ಕಾವೇರಿ ವಿಚಾರಕ್ಕೆ ಸಂಸದೆ ಸುಮಲತಾ ಅವರ ಈ ಮಾತು ಮಂಡ್ಯಕ್ಕೆ ಅನ್ಯಾಯ ಮಾಡುತ್ತಾ? ಎನ್ನುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸುಮಲತಾ..

0
242

ರಾಜ್ಯದಲ್ಲಿ ಕಾವೇರಿ ನದಿ ವಿವಾದ ಬಹುದಿನಗಳಿಂದ ನಡೆಯುತ್ತಾನೆ ಇದೆ. ಇದಕ್ಕೆ ಸರಿಯಾದ ನ್ಯಾಯ ದೊರಕಿಸಲು ಯಾರ ಕೈಯಿಂದ ಸಾಧ್ಯವಾಗದ ಸ್ಥಿತಿಯಲ್ಲಿ ಮಂಡ್ಯದ ಸೇರಿದಂತೆ ಸುತ್ತ ಮುತ್ತಲಿನ ಜನರು ಬೇಸತ್ತಿದ್ದಾರೆ. ಇದೆ ವಿಷಯವಾಗಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನರಿಗೆ ಸುಮಲತಾ ಅಂಬರೀಶ್ ಮಾತು ಕೊಟ್ಟಿದ್ದರು, ಕಾವೇರಿ ವಿವಾದವನು ನಾನು ಸರಿ ಮಾಡೇ ಮಾಡುತ್ತೇನೆ ಎನ್ನುವ ವಚನವನ್ನು ನೀಡಿದ್ದರು ಆದರೆ ಸುಮಲತಾ ಗೆದ್ದ ಬಳಿಕ ಈ ವಿಚಾರಕ್ಕೆ ತಿರುಗಿ ಬಿದಿದ್ದು, ಸಂಸದರಿಂದ ಏನು ಮಾಡಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ.

Also read: ರಾಜ್ಯದಲ್ಲೇ ಇರುವ ವಿಚಿತ್ರ ಸಂಪ್ರದಾಯ; ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಇಡಿ ಕುಟುಂಬದವರಿಗೆ ಬಿಳ್ಳುತ್ತೆ ಬೇಡಿ..

ಹೌದು ಕಾವೇರಿ ವಿಚಾರದಲ್ಲಿ ಸಂಸದರ ಜವಾಬ್ದಾರಿ ಇಲ್ಲ. ಎಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೋಮವಾರ ಹೇಳಿಕೆ ನೀಡಿದರು. ಇದು ವಿವಾದದ ಸ್ವರೂಪ ಪಡೆಯುತ್ತಲೇ ಇಂದು ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿ, ದೆಹಲಿಯಲ್ಲಿ ಮಾತನಾಡಿದ ಅವರು, ನಾನು ಒಂದು ಸಂದರ್ಶನದಲ್ಲಿ ಮಾತನಾಡಿದ ಮಾತನ್ನು ಟ್ವಿಸ್ಟ್ ಮಾಡಿ ಬದಲಾಯಿಸಿ ಅದಕ್ಕೆ ಬೇರೆ ಬಣ್ಣ ಕೊಟ್ಟು ವೈರಲ್ ಮಾಡಿದ ವಿಷಯ ಕೇಳಿ ಬೇಜಾರಾಗುತ್ತಿದೆ. ಏಕೆಂದರೆ ಅತಂಹದೊಂದು ಹೇಳಿಕೆ ನೀಡುವ ಬೇಜವಾಬ್ದಾರಿ ಹಾಗೂ ಆ ಸ್ವಭಾವ ನನಗೆ ಇಲ್ಲ. ನನ್ನ ಸ್ವಭಾವ ಏನೂ ಎಂಬುದು ಚುನಾವಣೆ ಸಂದರ್ಭದಿಂದ ನೋಡಿಕೊಂಡು ಬರುತ್ತಿದ್ದೀರಾ. ನಾನು ಒಬ್ಬರ ಬಗ್ಗೆ ಟೀಕೆ ಮಾಡಿರುವುದಾಗಿ, ಒಬ್ಬ ಬಗ್ಗೆ ಕೆಳಮಟ್ಟದ ಮಾತನಾಡಿದ್ದಾಗಲಿ ನಾನು ಯಾವತ್ತೂ ನಡೆದುಕೊಂಡಿಲ್ಲ. ಮುಂದೆ ಕೂಡ ನನ್ನ ಸ್ವಭಾವ ಹೀಗೆ ಇರುತ್ತೆ ಎಂದಿದ್ದಾರೆ.

Also read: ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ನಿವೃತ್ತ ನೌಕರಿಗೆ ಅಮೆಜಾನ್-ನಿಂದ ಪಾರ್ಟ್ ಟೈಮ್ ಜಾಬ್; ದಿನದ 4 ಗಂಟೆಯಲ್ಲಿ 500 ರೂ ಗಳಿಸಬಹುದು..

ಕಾವೇರಿ ವಿಚಾರ ಪ್ರಸ್ತುತ ನ್ಯಾಯಾಲಯದಲ್ಲಿದೆ, ಹೀಗಾಗಿ ಸಂಸದರಾದವರು ಏನೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಹೋರಾಟ ನಡೆಸಬೇಕು” ಎಂದು ಹೇಳುವ ಮೂಲಕ ಕಾವೇರಿ ವಿವಾದದ ಚೆಂಡನ್ನು ಮತ್ತೆ ರಾಜ್ಯ ಸರ್ಕಾರದ ಅಂಗಳಕ್ಕೆ ಎಸೆದಿದ್ದಾರೆ. ಅಸಲಿಗೆ ಕಾವೇರಿ ವಿಚಾರವಾಗಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ ಏಕೈಕ ಸಂಸದ ದಿವಂಗತ ಅಂಬರೀಷ್. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಸಂಸದರಾಗಿದ್ದಾಗಲೇ ಅವರು ಪಕ್ಷದ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದರು. ಆ ಮೂಲಕ ರಾಜ್ಯದ ಇತರ ಸಂಸದರಿಗೆ ಆದರ್ಶಪ್ರಾಯರಾಗಿದ್ದರು.

ಆದರೆ, ಇಂದು ಅವರ ಪತ್ನಿ ಸುಮಲತಾ ಚುನಾವಣಾ ಸಂದರ್ಭದಲ್ಲಿ ಕಾವೇರಿ ಹೋರಾಟಕ್ಕೆ ತಾವು ಸಿದ್ಧ ಎಂದು ಮಾತು ನೀಡಿ ಇದೀಗ ಆ ವಿಚಾರವಾಗಿ ತಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹಲವರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಸುಮಲತಾ, “ಬೇರೆ ರಾಜಕಾರಣಿಗಳಂತೆ ಕಾವೇರಿ ವಿಚಾರದಲ್ಲಿ ನಾನು ಎರಡು ರೀತಿ ಮಾತನಾಡಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಲ್ಲ. ಕಾವೇರಿ ವಿಚಾರದಲ್ಲಿ ನನ್ನದು ಯಾವಾಗಲೂ ಒಂದೇ ನಿರ್ಧಾರ” ಎಂದು ಸ್ಪಷ್ಟನೆ ನೀಡಿದ್ದಾರೆ.