ಮಂಗಳೂರು ಬಂದರ್ ಸ್ಟೇಶನ್ ಸಬ್ ಇನ್ಸ್ ಪೆಕ್ಟರ್ ಮದನ್

0
575

ಸಕಾರಾತ್ಮಕ ಮನೋಭಾವನೆಗಳನ್ನು ಬೆಳೆಸಿಕೊಂಡರೆ ಜೀವನ ಉನ್ನತಮಟ್ಟಕ್ಕೆ ಬೆಳೆಯಲು ಕಾರಣವಾಗುತ್ತವೆ ಎಂಬುದನ್ನು ನಾವು ಮದನ್ ಅವರನ್ನು ನೋಡಿ ಕಲಿಯಬೇಕು.

ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಿದ್ದರು. ಆದರೆ ಇಂದು ಸಮಾಜ ಸೇವಾಕರ್ತರೆನಿಸಿಕೊಂಡಿರುವವರಲ್ಲಿ ಬಹುಜನ ಸ್ವಾರ್ಥ ಮನೋಭಾವದವರಾಗಿರುವುದರಿಂದ ಸಮಾಜ ಸೇವಾಕರ್ತರೆಂದರೆ ಸಾರ್ವಜನಿಕರ ಹಣದಲ್ಲಿ ಐಷಾರಾಮದ ಜೀವನವನ್ನು ನಡೆಸುವವರೆಂಬ ಅರ್ಥ ಜನಜನಿತವಾತಗಿದೆ.ಇಂತಹ ಒಂದು ಸಮಾಜದಲ್ಲಿ ಸೇವೆಯನ್ನೆ ತನ್ನ ಉಸಿರಾಗಿಸಿ 24 ಘಂಟೆ ಪರೋಪಕಾರಿಯಾಗಿ ಬದುಕುತ್ತಿರುವ ವ್ಯಕ್ತಿ ಬಂದರ್ ಸ್ಟೇಶನ್ ಸಬ್ ಇನ್ಸ್ ಪೆಕ್ಟರ್ ಮದನ್.ಯಾವುದೇ ಸಮಯದಲ್ಲಿ, ಯಾವುದೆ ಸಮಸ್ಯೆಗೂ ತನ್ನಿಂದ ಆಗುವ ಪರಿಹಾರ ಮಾಡುತಿದ್ದಾರೆ.

ನಿರಂತರವಾಗಿ ರಕ್ತದಾನವಷ್ಟೇ ಅಲ್ಲದೆ ಇತರರನ್ನು ರಕ್ತ ದಾನ ಮಾಡಲು ಪ್ರೋತ್ಸಾಹಿಸಿ, ರಕ್ತದ ಅವಶ್ಯಕತೆ ಇದ್ದಾಗ ಕೂಡಲೆ ಅದಕ್ಕೆ ವ್ಯವಸ್ಥೆ ಮಾಡಿ ಕೊಡುವಂತಹ ಮನೋಭಾವ ಇವರದ್ದು.

ಸ್ವಚ್ಚ ಭಾರತದ ಪರಿಕಲ್ಪನೆಯನ್ನು ತನ್ನ ಗುರಿಯಾಗಿಟ್ಟು, ರಾಮಕ್ರಷ್ಣ ಮಿಶನ್ ಜೊತೆ ಸೇರಿ ಸದ್ದಿಲ್ಲದೇ ನಡೆಯಿತು ಇವರಿಂದ ಸ್ವಚ್ಚತೆಯ ಅಭಿಯಾನ . ಈ ಸ್ವಚ್ಚತಾ ಕಾರ್ಯಕ್ಕೆ ಮಂಗಳೂರಿನಾದ್ಯಂತ ಯುವಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸ್ವಚ್ಚತೆಗಾಗಿ ನೀಡಿದ ಕರೆಯು ಆಮ್ರತ ಸಂಜೀವಿನಿ ಮತ್ತು Team INSPIRATION ತಂಡಗಳ ಯುವಕರಲ್ಲಿ ಹೊಸ ಸಂಚಲನವನ್ನೇ ಮೂಡಿಸಿತು. ಮದನ್ ಅವರ ಕರೆಯಿಂದ ಪ್ರೇರಿತಗೊಂಡ ಕಾರ್ಯಕರ್ತರ ತಂಡ ಸ್ವಚ್ಚತೆಯನ್ನು ಕೈಗೊಂಡು ಸ್ವಚ್ಚ ಭಾರತ ಪರಿಕಲ್ಪನೆಗೆ ಜೀವ ತುಂಬಿತು. ಆ ಮೂಲಕ ಸ್ವಚ್ಚತೆಯ ಕುರಿತಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿರುವ ರಾಮಕ್ರಷ್ಣ ಮಿಶನ್ ಜೊತೆ ಸೇರಿ ಈ ಎರಡೂ ತಂಡದಿಂದ ಸದ್ದಿಲ್ಲದೇ ನಡೆಯುತ್ತಿದೆ ಸ್ವಚ್ಚತಾ ಕಾರ್ಯ.

ಇವರ ಬಗ್ಗೆ ಹೇಳುತ್ತ ಹೋದರೆ ಅದೆಷ್ಟೋ ಸೇವೆಯನ್ನು ಮಾಡಿದ್ದಾರೆ. ಇಂತಹ ಸಮಾಜ ಸೇವಕರಿಗೆ ಆ ದೇವರು ಇನ್ನಷ್ಟು ಶಕ್ತಿ ಕೊಡಲಿ. ಅಪರಾದಿಗಳನ್ನು ತಿದ್ದಿ
ಬುದ್ಧಿ ಹೇಳಿ ಅವರ ಭವಿಷ್ಯಕ್ಕೆ ಉತ್ತಮ ರೂಪ ಕೊಡುವಂತಾಗಲಿ. ಪೋಲಿಸ್ ಸೇವೆಯ ನಡುವೆಯು ಇವರ ಸಮಾಜ ಸೇವೆ ಮುಂದುವರಿಯಲಿ. ಇಂತಹ ಪುಣ್ಯತ್ಮ ನಮ್ಮ ಮಂಗಳೂರಿನಲ್ಲಿರುವುದು ನಮ್ಮ ಭಾಗ್ಯವೇ ಸರಿ.
krupe:ದೀಪು ಶೆಟ್ಟಿಗಾರ್ ಮಂಗಳೂರು