೆ ನಮ್ಮ ಕುಟುಂಬ ಉತ್ತಮ‌ ಸಂಬಂಧ ಹೊಂದಿದೆ ಎಂದು ಹೇಳಿದರು. ಸಿಎಂ ಕುಮಾರಸ್ವಾಮಿ ಅವರು ತಮ್ಮ ಮಗನ ರಾಜಕೀಯಕ್ಕಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸುಮಲತಾ, ಪ್ರಾಮಾಣಿಕವಾಗಿ ಚುನಾವಣೆ ನಡೆಯಬೇಕು ಎಂಬುದು ನನ್ನ ಇಚ್ಛೆ. ನನ್ನ ತಲೆಯಲ್ಲಿ ಆ ತರಹದ ಯೋಚನೆ ಬಂದಿಲ್ಲ. ಯಾರು ಯಾಕೆ ಹೇಳಿದ್ರು ಅನ್ನೋದನ್ನು ನೀವೇ ಊಹೆ ಮಾಡಿ. ಅಭಿವೃದ್ಧಿ ಇಟ್ಟುಕೊಂಡು ಚುನಾವಣೆ ಮಾಡಿ. ನನ್ನ ಹೆಸರು ಅಂಬಿ ಹೆಸರು ಬಳಸೋದು, ದುರುಪಯೋಗ ಪಡಿಸೋದು ಬೇಡ ಎಂದು ಸಿಎಂಗೆ ನೇರವಾಗಿ ತಿರುಗೇಟು ನೀಡಿದರು.

Also read: ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ: ಮಾಜಿ ಪ್ರಧಾನಿ ದೇವೇಗೌಡ; ಇದರಿಂದ ಜನರಿಗೆ ಲಾಭವೋ ನಷ್ಟವೋ??

ಹಿರಿಯ ನಾಯಕರ ಬೇಟಿ ಆಗುತ್ತೇನೆ’

ದೇವೇಗೌಡರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡರ ಭೇಟಿ ಆಗಿ ಆಶೀರ್ವಾದ ಪಡೆಯೋದರಲ್ಲಿ ಯಾವುದೇ ಅಭ್ಯಂತರ ಇಲ್ಲ. ಯಡಿಯೂರಪ್ಪ ಅವರನ್ನು ಭೇಟಿ ಆಗುತ್ತೀರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ಚುನಾವಣೆ ಪ್ರಚಾರ ಸಮಯದಲ್ಲಿ ಎಲ್ಲ ಮುಖ್ಯ ನಾಯಕರನ್ನೂ ಭೇಟಿಯಾಗಿ ಬೆಂಬಲ ಕೇಳುವ ಆಶಯ ಹೊಂದಿದ್ದೇನೆ. ಈ ಮಂಡ್ಯದ ಚುನಾವಣೆ ಮಾದರಿ ಚುನಾವಣೆ ಆಗಲಿ ಎಂಬ ಉದ್ದೇಶವಿದೆ ಎಂದು ಹೇಳಿದರು.