ಬಿ.ಜೆ.ಪಿ. ಪಕ್ಷದಲ್ಲಿ ಮಾತ್ರ ಮನೋಹರ್ ಪರಿಕ್ಕರ್-ರಂತಹ ಸರಳ-ನಿಷ್ಠಾವಂತ ರಾಜಕಾರಣಿಗಳು ಉನ್ನತ ಹುದ್ದೆಗೇರಲು ಸಾಧ್ಯ ಅನ್ಸುತ್ತೆ; ಅವರ ಜೀವನದ ಕಿರು ಪರಿಚಯ ಇಲ್ಲಿದೆ ನೋಡಿ!!

0
449

ದೇಶವೇ ಕಂಡ ಅಪರೂಪದ ಸರಳ ಜೀವನದ ವ್ಯಕ್ತಿ ಮನೋಹರ್ ಪರಿಕ್ಕರ್ ಕಳೆದುಕೊಂಡು ಬಿಜೆಪಿ ಪಕ್ಷ ಆಘಾತದಲ್ಲಿ ಮುಳುಗಿದೆ. ಇದರ ನಡೆವೆ ಅಧಿಕಾರದ ಗದುಗೆ ಏರಲು ಮುಂದಾದ ಕಾಂಗ್ರೆಸ್, ಪರಿಕ್ಕರ್ ಅಂತ್ಯ ಸಂಸ್ಕಾರ ಆಗೋ ಮುನ್ನವೇ ಅಧಿಕಾರಕ್ಕಾಗಿ ಬಾಯಿ ಬಿಡುತ್ತಿದೆ. ಈ ಹಿನ್ನೆಯಲ್ಲಿ ಕಾಂಗ್ರೆಸ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಬಾರಿ ವಿರೋದ್ದ ವ್ಯಕ್ತವಾಗಿದೆ. ಏಕೆಂದರೆ ಗೋವಾ ರಾಜ್ಯದಲ್ಲಿ 4 ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪರ್ರಿಕರ್, ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಅವಧಿಗೆ ರಕ್ಷಣಾ ಸಚಿವರಾಗಿದ್ದರು. ಇವರು ರಾಜಕೀಯದಲ್ಲಿ ಅಷ್ಟೇ ಅಲ್ಲದೆ ಸರಳ ಜೀವನ ನಡೆಸುವಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಜನಪ್ರಿಯರಾಗಿದ್ದರು.

ಪರಿಕ್ಕರ್ ಜೀವನ;

ಮನೋಹರ್ ಪರ್ರಿಕರ್ ಹುಟ್ಟಿದ್ದು 1955ರ ಡಿಸೆಂಬರ್ 13ರಂದು ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಜನಿಸಿದ ಅವರು ಮಾರ್ಗೋವಾದ ಲಯೋಲಾ ಎಂಬ ಪ್ರೌಢಶಾಲೆಯಲ್ಲಿ ಮರಾಠಿ ಮಾಧ್ಯಮದಲ್ಲಿಯೇ ತಮ್ಮ ವಿದ್ಯಾಭ್ಯಾಸ ಮಾಡಿದರು. ಬಳಿಕ 1978ರಲ್ಲಿ ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಬಹಳ ಚಿಕ್ಕ ವಯಸ್ಸಿನಲ್ಲಿ ಪರಿಕರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದವರು. ತಾವು ವಿದ್ಯಾಭ್ಯಾಸ ಮಾಡಿದ ಐಐಟಿಯಿಂದಲೇ ಆರ್​​ಎಸ್​​ಎಸ್​​ಕೆಲಸಗಳನ್ನು ಆರಂಭಿಸಿದ್ದರು. ಆರ್​​ಎಸ್​ಎಸ್​​ ಉತ್ತರ ಗೋವಾ ಘಟಕದಲ್ಲಿ ಸಕ್ರಿಯರಾಗಿದ್ದು, ರಾಮ ಜನ್ಮ ಭೂಮಿ ಚಳವಳಿಯ ನೇತೃತ್ವ ವಹಸಿದ್ದರು.

ಐಐಟಿ ಯಿಂದ ರಾಜಕೀಯಕ್ಕೆ;

ಆರ್ ಎಸ್ ಎಸ್ ಪ್ರಚಾರಕರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಐಐಟಿ ಮುಂಬೈಯಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ ನಂತರ ರಾಜಕೀಯಕ್ಕೆ ಪ್ರವೇಶಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಹುದ್ದೆಯಿಂದ ದೇಶದ ರಕ್ಷಣಾ ಸಚಿವರಾಗಿ ಮತ್ತು ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆದ ಮನೋಹರ್ ಪರ್ರಿಕರ್ ಕರಾವಳಿ ತೀರದ ರಾಜ್ಯಗಳಲ್ಲಿ ರಾಜಕೀಯವಾಗಿ ಪಕ್ಕದ ಮನೆಯ ಸಭ್ಯ ವ್ಯಕ್ತಿಯ ಇಮೇಜ್ ಸೃಷ್ಟಿಸಿಕೊಂಡವರು. ಗೋವಾ ರಾಜ್ಯದಲ್ಲಿ 4 ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪರ್ರಿಕರ್, ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಅವಧಿಗೆ ರಕ್ಷಣಾ ಸಚಿವರಾಗಿದ್ದರು. ಈ ವೇಳೆಯಲ್ಲೇ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಉರಿದಾಳಿ ನಡೆದು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಪರ್ರಿಕರ್ ರಕ್ಷಣಾ ಸಚಿವರಾಗಿದ್ದಾಗಲೇ. ಆ ಸಮಯದಲ್ಲಿ ತಮ್ಮ ಅಧಿಕಾರವನ್ನು ಸಮರ್ಪಕವಾಗಿ ನಡೆಸಿದರು.

ದೇಶವೇ ಮೆಚ್ಚಿದ ಪರಿಕ್ಕರ್ ಸರಳ ಜೀವನ:

ಮನೋಹರ ಪರಿಕ್ಕರ್ ಅವರನ್ನು ಅರ್ಧ ತೋಳಿನ ಅಂಗಿ ಇಲ್ಲದೆ ನೋಡಲು ಸಾಧ್ಯವೇ ಇಲ್ಲ. ಅಲ್ಲದೆ, ವಿಜೃಂಭಣೆಯಿಲ್ಲದ ಸಾಧಾರಣ ಪಾದರಕ್ಷೆ ಧರಿಸಿ ಸಂಸತ್ ಕಲಾಪಕ್ಕೆ ಹಾಜರಾ ಗುತ್ತಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಪರಿಕ್ಕರ್ ಅವರು ತಮ್ಮ ಪುತ್ರನ ವಿವಾಹದ ಸಂದರ್ಭದಲ್ಲಿಯೂ ಇದೇ ರೀತಿಯ ಬಟ್ಟೆಗಳನ್ನು ಹಾಕಿಕೊಂಡು, ತಾವೂ ಒಬ್ಬ ಸಾಮಾನ್ಯರಂತೆ, ಪುತ್ರನ ವಿವಾಹಕ್ಕೆ ಆಗಮಿಸುತ್ತಿದ್ದ ಅತಿಥಿಗಳನ್ನು ಬರ ಮಾಡಿಕೊಂಡಿದ್ದರು.

ಗೋವಾ ಮುಂದಿನ ಸಿಎಂ ಯಾರು?

ಪರಿಕ್ಕರ್ ಸಾವಿನ ನಂತರ ಗೋವಾದಲ್ಲಿ ಸರ್ಕಾರ ಉಳಿಯುತ್ತಾ? ಉರುಳುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ಈ ಮೊದಲೇ ಒಬ್ಬ ಶಾಸಕ ನಿಧನ ಹೊಂದಿದ ಕಾರಣ ಗೋವಾ ಸರ್ಕಾರ ಅಲ್ಪಮತಕ್ಕೆ ಇಳಿದಿದೆ ಎಂದು ಆರೋಪಿಸಿ, ಕಾಂಗ್ರೆಸ್‌ ಪಕ್ಷ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದೆ. ಈಗ ಪರ್ರಿಕರ್‌ ಅವರ ನಿಧನದ ಕಾರಣ ಕಾಂಗ್ರೆಸ್‌ ವಾದಕ್ಕೆ ಮತ್ತಷ್ಟು ಪ್ರಬಲ ಕಾರಣ ಸಿಗುವ ಸಾಧ್ಯತೆ ಇದೆ.

Also read: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ ಪಾರಿಕರ್!! ಇವರ ಕಾರ್ಯಕ್ಷಮತೆ ಮೆಚ್ಚಲೇಬೇಕು…