ಸುಮಲತಾ ಅಂಬರೀಷ್ ಗೆಲುವಿಗಾಗಿ 6 ಕಿಮೀ ಉರುಳು ಸೇವೆ ಮಾಡಿದ ಯುವಕ; ಈ ಸೇವೆ ಸುಮಲತಾ ಗೆಲುವಿಗೆ ಸಾತ್ ನೀಡುತ್ತಾ?

0
603

ಲೋಕಸಭಾ ಚುನಾವಣೆ ಮಂಡ್ಯದಲ್ಲಿ ಎಲ್ಲಿಗೆ ತಲುಪಿದೆ ಎನ್ನುವುದಕ್ಕೆ ಈ ಯುವಕನ ಅಭಿಮಾನವೇ ಸಾಕ್ಷಿಯಾಗಿದೆ. ಕೆಲವೊಬ್ಬರು ತಮ್ಮ ನೆಚ್ಚಿನ ನಾಯಕ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಹಂಬಲದಿಂದ ದೇವರಿಗೆ ಮೊರೆ ಹೋಗಿ ಹಲವು ವಿಧಾನಗಳಲ್ಲಿ ಪೂಜೆ ಮಾಡಿಸುವುದು ನೋಡಿದಿರಾ. ಹರಕೆ ಹೊತ್ತುಕೊಂಡು ಹರಕೆ ತಿರಿಸುವುದು ಕೇಳಿದಿರಾ. ದೇವಸ್ಥಾನದ ಸುತ್ತ ಉರುಳು ಸೇವೆ ಮಾಡುವುದ್ದನ್ನು ನೋಡಿದಿರಾ. ಆದರೆ ಸುಮಲತಾ ಅವರು ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಉದ್ದೇಶವನ್ನು ಹೊಂದಿರುವ ಯುವಕ ಬರೋಬರಿ 6 ಕಿಮೀ ಉರುಳು ಸೇವೆ ಮಾಡಿ ಸುಮಲತಾ ಗೆಲುವಿಗೆ ವಿಶೇಷ ಬೇಡಿಕೆಯನ್ನು ಇಟ್ಟು ದೇವರಿಗೆ ಸೇವೆ ಸಲ್ಲಿಸಿದ್ದಾನೆ.

@justkannada.in

Also read: ಸುಮಲತಾ ವಿರುದ್ದ ಮಂಡ್ಯದ ಚುನಾವಣಾಧಿಕಾರಿಯಿಂದ ನೋಟೀಸ್? ನಾಳೆಯೊಳಗೆ ಡಿಸಿ ನೋಟೀಸ್ ಗೆ ಉತ್ತರಿಸದೆ ಹೋದಲ್ಲಿ ಕಾನೂನು ಕ್ರಮ..

ಹೌದು ಅಭಿಮಾನಕ್ಕೆ ಏನೇ ಮಾಡಲು ಸಿದ್ದ ಎನ್ನುವ ಯುವ ಪೀಳಿಗೆ ತಮ್ಮ ನೆಚ್ಚಿನ ನಟರ ಮತ್ತು ನಾಯಕರ ಸಲುವಾಗಿ ಪ್ರಾಣವನ್ನೇ ನೀಡಲು ತಯಾರಿ ಇರುತ್ತಾರೆ. ಮನೆಯಲ್ಲಿ ಸಣ್ಣ ಕೆಲಸ ಹೇಳಿದರು ಮಾಡದ ಯುವಕರು ಸಿನಿಮಾ ತಾರೆಯರ ವಿಷಯದಲ್ಲಿ ಎಂತಹ ಕೆಲಸಕ್ಕೆ ಸಿದ್ದರಿರುತ್ತಾರೆ. ಅದರಲ್ಲಿ ಮಂಡ್ಯದ ಜನರು ಅಂಬರೀಶ್ ಅವರ ಮೇಲೆ ಅಪಾರ ಪ್ರೀತಿ ಅಭಿಮಾನ ಇಟ್ಟುಕೊಂಡಿದ್ದಾರೆ. ಅವರು ಇಲ್ಲದೆ ಈ ಸಮಯದಲ್ಲಿ ಸುಮಲತಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ದ ಕುಮಾರಸ್ವಾಮಿಯವರ ಮಗ ಸ್ಪರ್ಧಿಸುತ್ತಿದ್ದು ಚುನಾವಣಾ ಪ್ರಚಾರ ಬರವಿಲ್ಲದೆ ಸಾಗಿದೆ. ಅದರಲ್ಲಿ ಏನಾದರು ಮಾಡಿ ಸುಮಲತಾ ಅವರನ್ನು ಗೆಲ್ಲಿಸಬೇಕು ಎನ್ನುವ ಛಲ ಮಂಡ್ಯದ ಜನರಲ್ಲಿ ಮೂಡಿದೆ.

ಅದಕ್ಕಾಗಿ ಬೆನಕಪ್ರಸಾದ್ ಎನ್ನುವ ಯುವಕ ರೆಬೆಲ್ ಸ್ಟಾರ್ ಅಂಬರೀಷ್​​ ಅವರ ದೊಡ್ಡ ಅಭಿಮಾನಿಯಾಗಿದ್ದು, ಈಗ ಅವರ ಪತ್ನಿ, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರು ಮಂಡ್ಯ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಬೆನಕಪ್ರಸಾದ್ ಕೆ.ಆರ್ ನಗರದ ಆಂಜನೇಯ ಬ್ಲಾಕ್‍ನ ಆಂಜನೇಯಸ್ವಾಮಿ ದೇವಾಲಯದಿಂದ ಹಳೆ ಎಡತೊರೆ ಆಂಜನೇಯಸ್ವಾಮಿ ದೇವಾಲಯದವರೆಗೆ ಉರಳು ಸೇವೆ ಮಾಡಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಗೆ ಎದ್ದು ಉರುಳು ಸೇವೆ ಪ್ರಾರಂಭ ಮಾಡಿದ ಯುವಕ ಸುಮಾರು 5 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ್ದಾರೆ.

@justkannada.in

Also read: ನನ್ನ ಮಗ ನಿಖಿಲ್, ಅಭಿಮನ್ಯು ಚಕ್ರವ್ಯೂಹ ಬಿಡಿಸುತ್ತಾನೆ: ಎಚ್.ಡಿ.ಕೆ; ಈಥರ ಸಿನಿಮಾದಲ್ಲಿ ಆಗೋದು ಎಲೆಕ್ಷನ್-ನಲ್ಲಿ ಆಗುತ್ತಾ??

ವೃತ್ತಿಯಲ್ಲಿ ಡ್ರೈವರ್ ಆಗಿರುವ ಈತ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿಸುತ್ತಿದ್ದಾನೆ. ಕೆ.ಆರ್. ನಗರ ಪಟ್ಟಣದ ಆಂಜನೇಯ ಬ್ಲಾಕ್ ನಲ್ಲಿರುವ ಆಂಜನೇಯಸ್ವಾಮಿ ದೇವಾಲಯದಿಂದ 6 ಕಿಮೀ ದೂರವಿರುವ ಹಳೆಯ ಎಡತೊರೆ ಆಂಜನೇಯ ಸ್ವಾಮಿ ದೇವಾಲಯದವರೆಗೆ ಉರಳು ಸೇವೆಯನ್ನು ಮಾಡುತ್ತಿದ್ದಾನೆ. ಉರಳು ಸೇವೆ ಸಂಜೆ 4 ಗಂಟೆ ಹೊತ್ತಿಗೆ ಪೂರ್ಣಗೊಳ್ಳುಲಿದೆ. ನಂತರ ಎಡತೊರೆಯ ಪಕ್ಕದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಸುಮಲತಾ ಗೆಲುವಿಗಾಗಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾನೆ.

Also read: ಜೋಡಿತುಗಳಲ್ಲ, ಕಳ್ಳೆತ್ತುಗಳು ದರ್ಶನ್-ಯಶ್ ವಿರುದ್ಧ ಸಿಎಂ ವಾಗ್ದಾಳಿ; ಈ ರೀತಿ ಹೇಳಿಕೆಗಳು ಸಿಎಂ ಹುದ್ದೆಯ ಘನತೆ ಕಳೆಯುತ್ತಾ??

ಒಟ್ಟಾರೆಯಾಗಿ ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಷ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮುಖ್ಯಮಂತ್ರಿಯಿಂದ ಹಿಡಿದು ಹಲವು ಕೇಂದ್ರ ಸಚಿವರು ಹಾಗೂ ರಾಜಕೀಯ ಘಟಾನುಘಟಿ ನಾಯಕರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ. ಈಗಲೂ ಕೂಡ ಈ ಕ್ಷೇತ್ರದ ಚುನಾವಣೆ ಎಲ್ಲರ ಗಮನ ಮತ್ತು ಕುತೂಹಲವನ್ನು ಕೆರಳಿಸಿದ್ದು ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಇಬ್ಬರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವವರು. ಇಬ್ಬರ ಹಿನ್ನೆಲೆಯೂ ಪರಸ್ಪರ ಪೈಪೋಟಿಗೆ ಬಿದ್ದಂತಿದೆ ಒಬ್ಬರಿಗೆ ಅನುಕಂಪದ ಅಲೆಯಿದ್ದರೆ ಮತ್ತೊಬ್ಬರಿಗೆ ತಂದೆ-ತಾತನ ವರ್ಚಸ್ಸಿನ ಅಲೆಯಿದೆ. ಇದರ ನಡುವೆ ಈ ಅಂಬಿ ಅಭಿಮಾನಿ ಮಾಡಿದ ಸೇವೆ ಫಲ ಸಿಗುತ್ತೋ ಇಲ್ಲೋ ಎನ್ನುವುದು ಕಾದು ನೋಡಬೇಕಿದೆ.