ಭಾರತದ ಹಸಿರು ಕ್ರಾಂತಿ ಪಿತಾಮಹ ಎಂ ಎಸ್ ಸ್ವಾಮಿನಾಥನ್!!!

0
1898

Kannada News | Karnataka Achiecers

ಭಾರತದ ಹಸಿರು ಕ್ರಾಂತಿ ಪಿತಾಮಹ ಎಂದೇ ಪ್ರಖ್ಯಾತರಾದ ಮೊಂಕೊಂಬು ಸಾಂಬಶಿವನ್ ಸ್ವಾಮಿನಾಥನ್ ಅವರು ತಳಿಶಾಸ್ತ್ರಜ್ಞರಾಗಿಯೂ ಜನ ಪ್ರಿಯರಾಗಿದ್ದರು. ದೇಶದಲ್ಲಿ ಹತ್ತಿ ಮತ್ತು ಭತ್ತದ ಕೃಷಿಯಲ್ಲಿ ಕ್ರಾಂತಿ ತಂದ ಖ್ಯಾತಿ ಇವರದ್ದು. ಸುಸ್ಥಿರ ಕೃಷಿ, ಸುಸ್ಥಿರ ಆಹಾರ ಭದ್ರತೆ ಮತ್ತು ಜೀವ ವೈವಿಧ್ಯತೆಯಿಂದ ಸುಸ್ಥಿರ ಅಭವೃದ್ಧಿ ಸಾಧಿಸಬಹುದು ಎಂದು ನಂಬಿದ್ದರು. ಅಲ್ಲದೇ ಇದನ್ನು ಅವರು ನಿತ್ಯ ಹರಿದ್ವರ್ಣ ಕ್ರಾಂತಿ ಎಂದೂ ಕರೆದರು.

7.8.1925ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನನ. ತಂದೆ ಎಂ.ಕೆ. ಸಾಂಬಶಿವನ್ ಮತ್ತು ತಾಯಿ ಪಾರ್ವತಿ ತಂಗಮ್ಮಳ್ ಸಾಂಬಶಿವನ್. ಇವರ ತಂದೆ ಶಸ್ತ್ರಚಿಕಿತ್ಸಕರಾಗಿದ್ದರಲ್ಲದೇ ಮಹಾತ್ಮಾ ಗಾಂಧಿ ಅವರ ಕಟ್ಟಾ ಅನುಯಾಯಿಯಾಗಿದ್ದರು. `ಅಸಾಧ್ಯ’ ಎಂಬ ಶಬ್ದ ನಮ್ಮ ನಿಘಂಟುವಿನಲ್ಲಿ ಇರಲೇಬಾರದು ಎನ್ನುತ್ತಿದ್ದ ಅವರು ಆ ಕಾಲದಲ್ಲೇ ಸ್ವದೇಶಿ ವಸ್ತು ಬಳಸಿ, ವಿದೇಶಿ ವಸ್ತು ನಾಶಗೊಳಿಸಿ ಆಂದೋಲನದಲ್ಲಿ ಪಾಲ್ಗೊಳ್ಳುವ ಮೂಲಕ ಸ್ವದೇಶಿ ಆಂದೋಲನಕ್ಕೆ ಬೆಂಬಲ ನೀಡಿದ್ದರು. ಅವರು ನಿಧನರಾದಾಗ ಸ್ವಾಮಿನಾಥನ್ ಅವರಿಗೆ ಕೇವಲ 11 ವರ್ಷ. ಅವರ ಚಿಕ್ಕಪ್ಪ ಮತ್ತು ರೇಡಿಯಾಲಜಿಸ್ಟ್ ಆಗಿದ್ದ ಎಂ. ಕೆ. ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು.

`1943ರಲ್ಲಿ ಕೇರಳ ವಿವಿ ವಿದ್ಯಾರ್ಥಿಯಾಗಿದ್ದ ಸಂದ ರ್ಭದಲ್ಲಿ ಅಕ್ಕಿ ಕೊರತೆಯಿಂದಾಗಿ ಬಂಗಾಲದಲ್ಲಿ ಮೂರು ಲಕ್ಷಕ್ಕಿಂತಲೂ ಅಧಿಕ ಜನ ಸಾವನ್ನಪ್ಪಿದರು. ಈ ಪೈಕಿ ಚಿಕ್ಕ ವಯಸ್ಸಿನವರೇ ಅಧಿಕ ಸಂಖ್ಯೆಯಲ್ಲಿದ್ದರು. ಅಂದೇ ಕೃಷಿ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡಿ ಭಾರತದ ಬಡತನ ನಿರ್ಮೂಲನೆ ಮಾಡಲು ನಿರ್ಧರಿಸಿದ ಅವರು ಮದ್ರಾಸ್ ವಿವಿಯಿಂದ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದರು.

ಹಸಿರು ಕ್ರಾಂತಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರಿಂದ ವಿದೇಶಿಗರು ಶ್ರೀಮಂತರಾಗುತ್ತಾರೆ ಎಂದು ಬಲವಾಗಿ ನಂಬಿದ್ದ ಅವರು ಭಾರತ ಎಲ್ಲ ರೀತಿಯ ಬೆಳೆಗಳ ಆಮದು ನಿಲ್ಲಿಸಬೇಕೆಂದು ಬಯಸುತ್ತಿದ್ದರು. 1966ರಲ್ಲಿ ನವದೆಹಲಿಯ ಭಾರತೀಯ ವ್ಯವಸಾಯ ಸಂಶೋಧನಾ ಕೇಂದ್ರದ ನಿರ್ದೇಶಕರಾದರು. ಇವರು ಮಂಡಿಸಿದ ವರದಿ ಮೆಚ್ಚಿ ರಾಕ್ ಫೆಲ್ಲರ್ ಪ್ರತಿಷ್ಠಾನ ಆರ್ಥಿಕ ಬೆಂಬಲ ನೀಡಲು ಮುಂದೆ ಬಂದಿತು. ಇದನ್ನು ಸದುಪಯೋಗ ಪಡಿಸಿಕೊಂಡ ಅವರು ಮೆಕ್ಸಿಕೋದ ಗೋಧಿ ಬೀಜವನ್ನು ಪಂಜಾಬ್ ದೇಸಿ ತಳಿಯೊಂದಿಗೆ ಮಿಶ್ರಣಗೊಳಿಸುವ ಮೂಲಕ ಅಧಿಕ ಉತ್ಪಾದನೆಯುಳ್ಳ ಮಿಶ್ರ ತಳಿ ಗೋಧಿ ಬೀಜ ವಿಕಸಿತಗೊಳಿಸಿದರು.

ಹಸಿರು ಕ್ರಾಂತಿಯ ಮೂಲಕ ಹೆಚ್ಚು ಬೆಳೆ ಬೆಳೆಯುವ ಅಕ್ಕಿ ಮತ್ತು ಗೋಧಿ ಬೀಜಗಳನ್ನು ಬಡ ರೈತರಿಗೆ ಹಂಚಿ ಅವರ ಜಮೀನಿನಲ್ಲಿ ಹೆಚ್ಚೆಚ್ಚು ಅಕ್ಕಿ ಮತ್ತು ಗೋಧಿ ಉತ್ಪಾದಿಸುವ ಮೂಲಕ ಭಾರತ ತಿನ್ನಲು ಗತಿಯಿಲ್ಲದ ದೇಶ ಎಂಬ ಕಳಂಕವನ್ನು ಹೋಗಲಾಡಿಸಿದ ಹೆಗ್ಗಳಿಕೆ ಇವರದ್ದು. ಭಾರತ ಕೃಷಿ ಪುನರ್ಜಾಗರಣ ಸಂಸ್ಥೆ ಸ್ವಾಮಿನಾಥನ್ ಅವರನ್ನು ಕೃಷಿ ವೈಜ್ಞಾನಿಕ ಕ್ಷೇತ್ರದ ನೇತಾರ ಪಟ್ಟ ಕಟ್ಟಿ ಗೌರವಿಸಿತು.

ಭಾರತ ದೇಶದ ಅತ್ಯುಚ್ಚ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇ-ರಿದಂತೆ ಮ್ಯಾಗ್ಸೆಸೆ, ಅಲ್ಬರ್ಟ್ ಐನ್‍ಸ್ಟೀನ್, ಪ್ರಥಮ ವಿಶ್ವ ಆಹಾರ, ಅಮೆರಿಕದ ಟೈಲರ್ ಪುರಸ್ಕಾರ, ಯುನೆಸ್ಕೋದ ಗಾಂಧಿ ಸ್ವರ್ಣ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವ ಸಮ್ಮಾನಕ್ಕೆ ಸ್ವಾಮಿನಾಥನ್ ಪಾತ್ರರಾಗಿದ್ದಾರೆ.

Also Read: ಸ್ವಂತ PF ಹಣದಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸಿದ ಸೈನಿಕ !!!