ಮಾವಿನ ಹಣ್ಣಿನ ಸೀಸನ್ ಮುಗಿತಾ ಇದೆ ಮಾವಿನ ಹಣ್ಣಿನ ಪಾಯಸ ಮಾಡಿ ಹೇಗೆ.? ಅಂತೀರಾ ಇಲ್ಲಿ ನೋಡಿ..!

0
1105

ಮಾವಿನ ಹಣ್ಣಿನ ಸೀಸನ್ ಮುಗಿತಾ ಇದೆ ಏನ್ ಮಾಡೋದು ಅಂತೀರಾ ನಾವು ಹೇಳಿದ ಹಾಗೆ ಮಾವಿನ ಪಾಯಸ ಮಾಡಿ ತಿನ್ನಿ ಹೇಗೆ ಅಂತ ನಾವು ಹೇಳ್ತಿವಿ ನೋಡಿ

Image result for Mango fruit pudding
ಇದಕ್ಕಾಗಿ ಬೇಕಾಗುವ ಸಾಮಾಗ್ರಿಗಳು:
1. ಮಾವಿನ ಹಣ್ಣು
2. ಬಾಸ್ಮತಿ ಅಕ್ಕಿ
3. ಕೆನೆಭರಿತ ಹಾಲು
4. ಸಕ್ಕರೆ
5. ಬಾದಾಮಿ
6. ಕೇಸರಿ
7. ಪಿಸ್ತಾ

Related image

ಹಾಗಾದ್ರೆ ಮಾವಿನ ಪಾಯಸ ಮಾಡುವ ವಿಧಾನ:

ಎರಡು ಪ್ರತ್ಯೇಕ ಕಪ್‍ಗಳಲ್ಲಿ ಬಾದಾಮಿ ಮತ್ತು ಅಕ್ಕಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೆಲ ನಿಮಿಷಗಳ ಕಾಲ ನೆನೆಸಿಡಿ.
ಒಂದು ಕಪ್ ನಲ್ಲಿ 4 ಚಮಚದಷ್ಟು ಬೆಚ್ಚಗಿನ ಹಾಲು ತೆಗೆದುಕೊಂಡಿ ಅದಕ್ಕೆ ಕೇಸರಿ ಎಲೆಗಳನ್ನು ಹಾಕಿಡಿ.ಬಾದಾಮಿ ಮೇಲಿನ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಿ.ಮಿಕ್ಸಿ ಜಾರಿಗೆ ಅಕ್ಕಿ, ಬಾದಾಮಿ ಮತ್ತು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ಹಾಲನ್ನು ಕೆನೆ ಬರುವವರೆಗೆ ಕುದಿಸಿ ನಂತರ ಅದಕ್ಕೆ ಗ್ರೈಂಡ್ ಮಾಡಿರೋ ಅಕ್ಕಿ ಮತ್ತು ಬಾದಾಮಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ.

Image result for Mango fruit pudding

ಹಾಲು ಗಟ್ಟಿಯಾಗುವ ಹಂತಕ್ಕೆ ಬಂದಾಗ ಸಕ್ಕರೆ ಬೆರೆಸಿ.
ನಂತರ ಕೇಸರಿ ಹಾಕಿರೋ ಹಾಲನ್ನ ಅದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಕುದಿಯುತ್ತಿರುವ ಪಾಯಸಕ್ಕೆ ಮಾವಿನ ಹಣ್ಣಿನ ಪೇಸ್ಟ್ ಹಾಕಿ, ಮತ್ತೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಗೆ ಪಾಯಸವನ್ನ ಒಲೆಯಿಂದ ಕೆಳಗಿಳಿಸಿ, ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಬಾದಾಮಿ, ಪಿಸ್ತಾ ಹಾಕಿ.
ಮಾವಿನ ಹಣ್ಣಿನ ಪಾಯಸ ಸವಿಯಲು ಸಿದ್ಧವಾಗಿರುತ್ತೆ.