ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ, ಸಾಧು-ಕೋಕಿಲ..!! ಮಂಡ್ಯ ರಮೇಶ್..!!

0
736

ಸ್ಯಾಂಡಲ್-ವುಡ್ ನ ಪ್ರಸಿದ್ಧ ಹಾಸ್ಯ ನಟ ಮಂಡ್ಯ ರಮೇಶ್ ಮತ್ತು ಸಂಗೀತ ನಿರ್ದೇಶಕ ಹಾಗು ಜನಪ್ರಿಯ ಹಾಸ್ಯ ನಟ ಸಾಧು ಕೋಕಿಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸ್ಪಾ ಅಥವಾ ಮಸಾಜ್ ಸೆಂಟರ್-ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಸುದ್ದಿಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾಳೆ. NGO ದ ಸುಳಿವಿನ ಮೇರೆಗೆ ಮೈಸೂರು ನಗರ ಪೊಲೀಸರು, ನಗರದಲ್ಲಿ ಇರುವ “ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್” ಎಂಬ ಮಸಾಜ್ ಸೆಂಟರ್-ನ ಮೇಲೆ ಧಾಳಿ ಮಾಡಿ ಅದರ ಮಾಲೀಕ ರಾಜೇಶ್ ಮತ್ತು ಆತನ ಪತ್ನಿ ಇಂದಿರಾಳನ್ನು ಬಂಧಿಸಿ ಒಬ್ಬ ಯುವತಿಯನ್ನು ರಕ್ಷಿಸಿದರು.

ನಂತರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಆ ಯುವತಿ, ನಾನು ಪಾಂಡವಪುರದಿಂದ ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದೆ ಮೊದಲು ಬ್ಯೂಟಿ ಪಾರ್ಲರ್ ಎಂದು ತಳಿದಿದ್ದೆ ಆದರೆ ಕೆಲಸಕ್ಕೆ ಸೇರಿದ ನಂತರ ಇದು ಮಸಾಜ್ ಸೆಂಟರ್ ಎಂದು ತಿಳಿಯಿತು. ನಟ ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲ ನಮ್ಮ ಮಸಾಜ್ ಸೆಂಟರ್-ಗೆ ಎರಡು ಬಾರಿ ಮಸಾಜ್-ಗೆಂದು ಬಂದಿದ್ದರು, ಮಸಾಜ್ ವೇಳೆ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ನಾನು ಸಹಕರಿಸದಿದ್ದರೆ ಮಾಲೀಕರಿಗೆ ಹೇಳುತ್ತೇನೆ ಎಂದು ಬೆದರಿಸಿದ್ದಾರೆ, ಸ್ಪಾ ಮಾಲೀಕ ರಾಜೇಶ್ ಕೂಡ ಹೆಂಡತಿ ಊರಿನಲ್ಲಿ ಇರದ್ದಿದ್ದಾಗ ನನ್ನನ್ನು ಮಾನಬಂಗ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಈ ಕುರಿತು ನಟ ಮಂಡ್ಯ ರಮೇಶ್ ಅವರನ್ನು ಪ್ರಶ್ನಿಸಿದಾಗ, ನನ್ನ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಸುಳ್ಳು, ಇದನ್ನು ಮೊದಲ ಬಾರಿ ಕೇಳಿದ ಸಂದರ್ಭದಲ್ಲಿ ನನಗೆ ಅಚ್ಚರಿಯಾಯಿತು. ಮಸಾಜ್ ಸೆಂಟರ್ ಮಾಲೀಕ ರಾಜೇಶ್ ನನಗೆ ಆರೇಳು ವರ್ಷಗಳಿಂದ ಪರಿಚಯ, ಆತ ಮೊದಲು ಬೇರೆಯವರ ಜೊತೆ ಕೆಲಸ ಮಾಡುತ್ತಿದ್ದ, ನಂತರ ತನ್ನ ಸ್ವಂತ ಅಂಗಡಿಯನ್ನು ತೆರೆದ, ಅದರ ಉದ್ಘಾಟನೆಗಾಗಿ ನನ್ನನ್ನು ಆಹ್ವಾನಿಸಿದ್ದ ನಂತರ ನಾನು ಹೇರ್-ಕಟ್ ಗಾಗಿ ಒಂದು ಸಲ ಹೋಗಿದ್ದೆ ಅಷ್ಟೇ, ಅದನ್ನೇ ರಾಜೇಶ್ ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಾನೆಂದು ನನಗೆ ಗೊತ್ತಿರಲಿಲ್ಲ. ಆ ಯುವತಿ ಯಾರು ಎಂದು ಗೊತ್ತಿಲ್ಲ ನನ್ನು ಆಕೆಯನ್ನು ನೋಡಿಲ್ಲ, ಯಾಕೆ ಅವಳು ಈ ರೀತಿ ಇಲ್ಲ-ಸಲ್ಲದ ಆರೋಪ ಮಾಡಿದ್ದಾಳೆ ಗೊತ್ತಿಲ್ಲ, ನಾನು ಸಾಧು ಕೋಕಿಲ ಅವರ ನಿಕಟ ವರ್ತಿಯಲ್ಲ ಅವರನ್ನು ಸಿನಿಮಾ ಕುರಿತು ಮಾತ್ರ ಭೇಟಿ ಮಾಡುವುದುಂಟು ಎಂದರು.

ಸಾಧು ಕೋಕಿಲ ಕೂಡ ಯುವತಿಯ ಆರೋಪವನ್ನು ತಳ್ಳಿಹಾಕಿದ್ದಾರೆ, ನಾನು ಚಿತ್ರರಂಗದ ಕೆಲಸದಲ್ಲಿ ಬ್ಯುಸಿ ಇರುವ ಮನುಷ್ಯ, ಮಸಾಜ್ ಅಥವಾ ಹೇರ್-ಕಟ್ ಗೆಂದು ಹೊರಗೆ ಹೋಗುವುದಕ್ಕೆ ಸಮಯ ಸಿಗುವುದಿಲ್ಲ, ಅದಕ್ಕಾಗಿಯೇ ನಾನು ಹೇರ್-ಕಟ್, ಹೇರ್-ಡೈ ಮತ್ತು ಮಸಾಜ್ ಗಾಗಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಕೊಂಡಿದ್ದೇನೆ, ಒಂದು ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಚೆನ್ನೈಗೆ ತೆರಳಿದ್ದೇನೆ, ಬೆಂಗಳೂರಿಗೆ ವಾಪಸ್ಸಾದ ನಂತರ ಘಟನೆಯ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದು ದೂರವಾಣಿ ಮೂಲಕ ಸುದ್ದಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಈ ಆರೋಪದ ವಿಚಾರಣೆಗಾಗಿ ಪೊಲೀಸರಿಗೆ ಸಂಪೂರ್ಣ ಸಹಕರಿಸುವುದಾಗಿಯೂ ಇಬ್ಬರು ಹೇಳಿದ್ದಾರೆ. ಘಟನೆಯಿಂದ ತೀವ್ರ ಮನನೊಂದು, ಕುಗ್ಗಿಹೋದ ಇಬ್ಬರು ನಟರಿಗೆ ನವರಸ ನಾಯಕ ಜಗ್ಗೇಶ್ ಧೈರ್ಯ ತುಂಬಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ, ಆರೋಪದ ಸತ್ಯಾಂಶ ತಿಳಿಯಲು ಸ್ಪಾದ CCTV ದೃಶ್ಯವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು, ಬರಿ ಬಾಯಿ ಮಾತಿನ ಆರೋಪಗಳಿಗೆ ಮಹತ್ವ ಕೊಡಬೇಡಿ, ಇತ್ತೀಚೆಗೆ ಸುಳ್ಳು ಆಪಾದನೆ, ಕಾನೂನು ದುರ್ಬಳಕೆ ಹೆಚ್ಚಾಗುತ್ತಿದೆ, ಆರೋಪ ಸುಳ್ಳಾದರೆ ಯಾರೇ ಆದರು ಕಠಿಣ ಕ್ರಮ ಕೈಗೊಳ್ಳಬೇಕು ಧೈರ್ಯದಿಂದಿರಿ ಸಾಧು ಕೋಕಿಲ ಮತ್ತು ರಮೇಶ್ ಎಂದು ಬರೆದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.