ಮಣಿಪಾಲ ವಿದ್ಯಾರ್ಥಿಗಳು ಮೊಟ್ಟ ಮೊದಲ ಬಾರಿಗೆ ಸೌರಶಕ್ತಿಯಿಂದ ಚಲಿಸುವ ಕಾರೊಂದನ್ನು ನಿರ್ಮಿಸಿದ್ದಾರೆ…!!

0
420

ಇತ್ತೀಚಿನ ದಿನಗಳಲ್ಲಿ ತೈಲ ಅನ್ನೋದು ತುಂಬಾನೇ ಬೇಡಿಕೆ ಇರುವ ವಸ್ತು. ನಮ್ಮ ಬಾರತದಲ್ಲಿ ಇದರ ಬೇಡಿಕೆ ತುಂಬ
ಇದೆ. ಈ ತೈಲ ಬೆಲೆಗಳಿಂದ ಎಷ್ಟೋ ಬಾರಿ ನಾವು ಯಾಕಾದ್ರೂ ಕಾರು ತಗೋಳ್ತೀಯೋ ಅನಿಸಿದ್ದು ಉಂಟು. ಆದ್ರೆ ಕೆಲವೊಂದು ಕಂಪನಿಗಳು ಇಂತಹ ಸಮಸ್ಯೆಗಳಿಗೆ ಕೆಲವೊಮ್ಮೆ ಪರಿಹಾರಗಳನ್ನು ಹುಡುಕುವ ಬಗ್ಗೆ ಚಿಂತನೆ ನೆಡಿಸಿ. ಹಲುವ ಬಾರಿ ವಿಶೇಷ ಕಾರುಗಳನ್ನು ನೀಡುತ್ತಾ ಬಂದಿವೆ.

ಇಂತಹ ಸಾಲಿಗೆ ಮತ್ತೊಂದು ಹೊಸ ಆವಿಷ್ಕಾರ ಈ ಸಲಿಗೆ ಸೇರ್ಪಡೆ ಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಮಣಿಪಾಲದ MITಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು SM- S1 ಹೆಸರಿನ ಸೋಲಾರ್ ಕಾರನ್ನು ತಯಾರು ಮಾಡಿದ್ದಾರೆ. ಇನ್ನು ಈ ಕಾರಿಗೆ ಬೇಕಾದ ಸೋಲಾರ್ ಪ್ಯಾನಲ್ಗಳನ್ನು ಟಾಟಾ ಸೋಲಾರ್ ನೀಡಿದೆ. ಒಟ್ಟು ಈ ಕಾರು ತಯಾರಿಸಲು 30 ರಿಂದ 35 ಲಕ್ಷ ವೆಚ್ಚವಾಗಿದೆ. ಇದರಲ್ಲಿ ಮಣಿಪಾಲ ವಿಶ್ವ ವಿದ್ಯಾಲಯ 10 ಲಕ್ಷ ರೂಪಾಯಿ ನೀಡಿದೆ.

source: publictv.in
source: publictv.in

ಎಲೆಕ್ಟ್ರಿಕಲ್, ಐಟಿ, ಮೆಕ್ಯಾನಿಕಲ್, ಏರೋನಾಟಿಕ್ ವಿಭಾಗದ ವಿದ್ಯಾರ್ಥಿಗಳು ಈ ಆವಿಷ್ಕಾರಕ್ಕೆ ಕೈಜೋಡಿಸಿದ್ದಾರೆ. ಸೂರ್ಯನ ಬೆಳಕಿನಿಂದ ಚಾರ್ಜ ಆದ ಕಾರು ಗರಿಷ್ಟ ಗಂಟೆಗೆ 40-50 ವೇಗದಲ್ಲಿ 180 ಕಿಲೋಮೀಟರ್ ದೂರ ಕ್ರಮಿಸಬಹುದು. ಸೂರ್ಯನ ಕಿರಣ 7 ಗಂಟೆ ನಿರಂತರವಾಗಿ ಕಾರಿನ ಮೇಲೆ ಬಿದ್ದರೆ ಮತ್ತೆ ಬ್ಯಾಟರಿ ಫುಲ್ ಆಗುತ್ತದೆ. ಅಷ್ಟೇ ಅಲ್ಲದೆ ಮೂರು ಗಂಟೆಯಲ್ಲಿ ವಿದ್ಯುತ್ತನ್ನು ಬ್ಯಾಟರಿಗೆ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಕಾರೊಳಗೆ ಅಳವಡಿಸಲಾಗಿದೆ.

source: publictv.in

 

ನಾಲ್ಕು ಮಂದಿ ಆರಾಮವಾಗಿ ಓಡಾಡಬಹುದಾದ ಈ ಕಾರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಓಡುತ್ತೆ. ಕಾರಿನ ಮೇಲೆ, ಮುಂದೆ-ಹಿಂಭಾಗ ಸೋಲಾರ್ ಪ್ಯಾನಲ್ ಜೋಡಿಸಿದ್ದಾರೆ. ಕಾರಿನ ಒಳಗೆ ಬ್ಯಾಟರಿ ಬ್ಯಾಕಪ್ ಇದೆ. ಈ ಮೂಲಕ ಸೋಲಾರ್ ಎನರ್ಜಿ ಸಂಗ್ರಹ ಆಗುತ್ತೆ. ಸಂಪೂರ್ಣವಾಗಿ ಸೌರಶಕ್ತಿ ಇಂದ ಚಲಿಸುವ ಈ ಕಾರು AC ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

source: publictv.in

ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಬಿಟ್ರೋಲ್ ಡೀಸೆಲ್ ಹೆಚ್ಚಾಗಿ ಬಳಸುತ್ತಿದ್ದೇವೆ. ಇದರ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಪರಿಸರ ಸ್ನೇಹಿ ಮಾದರಿಯ ಕಾರನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾರಿಗೆ ಶೆಲ್ಟರ್ ಅವಶ್ಯಕತೆ ಇಲ್ಲ.ಪಾರ್ಕಿಂಗ್ ಸಮಯದಲ್ಲೂ ಬ್ಯಾಟರಿ ಚಾರ್ಜ ಆಗುವ ಫೆಸಿಲಿಟಿ ಇದೆ ಎಂದು ಹೇಳುತ್ತಾರೆ ಮಣಿಪಾಲ ವಿಶ್ವ ವಿದ್ಯಾಲಯದ ಪ್ರಧ್ಯಾಪಕ ಉಮಾನಂದ ಹೇಳಿದ್ದಾರೆ.