ಮಂಗಳೂರಿನ ಭೂರ್ಗರ್ಭದೊಳಗೆ ನಿರ್ಮಾಣವಾಗಲಿದೆ ಬೃಹತ್ ತೈಲಗಾರ: ಅರ್ಧದಷ್ಟು ತುಂಬಲಿದೆ ಅರಬ್‍ ದೇಶ

0
8239

ಇಡೀ ದೇಶದಲ್ಲಿ ಓಡಾಡುವ ವಾಹನಗಳಿಗೆ ಕನಿಷ್ಠ 10 ದಿನಗಳಿಗಾಗಿ ಆಗುವಷ್ಟು ಅಂದರೆ ಸರಿಸುಮಾರು 36.87 ದಶಲಕ್ಷ ಬ್ಯಾರೆಲ್ ತೈಲ ಸಂಗ್ರಹಿಸಲು ಭಾರತ ಮನಸ್ಸು ಮಾಡಿದೆ.

ಕರ್ನಾಟಕದ ಕಡಲ ಕಿನಾರೆಯಾದ ಮಂಗಳೂರಿನ ಭೂಗರ್ಭದೊಳಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ತೈಲ ಸಂಗ್ರಹಿಸಲು ಭಾರತ ಮತ್ತು ಯುನೈಟೆಡ್‍ ಅರಬ್‍ ಎಮಿರೇಟ್ಸ್‍ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು, ಇದರಲ್ಲಿ ಅರ್ಧದಷ್ಟು ತೈಲವನ್ನು ತುಂಬಿಸುವ ಜವಾಬ್ದಾರಿಯನ್ನು ಯುಎಇ ಒಪ್ಪಿಕೊಂಡಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಕೆಗಾಗಿ ಭಾರೀ ಪ್ರಮಾಣದಲ್ಲಿ ತೈಲ ಸಂಗ್ರಹ ಮಾಡಲು ಭಾರತ ನಿರ್ಧರಿಸಿದ್ದು, ಈ ಮಹತ್ವದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅರಬ್‍ ರಾಜಕುಮಾರ ಮತ್ತು ಯುಎಇ ಸೇನಾ ಮಹಾದಂಡನಾಯಕರಾಗಿರುವ ಶೇಖ್‍ ಮೊಹಮದ್‍ ಬಿನ್‍ ಜಯೀದ್ ಅಲ್‍ ನಹಯೇನ್‍ ಬುಧವಾರ ಸಹಿ ಹಾಕಿದರು.
ಬುಧವಾರ ಮತ್ತು ಯುಎಇ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸೇರಿದಂತೆ 14 ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರಲ್ಲಿ ಮಂಗಳೂರಿನ ಯೋಜನೆಯೂ ಸೇರಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವ ಕಚ್ಛಾ ತೈಲ ಸಂಗ್ರಹದಲ್ಲಿ ಅರ್ಧದಷ್ಟು ಅಂದರೆ 6 ದಶಲಕ್ಷ ಬ್ಯಾರೆಲ್‍ ಅನ್ನು ಯುಎಇ ಭರ್ತಿ ಮಾಡಲಿದೆ. ಉಳಿದ್ದನ್ನು ಇರಾನ್‍ನಿಂದ ಆಮದು ಮಾಡಿಕೊಳ್ಳಲಾಗುವುದು. ಪ್ರಸ್ತುತ ಯುಎಇನಿಂದ ಅತೀ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 5 ನೇ ಸ್ಥಾನ ಪಡೆದಿದೆ.

ದಕ್ಷಿಣ ಕನ್ನಡದ ಪಡ್ಡೂರು ಬಳಿ ಮತ್ತೊಂದು ತೈಲಗಾರ ಸ್ಥಾಪಿಸಲು ಕೇಂದ್ರ ಸರಕಾರ ಉದ್ದೇಶಿಸಿದ್ದು, ಇಲ್ಲಿ 18.3 ದಶಲಕ್ಷ ಬ್ಯಾರೆಲ್ ಕಚ್ಛಾ ತೈಲ ಸಂಗ್ರಹ ಮಾಡುವ ಯೋಜನೆ ಇದೆ.

ವಿಶಾಖಪಟ್ಟಣದಲ್ಲಿ ಇಂತಹ ಇನ್ನೊಂದು ತೈಲಗಾರವನ್ನು ನಿರ್ಮಿಸಲು ಭಾರತ ಬಯಸಿದ್ದು, ಇದರಲ್ಲಿ 7.55 ದಶಲಕ್ಷ ಬ್ಯಾರೆಲ್‍ ಸಂಗ್ರಹ ಮಾಡಲಿದ್ದು, ಇರಾಕ್‍ನಿಂದ ತೈಲ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.