ಮಾನಸಿಕ ಉನ್ಮಾದದಿಂದ ಬಳಲುತ್ತಿರುವವರು ಈ ಮನೆಮದ್ದುಗಳನ್ನು ಪಾಲಿಸಿದ್ದಲ್ಲಿ ಶೀಘ್ರ ಗುಣಮುಖರಾಗುವುದರಲ್ಲಿ ಸಂಶಯವೇ ಇಲ್ಲ…

0
1714
  • ಮಜ್ಜಿಗೆಯಲ್ಲಿ ಬೇಯಿಸಿದ ನೆಲ್ಲಿಕಾಯಿ ತುರಿಯನ್ನು ನೆತ್ತಿಗೆ ಮೆತ್ತಿ ಹರಳೆಣ್ಣೆ ಗಿಡದ ಎಲೆಯನ್ನು ಇಟ್ಟು ಕಟ್ಟಬೇಕು. ಇದನ್ನು ೩ ತಿಂಗಳುಗಳ ಕಾಲ ಪುನರಾವರ್ತಿಸಬೇಕು.
  • ೧೫೦ ಮಿಲಿ ಚಕೋತಾ ಹಣ್ಣಿನ ರಸಕ್ಕೆ ೫-೬ ಗ್ರಾಮ್ನಷ್ಟು ಜೀರಿಗೆ ಮತ್ತು ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ದಿನನಿತ್ಯ ಬೆಳಿಗ್ಗೆ ಕಾಳಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಉನ್ಮಾದ ಇಳಿಮುಖವಾಗುತ್ತದೆ.

  • ದಿನದಲ್ಲಿ ಮೂರು ಬಾರಿ ತುಳಸಿ ಎಲೆಯ ರಸವನ್ನು ಸೇವಿಸುವುದರಿಂದಲೂ ಸಮಸ್ಯೆಗೆ ಪರಿಹಾರ ಲಭಿಸುವುದು.
  • ಸುಮಾರು ೨೫ ಗ್ರಾಂ ನಷ್ಟು ಅಮೃತಬಳ್ಳಿ ಮತ್ತು ಒಂದೆಲಗದ ಚೂರ್ಣವನ್ನು ಬೆರೆಸಿ ಊಟದ ಮೊದಲು ದಿನದಲ್ಲಿ ೩ ಬಾರಿ ಸೇವಿಸಬೇಕು.

  • ಒಂದೆಲಗ ರಸ, ಭೂದುಗುಂಬಳ ರಸ, ಬಜೆಯ ರಸ, ಈಶ್ವರಿ ಬೇರಿನ ರಸ ಪ್ರತಿಯೊಂದನ್ನು ಅಂದಾಜು ೨೫ ಗ್ರಾಂ ನಷ್ಟು ಸೇರಿಸಿ ಪ್ರತಿದಿನ ಬೆಳಿಗ್ಗೆ ೩-೪ ವಾರ ಸತತವಾಗಿ ಕುಡಿಯುವುದರಿಂದ ಉನ್ಮಾದವು ನಿವಾರಣೆಯಾಗುತ್ತದೆ.
  • ರಾತ್ರಿ ಒಂದು ಹಿಡಿ ತೊಳೆದ ಕಡಲೆಕಾಳನ್ನು ನೆನೆಸಿಟ್ಟು ಬೆಳಗ್ಗೆ ನೀರನ್ನು ಬಸಿದ ಕಡಲೆಗೆ ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ಸೇವಿಸುವುದರಿಂದ ಮನೋ ವಿಕಾರಗಳು ದೂರವಾಗುತ್ತದೆ.
  • ಭೂದುಗುಂಬಳದ ಸೊಪ್ಪನ್ನು ರಾತ್ರಿ ನೀರಿನಲ್ಲಿ ನೆನಸಿತ್ತು ಬೆಳಗ್ಗೆ ನುಣ್ಣಗೆ ಅರೆದು ಅದಕ್ಕೆ ಜೇನುತುಪ್ಪ ಮತ್ತು ನೊರೆಹಾಲು ಬೆರೆಸಿ 21 ದಿನ ಕುಡಿದ್ದಲ್ಲಿ ಮನೋವ್ಯಾಧಿ ದೂರವಾಗುವುದು.
  • ಪಂಚಗವ್ಯವನ್ನು ಪ್ರತಿದಿನ ಬೆಳಿಗ್ಗೆ ಎರಡೂವರೆ ಚಮಚ ಸೇವಿಸುವುದರಿಂದಲೂ ಉನ್ಮಾದ ನಿವಾರಣೆಯಾಗುತ್ತದೆ.