ಪವಾಡದ ರೀತಿಯಲ್ಲಿ ಬೆಂಕಿ ಇಲ್ಲದೆಯೇ ಅಕ್ಕಿ ಬೇಯುತ್ತದೆ ಇಲ್ಲಿ.! ಪವಾಡ ಪ್ರಸಿದ್ದ ಶಿವಸ್ಥಾನವಾದ ಮಣಿಕರಣ್ ದೇವಾಲಯದ ವೈಶಿಷ್ಟ್ಯತೆ..!!

0
692

ಹಿಂದೂ ನಂಬಿಕೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ದೇವನನ್ನು ಸೃಷ್ಟಿಯ ಪರಿವರ್ತಕ ಎನ್ನಲಾಗಿದೆ. ಇಡೀ ಸೃಷ್ಟಿಯ ಲಯಕಾರಕ ಎಂದು ಕೂಡ ನಂಬಲಾಗುತ್ತದೆ. ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ ಕಾಣಿಸುವವನು ಶಿವನೆಂದೆ ಹೇಳಲಾಗುತ್ತದೆ. ಶಿವನನ್ನು ಭಕ್ತರು ಶ್ರದ್ಧಾ-ಭಕ್ತಿಗಳನ್ನು ಕಟ್ಟಿಕೊಂಡು ಶಿವನನ್ನು ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತದೆ. ಜಗದೇಶ್, ಗೌರೀಶ್, ಸರ್ವೇಶ, ಈಶ್ವರ, ಮಲ್ಲಿಕಾರ್ಜುನ, ಹೀಗೆ ನೂರಾರು ಹೆಸರುಗಳಿಂದ ಶಿವನನ್ನು ಭಕ್ತರು ಶ್ರದ್ಧಾ-ಭಕ್ತಿಗಳನ್ನು ಕಟ್ಟಿಕೊಂಡು ಶಿವನನ್ನು ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತದೆ. ಇಂಥ ಪುಣ್ಯಕ್ಷೇತ್ರಗಳು ದೇಶದಲ್ಲಿ ನೂರಾರಿವೆ.

 

ಅಂಥಹ ಪುಣ್ಯಕ್ಷೇತ್ರಗಳಲ್ಲಿ ಇಂದಿಗೂ ಕೂಡ ಭೂಮಿಯ ಮೇಲಿರುವ ಕೆಲವು ರಹಸ್ಯಗಳು ಊಹೆಗೆ ನಿಲುಕುವುದಿಲ್ಲ. ಈ ಭೂತಾಯಿಯ ಮಡಿಲಲ್ಲಿ ಇಂತಹ ಅನೇಕ ಚಿತ್ರವಿಚಿತ್ರ ಘಟನೆಗಳು ನಡೆಯುತ್ತನೇ ಇರುತ್ತದೆ. ಅಂಥಹ ರಹಸ್ಯಮಯ ವಿಷಯಗಳು ಈ ಶಿವನ ಕೆಲವು ದೇವಾಲಯಗಳ ಸುತ್ತ ಸಾವಿರಾರು ನಿಗೂಢಗಳನ್ನು ನೀವು ನೋಡುವಿರಿ. ಇದಕ್ಕೆ ಉತ್ತರಗಳಿಲ್ಲ, ಬದಲಾಗಿ ಊಹೆಗಳಿವೆ. ಇಂಥಹ ಕೆಲವೇ ಕೆಲವು ದೇವಾಲಯಗಳು ಒಂದು ರೀತಿಯಲ್ಲಿ ಕುತೂಹಲ ಕೆರಳಿಸಿ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತವೆ. ಅಂತ ನಿಗೂಢತೆಗಳಲೊಂದು ಈ ಶಿವನ ದೇವಾಲಯ.

Also read: ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡ “ಶಿವ ಲಿಂಗ”ದ ಹಿಂದಿನ ಪುರಾಣ, ಮಹತ್ವ ತಿಳಿದುಕೊಂಡು ಶಿವನ ಕೃಪೆಗೆ ಪಾತ್ರಾರಾಗಿ..!!

ಈ ದೇವಾಲಯ ಇರುವುದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮಣಿಕರನ್ ಪ್ರದೇಶದ “ಮಣಿಕರಣ್ ದೇವಾಲಯ”. ಇಲ್ಲಿ ಶಿವ ರೌದ್ರಾವತಾರ ತಾಳಿದ್ದರಿಂದ ಈ ದೇವಾಲಯದ ಕೆರೆಯಲ್ಲಿ ಇಂದಿಗೂ ಬಿಸಿನೀರು ಉಕ್ಕಿ ಬರುತ್ತಿದೆ ಅಂತೆ. ಏನಪ್ಪಾ ಇದು ಅತ್ಯಂತ ಶೀತ ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿ ಈ ರೀತಿಯಾದಂಥಹ ಬಿಸಿ ನೀರಿನ ಬುಗ್ಗೆ ಕಂಡು ಬರುವುದು ಸದ್ಯಾನ ಅನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ.. ಆದರೆ ಇದು ನಿಜ.!!

ಸಮುದ್ರ ಮಟ್ಟದಿಂದ ಸುಮಾರು 5770 ಅಡಿ ಎತ್ತರದಲ್ಲಿರುವ ಮಣಿಕರಣ್ ದೇವಾಲಯ ಇರುವುದು ಪಾರ್ವತಿ ನದಿಯ ದಂಡೆಯಲ್ಲಿ. ಕಣಿವೆಯ ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಅಲ್ಲಲ್ಲಿ ಬಿಸಿನೀರಿನ ಬುಗ್ಗೆ ಭೂಮಿ ಅಡಿಯಿಂದ ಇಲ್ಲಿ ಉಕ್ಕಿ ಬರುತ್ತಿದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗದ ಜೊತೆಗೆ ವಾಯು ದೋಷ ಮತ್ತು ಸಂಧಿವಾತ ನಿವಾರಣೆಯಾಗುವ ಶಕ್ತಿ ಇರುವುದರಿಂದ ದೇಶದಲ್ಲೆ ಹೆಚ್ಚು ಜನಪ್ರೀಯತೆಗಳಿಸಿರುವ ದೇವಸ್ಥಾನ ಇದಾಗಿದೆ. ಪವಿತ್ರವಾದ ಪಾರ್ವತಿ ನದಿಯ ತಟದಲ್ಲಿ ನೆಲೆಸಿರುವ ಈ ದೇವಸ್ಥಾನ ಅದ್ಭುತವಾದ ದಂತಕಥೆಯನ್ನೊಳಗೊಂಡಿದೆ.

Also read: ಭೂ ಕೈಲಾಸ ಗೋಕರ್ಣದ ರೋಚಕ ಪುರಾಣ ಕೇಳಿದರೆ ಅಲ್ಲಿಗೆ ಹೋಗದೆ ಇರಲಾರಿರಿ.. ಶಿವನ ಆತ್ಮಲಿಂಗ ಇರುವುದೇ ಇಲ್ಲಿ..

 

ಒಮ್ಮೆ ಶಿವ ಪಾರ್ವತಿಯವರು ಕೈಲಾಸದಿಂದ ಭೂಲೊಕಕ್ಕೆ ಬಂದ ಸಂಧರ್ಭದಲ್ಲಿ ಈ ಪ್ರದೇಶ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಪಾರ್ವತಿಯು ಇಲ್ಲಿಯ ನೀರಿನ ಚಿಲುಮೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕೆಯ ಕಿವಿಯ ಮಣಿ ಚಿಲುಮೆಯ ಹೊಂಡಕ್ಕೆ ಬೀಳುತ್ತದೆ. ಅದನ್ನು ಈಶ್ವರನ ಗಣಗಳಿಗೆ ಹುಡುಕಲು ಸದ್ಯವಾಗದೇ ಇದ್ದಾಗ ಶಿವ ಕೋಪಗೊಂಡು ತಾಂಡವ ನೃತ್ಯ ಮಾಡುತ್ತಾನೆ ಇದರಿಂದ ಜಗತ್ತು ಅಲ್ಲೋಲ ಕಲ್ಲೋಲವಾದಾಗ ಶೇಷನಾಗ ಪಾತಾಳದಿಂದ ಕುದಿಯುವ ನೀರಿನ ಗುಳ್ಳೆಗಳನ್ನು ಒಮ್ಮೆಲೆ ತೀವ್ರ ರಭಸದಿಂದ ಮೇಲಕ್ಕೆ ಚಿಮ್ಮಿಸುತ್ತಾನೆ. ಆಗ ನೀರು ಮೇಲಕ್ಕೆ ಚಿಮ್ಮಿ ಅದರಲ್ಲಿ ಪಾರ್ವತಿ ದೇವಿ ಕಳೆದುಕೊಂಡ ಮಣಿ ಸಿಗುತ್ತದೆ. ಇದನ್ನು ಕಂಡು ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ ಎಂಬುದು ಈ ಪ್ರದೇಶದ ಐತಿಹ್ಯ.

Also read: ಶಿವ ಪಾರ್ವತಿಯನ್ನು ಈ ದೇವಾಲಯದಲ್ಲಿ ಬೇರೆ ಬೇರೆ ಪ್ರತಿಷ್ಠಾಪನೆ ಮಾಡಿದ್ದಾರೆ, ಕಾರಣ ತಿಳಿದರೆ ನಮ್ಮ ಪುರಾಣಗಳಲ್ಲಿನ ನಂಬಿಕೆಗಳ ಬಗ್ಗೆ ಹೆಮ್ಮೆ ಪಡ್ತೀರಾ..

ಈ ಪ್ರದೇಶದ ಇನ್ನೊಂದು ವಿಶೇಷತೆ ಏನೆಂದರೆ ಇಲ್ಲಿ ಪ್ರತಿದಿನ ಮೂರು ಹೊತ್ತು ಊಟ ಸಿದ್ಧ ಇರುತ್ತದೆ. ಇಲ್ಲಿಗೆ ಬಂದ ಯಾತ್ರಿಕರು ಅಕ್ಕಿ, ಬೇಳೆ ಮತ್ತು ಕಡಲೆಕಾಳನ್ನು ಶಿವನ ಗರ್ಭಗುಡಿಯ ಪಕ್ಕದಲ್ಲಿ ಪ್ರಾಕೃತಿಕವಾಗಿ ಉದ್ಭವಾದ ಭೂಮಿ ಅಡಿಯಿಂದ ಉಕ್ಕಿ ಬರುವ ಬಿಸಿನೀರಿನಲ್ಲೇ ಬೇಯಿಸುತ್ತಾರೆ. ತಾಮ್ರದ ಹಂಡೆಗಳಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದಕ್ಕೆ ಬಟ್ಟೆಯನ್ನು ಕಟ್ಟಿ ಬಿಸಿನೀರಿನ ಕುಂಡದೊಳಗೆ ಇಳಿಸುತ್ತಾರೆ. 20 ನಿಮಿಷದೊಳಗೆ ಅಕ್ಕಿ ಊಟಕ್ಕೆ ಸಿದ್ಧವಾಗುತ್ತದೆ. ಅಷ್ಟೇ ಅಲ್ಲ ಈ ದೇವಾಲಯದ ಪಕ್ಕದಲ್ಲೇ ಗುರುದ್ವಾರ ಸಿಖ್ಖರ ಪವಿತ್ರ ಕ್ಷೇತ್ರವಿದೆ. ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಗುರುದ್ವಾರದಲ್ಲಿ ಪ್ರಸಾದ ಭೋಜನ ಸವಿದು ಪುನೀತರಾಗುತ್ತಾರೆ.