ಅತಿಶೂದ್ರ ಮತ್ತು ಆದಿ ಶಂಕರರು

0
4852

Kannada News | Karnataka Temple History

ಒಂದು ದಿವಸ ಕಾಶಿಯಲ್ಲಿ ಯತಿವರ್ಯರಾದ ಆದಿ ಶಂಕರರು ತಮ್ಮ ಶಿಷ್ಯಂದಿರ ಜೊತೆ ಗಂಗಾ ಸ್ನಾನ ಮಾಡಲಿಕ್ಕೆ ಹೋಗಿದ್ದರು . ಸ್ನಾನ ಮಾಡಿ ಬರುವಾಗ ಹಾದಿಯಲ್ಲಿ ನಾಲ್ಕು ನಾಯಿಗಳ ಜೊತೆ ಚಾಂಡಾಲ ಅದೇ ಹಾದಿಯಲ್ಲಿ ಎದುರಾದ ಅವರ ಶಿಷ್ಯರು ಚಾಂಡಾಲ ನನ್ನು ಕಂಡು ದೂರ ಆಗು ದೂರಾಗು ಎಂದು ಹೇಳಿದ್ದು ಕೇಳಿ ಚಾಂಡಾಲ ಹೇಳಿದ ಬ್ರಾಹ್ಮಣರೇ ತಾವು ವೇದಾಂತದ ಅದ್ವೈತ ಮತ ಪ್ರಚಾರ ಮಾಡುತ್ತ ಓಡಾಡುತ್ತಿರಲು ಮತ್ತೆ ಯಾಕೆ ನಿಮಗೆ ಅಷ್ಪರ್ಶತೆ ? ಭೇದಭಾವ ಕಾಣೋದು ಹೇಗೆ ಸಾಧ್ಯ ? ನನ್ನ ಶರೀರ ಮುಟ್ಟುವುದರಿಂದ ಹೇಗೆ ತಾವು ಅಪವಿತ್ರರಾಗುವಿರಿ ? ನಿಮ್ಮ ನಮ್ಮ ಶರೀರ ಒಂದೇ ಪಂಚತತ್ವಗಳಿಂದ ಆಗಿದ್ದಲ್ಲವೆ? ನಿಮ್ಮ ಒಳಗಿರುವ ಆತ್ಮ ನನ್ನೊಳಗಿರುವ ಆತ್ಮ ಒಂದೇ ಅಲ್ಲವೆ? ಎಂದು ಕೇಳಿದಾಗ ಆಚಾರ್ಯ ಶಂಕರರು ಇವನು ಸಾಮಾನ್ಯ ಚಾಂಡಾಲ ಅಲ್ಲ, ಚಾಂಡಾಲ ವೇಷದಲ್ಲಿ ಶಿವನೇ ನನ್ನನ್ನು ಪರೀಕ್ಷಿಸಿದ್ದು ಎಂದು ತಿಳಿದು ತಕ್ಷಣ ಚಾಂಡಾಲನಿಗೆ ದಂಡವತ ಪ್ರಣಾಮ ಮಾಡಿ ಸ್ತುತಿ ಮಾಡಿದ್ದೆ ” ಮನಿಷಾ ಪಂಚಕ “.

ಈ ಘಟನೆ ಸಂಪೂರ್ಣ ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯಂತ ಕ್ರಾಂತಿಕಾರಿ ಮತ್ತು ಮಹತ್ವದ ಕಾರ್ಯ . ಶ್ರೀ ಶಂಕರರು ಸನಾತನ ಹಿಂದೂ ಧರ್ಮಕ್ಕೆ ಈ ಘಟನೆಯಿಂದ ಸಾಮಾಜಿಕ ಸಂದೇಶ ಸಾರಿದರು. ಭಾರತದ ಮೊದಲ ಮತ್ತು ಕೊನೆ ದಾರ್ಶನಿಕರು ಶ್ರೀ ಶಂಕರರು ಒಬ್ಬ ಚಾಂಡಾಲಗೆ ಗುರು ಎಂದು ಸ್ತುತಿ ಮಾಡಿದ್ದೂ .

ಬುದ್ಧ , ಬಸವ ಮತ್ತು ರಾಮಾನುಜರು ಶೂದ್ರರಿಗೆ ದೀಕ್ಷೆ ನೀಡಿ ಶಿಷ್ಯರೆಂದು ಸ್ವೀಕರಿಸಿದರೆ ಹೊರತು ಯಾವುದೇ ಒಬ್ಬ ಶೂದ್ರಗೆ ಗುರುವಿನ ಸ್ಥಾನದಲ್ಲಿ ಕಂಡು ಸ್ತುತಿಮಾಡಿದ್ದು ಇಲ್ಲ ಬರಿ ಇವರೇ ಅಲ್ಲ ಇಡೀ ಭಾರತೀಯ ಯಾವ ದಾರ್ಶನಿಕರು ಇವತ್ತಿಗೂ ಮಾಡಿಲ್ಲ . ಅಂತಃ ಕೆಲಸ ೭ ನೇ ಶತಮಾನದಲ್ಲೇ ಶ್ರೀ ಶಂಕರರು ಮಾಡಿ ಜಗತ್ತಿಗೆ ಬರಿ ಬಾಯಿಯಿಂದ ವೇದಾಂತ ಹೇಳಲಿಲ್ಲ ಕಾರ್ಯಗತ ಮಾಡಿ ತಾವು ಸ್ವತಃ ಅನುಷ್ಟಾನಕ್ಕೆ ಒಳಗಾಗಿದ್ದು ದೀನದಲಿತರಿಗೆ ಸಾಮಾಜಿಕ , ಧಾರ್ಮಿಕ ಸ್ಥಾನಮಾನ ಕಲ್ಪಿಸಿದ್ದು ಐತಿಹಾಸಿಕವಾದ ವಿಷಯ ಅವರ ಸಾಮಾಜಿಕ ಕಳಕಳಿಯ ಪ್ರತೀಕ .

ಅಂದಿನ ಸಾಮಾಜಿಕ ಪಿಡುಗುಗಳಾದ ಅಸ್ಪರ್ಶತೆ , ಲಿಂಗಬೇಧ , ಮತೀಯ ಮತಭೇದ , ಬಡತನ ಅಂತಹ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳ ನಿರ್ಮೂಲನೆಗೆ ಕೈಗೊಂಡ ಕಾರ್ಯಗಳೇ ಚಂಡಾಲ ಪ್ರಕರಣ , ಕನಕಧಾರಾ , ಮಿಶ್ರಾನ ಶಾಸ್ತ್ರಾರ್ಥ ದಲ್ಲಿ ಭಾರತಿಯನ್ನು ನ್ಯಾಯಪೀಠದಲ್ಲಿ ಕೂಡಿಸಿದ್ದು ಮತ್ತು ಪಂಚಾಯತನ ಪೂಜೆ ಜಾರಿಗೊಳಿಸಿದ್ದು ಇವರ ಸಮಗ್ರ ದ್ರಷ್ಟಿಕೋನದ ಪ್ರತೀಕಗಳು.
ಮನಿಷಾ ಪಂಚಕ :- ನೋಡಿ

Also Watch:

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಪುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾಜಗತ್ಸಾಕ್ಷಿಣೀ
ನೈವಾಹಂ ನಚ ದೃಶ್ಯವಸ್ತ್ವಿತಿ ದೃಡಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನಿಷಾ ಮಮ ।। ೧।।

ಬಹಳ ಸೂಕ್ಷ್ಮವಾಗಿ ಈ ಮೇಲಿನ ಶ್ಲೋಕದಲ್ಲಿ ಅದ್ವೈತ ತತ್ವ ಹೇಳಿದ್ದಾರೆ ಮನುಷ್ಯನ ಮೂರೂ ಅವಸ್ಥೆಗಳಾದ ಎಚ್ಚರ , ಕನಸು ಮತ್ತು ನಿದ್ರೆ ಈ ಮೂರೂ ಅವಸ್ಥೆಯಲ್ಲಿ ಜ್ಞಾನಕ್ಕೆ ಆಧಾರವಾದ ಚೈತನ್ಯವು ಬ್ರಹ್ಮಾದಿ ವಿಷ್ಣುಸಹಿತ ಶಿವನಲ್ಲಿ ಇರುವ ಚೈತನ್ಯವೇ ಇರುವರೆಗೂ ಎಲ್ಲಾ ಜೀವ ಸಂಕುಲಗಳಲ್ಲೂ ಅವಿರ್ಭವಿಸಿ ಆ ಜೀವಿಗಳನ್ನು ನಡೆಸುತ್ತಿದೆಯೋ, ಆ ಚೈತನ್ಯ ಸ್ವರೂಪವೇ ನಾನು. ನೋಟಕ್ಕೆ ಕಾಣುತ್ತಿರುವುದು ನಾನಲ್ಲ. ಈ ಬ್ರಹ್ಮ ಜ್ಞಾನವನ್ನು ಯಾವ ಮನುಷ್ಯ ಅರಿತಿರುವನೋ ಆತನು ಜಾತಿಯಲ್ಲಿ ಚಾಂಡಾಲನಿರಲಿ ಅಥವಾ ಬ್ರಾಹ್ಮಣನಿರಲಿ ನಾನು ಆತನನ್ನು ನನ್ನ ಗುರುವೆಂದು ಸ್ವೀಕರಿಸುತ್ತೇನೆ.

Also Read: ಶಿವಾರಾಧಕರು ರುದ್ರಾಕ್ಷಿಗೆ ಯಾಕೆ ಮಹತ್ವವನ್ನು ನೀಡುತ್ತಾರೆ… ಇಲ್ಲಿ ಓದಿ